ಸೇನೆಯ ವಿರುದ್ಧ ಸುಳ್ಳು ಆರೋಪ: ಶೆಹ್ಲಾ ರಶೀದ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124-ಎ, 153 ಎ, 153, 504, 505 ರ ಅಡಿಯಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಎಫ್ಐಆರ್ ದಾಖಲಿಸಿದೆ.

Last Updated : Sep 6, 2019, 02:17 PM IST
ಸೇನೆಯ ವಿರುದ್ಧ ಸುಳ್ಳು ಆರೋಪ: ಶೆಹ್ಲಾ ರಶೀದ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು title=

ನವದೆಹಲಿ: ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ನಾಯಕಿ, ಕಾರ್ಯಕರ್ತೆ ಶೆಹ್ಲಾ ರಶೀದ್ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ.

ರಶೀದ್ ವಿರುದ್ಧ ಬಂಧನ ಕೋರಿ ಸುಪ್ರೀಂ ಕೋರ್ಟ್ ವಕೀಲ ಅಲೋಕ್ ಶ್ರೀವಾಸ್ತವ್ ಅವರು ಸಲ್ಲಿಸಿದ್ದ ಕ್ರಿಮಿನಲ್ ದೂರಿನ ಮೇರೆಗೆ ದೇಶದ್ರೋಹಕ್ಕಾಗಿ ರಶೀದ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124-ಎ, 153 ಎ, 153, 504, 505 ರ ಅಡಿಯಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ಎಫ್ಐಆರ್ ದಾಖಲಿಸಿದೆ.

ಹಿಂದಿನ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಶೆಹ್ಲಾ ರಶೀದ್ ಅವರು, ರಾಜ್ಯದ ಪರಿಸ್ಥಿತಿಯ ಬಗ್ಗೆ ಆಧಾರ ರಹಿತ ಮತ್ತು ಮಿಥ್ಯಾರೋಪಗಳ ಸರಣಿಯನ್ನೇ ಮಂಡಿಸಿದ್ದರು. 

ಸಶಸ್ತ್ರ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಜನರ ಮನೆಗಳನ್ನು ದರೋಡೆ ಮಾಡುತ್ತಿವೆ. ನಾಲ್ಕು ಜನರನ್ನು ಸೇನಾ ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ಶೋಪಿಯಾನ್‌ನಲ್ಲಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಶೆಹ್ಲಾ ಆರೋಪಿಸಿದ್ದರು. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿದ್ದ ಶೆಹ್ಲಾ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಗೆ ಕಾನೂನು ಮತ್ತು ಸುವ್ಯವಸ್ಥೆ ಹೊಂದಿಲ್ಲ ಎಂದು ಅಲ್ಲಿನ ಜನರು ಟೀಕಿಸುತ್ತಿರುವುದಾಗಿ ಹೇಳಿದ್ದರು. 

ಈ ಸಂಬಂಧ ಶೆಹ್ಲಾ ರಶೀದ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿದಲಾಗಿದೆ. 

Trending News