Shashi Tharoor : ಮಹಿಳಾ ಸಂಸದರೊಂದಿಗೆ ಶಶಿ ತರೂರ್ ಸೆಲ್ಫಿ : ಟ್ವಿಟ್ಟರ್ ನಲ್ಲಿ ಫೋಟೋ ವೈರಲ್

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಶಶಿ ತರೂರ್ ಅವರು ಸಂಸತ್ತಿನ ಸಂಕೀರ್ಣದಿಂದ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಫೋಟೋದೊಂದಿಗೆ ನೀಡಿರುವ ಶೀರ್ಷಿಕೆಗೆ ಶಶಿ ತರೂರ್ ಟ್ರೋಲ್ ಗೆ ಕಾರಣವಾಗಿದೆ.

Written by - Channabasava A Kashinakunti | Last Updated : Nov 29, 2021, 10:06 PM IST
  • ಮಹಿಳಾ ಸಂಸದರೊಂದಿಗಿನ ಫೋಟೋ ಪೋಸ್ಟ್ ಮಾಡಿದ ಶಶಿ ತರೂರ್
  • ಫೋಟೋ ಕ್ಯಾಪ್ಸನ್ ನಿಂದ ಟ್ರೋಲ್ ಆದ ಕಾಂಗ್ರೆಸ್ ಸಂಸದ ತರೂರ್
  • ವೈರಲ್ ಫೋಟೋಗೆ ಪ್ರತಿಕ್ರಿಯಿಸಿದ ಸಂಸದ ತರೂರ್
Shashi Tharoor : ಮಹಿಳಾ ಸಂಸದರೊಂದಿಗೆ ಶಶಿ ತರೂರ್ ಸೆಲ್ಫಿ : ಟ್ವಿಟ್ಟರ್ ನಲ್ಲಿ ಫೋಟೋ ವೈರಲ್ title=

ನವದೆಹಲಿ : ತಮ್ಮ ವಾಗ್ದಾಳಿಯಿಂದ ಆಗಾಗ್ಗೆ ಸುದ್ದಿಯಲ್ಲಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಒಂದು ಫೋಟೋದಿಂದಾಗಿ ಸಧ್ಯ ಸುದ್ದಿಯಲ್ಲಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಶಶಿ ತರೂರ್ ಅವರು ಸಂಸತ್ತಿನ ಸಂಕೀರ್ಣದಿಂದ ಫೋಟೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಫೋಟೋದೊಂದಿಗೆ ನೀಡಿರುವ ಶೀರ್ಷಿಕೆಗೆ ಶಶಿ ತರೂರ್ ಟ್ರೋಲ್ ಗೆ ಕಾರಣವಾಗಿದೆ.

ಫೋಟೋ ಶೀರ್ಷಿಕೆಯೇ ಟ್ರೋಲ್‌ಗೆ ಕಾರಣ

ವೈರಲ್ ಫೋಟೋದಲ್ಲಿ, ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಕೆಲವು ಮಹಿಳಾ ಸಂಸದರೊಂದಿಗೆ ನಿಂತಿರುವುದನ್ನು ಕಾಣಬಹುದು. ಶಶಿ ತರೂರ್ ಈ ಫೋಟೋಗೆ ಶೀರ್ಷಿಕೆಯಲ್ಲಿ, 'ಲೋಕಸಭೆಯು ಕೆಲಸ ಮಾಡಲು ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ? ಇಂದು ಬೆಳಿಗ್ಗೆ ನನ್ನ ಸಹ ಸಂಸದರೊಂದಿಗೆ. ಎಂದು ಬರೆದುಕೊಂಡಿದ್ದಾರೆ. ಈ ಸೆಲ್ಫಿ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ, ಆದರೆ ಜನರು ಶೀರ್ಷಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಶೀರ್ಷಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಶಶಿ ತರೂರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ : Winter Session : ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತು.. ರಾಜ್ಯಸಭೆಯ 12  ವಿಪಕ್ಷ ಸಂಸದರ ಅಮಾನತು

ಮಹಿಳಾ ಸಂಸದರು ನೋಟಕ್ಕೆ ಮಾತ್ರ ಸೀಮಿತವೇ?

ಶಶಿ ತರೂರ್ ಅವರ ಟ್ವೀಟ್ ಕುರಿತು ವಕೀಲೆ ಕರುಣಾ ನಂದಿ(Karuna Nandi) ಎಂಬವವರು, 'ಇದು ಆಶ್ಚರ್ಯಕರವಾಗಿದೆ. ಚುನಾಯಿತ ರಾಜಕಾರಣಿಗಳನ್ನು ಅವರ ನೋಟಕ್ಕೆ ಸೀಮಿತಗೊಳಿಸಲು ಶಶಿ ತರೂರ್ ಪ್ರಯತ್ನಿಸಿದ್ದಾರೆ ಮತ್ತು ಕೇಂದ್ರದಲ್ಲಿ ತಮ್ಮನ್ನು ತಾವು ತೋರಿಸಿಕೊಂಡಿದ್ದಾರೆ. ಇದು 2021 ಹುಡುಗರೇ.' ಎಂದು ಬರೆದುಕೊಂಡಿದ್ದಾರೆ.

ಟ್ರೋಲಿಗರಿಗೆ ಸ್ಪಷ್ಟನೆ ನೀಡಿದ ತರೂರ್

ಸತತ ಟ್ರೋಲ್‌ಗೆ ಗುರಿಯಾಗುವ ಸಂಸದ ಶಶಿ ತರೂರ್(Shashi Tharoor) ತಮ್ಮ ಟ್ವೀಟ್‌ನಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. 'ಸೆಲ್ಫಿಯ ಉದ್ದೇಶವು (ಮಹಿಳಾ ಸಂಸದರ ಅನಿಮ್ಯಾಟಿ ಮೇರೆಗೆ ತೆಗೆದದ್ದು) ಚೆನ್ನಾಗಿದೆ ಮತ್ತು ಅದೇ ಉತ್ಸಾಹದಲ್ಲಿ  ಅವರು ನನ್ನಗೆ ಟ್ವೀಟ್ ಮಾಡಲು ಹೇಳಿದರು, ಕೆಲವರು ತಪ್ಪಾಗಿ ತಿಳಿದುಕೊಳ್ಳುತ್ತಿದ್ದರೆ ಅವರು ಕ್ಷಮಿಸಿ, ಆದರೆ ನಾನು ಈ ಸೌಹಾರ್ದ ವಾತಾವರಣದಲ್ಲಿದ್ದೇನೆ. ಕೆಲಸ ಮಾಡಲು ಇಷ್ಟಪಡುತ್ತೇನೆ, ಅಷ್ಟೆ. ಎಂದು ಬರೆದುಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News