ನವದೆಹಲಿ: 2014 ಕ್ಕೆ ಹೋಲಿಸಿದರೆ 2019 ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಪಡೆದಿದ್ದರೂ ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ ಬಳಿ ರಿಮೋಟ್ ಕಂಟ್ರೋಲ್ ಪವರ್ ಇದೆ ಎಂದು ಶಿವಸೇನೆ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ರಾಜ್ಯದ ಮೊದಲ ಶಿವಸೇನಾ ಸೇನಾ-ಬಿಜೆಪಿ ಸರ್ಕಾರದ ಅವಧಿಯಲ್ಲಿ,1995 ರಿಂದ 1999 ರ ನಡುವೆ, ರಿಮೋಟ್ ಕಂಟ್ರೋಲ್ ಎಂಬ ಪದವನ್ನು ನಿಯಮಿತವಾಗಿ ಬಳಸಲಾಗುತ್ತಿತ್ತು ಮತ್ತು ಪಕ್ಷದ ಪಿತಾಮಹ ಬಾಳ್ ಠಾಕ್ರೆ ಈ ಹಿಂದೆ ನಿರಂತರವಾಗಿ ಬಳಸುತ್ತಿದ್ದರು.
व्यंग चित्रकाराची कमाल!
बुरा न मानो दिवाली है.. pic.twitter.com/krj2QAnGmB— Sanjay Raut (@rautsanjay61) October 25, 2019
ಈಗ ಇದೆ ವಿಚಾರವನ್ನು ಶಿವಸೇನಾ ನಾಯಕ ಸಂಜಯ ರೌತ್ ಸಾಮ್ನಾಗೆ ಬರೆದ ಅಂಕಣದಲ್ಲಿ ಮತ್ತೆ ಮುನ್ನಲೆಗೆ ತಂದಿದ್ದಾರೆ. ಕಳೆದ ಚುನಾವಣೆಗಿಂತ ಕಳಪೆ ಪ್ರದರ್ಶನ ನೀಡಿದ ನಂತರ ಈಗ ಶಿವಸೇನೆ ಬಿಜೆಪಿ 50:50 ಸೂತ್ರವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಸ್ತಾಪಿಸುತ್ತಿದೆ. ಈ ವಿಚಾರ ಈಗ ಶಿವಸೇನೆ ಮತ್ತು ಬಿಜೆಪಿ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಶಿವಸೇನಾ ಅಧಿಕಾರ ಸಮಾನ ಹಂಚಿಕೆ ಕುರಿತಾಗಿ ಲಿಖಿತ ಭರವಸೆ ನೀಡುವ ಬೇಡಿಕೆಯನ್ನು ಮುಂದಿಟ್ಟಿದೆ. ಅದಕ್ಕನುಗುಣವಾಗಿ ಮುಖ್ಯಮಂತ್ರಿ ಕಾಲಾವಧಿಯನ್ನು ಎರಡು ಪಕ್ಷಗಳ ನಡುವೆ 2.5 ವರ್ಷಗಳಂತೆ ಹಂಚಬೇಕೆಂದು ಶಿವಸೇನಾ ಒತ್ತಡ ಹಾಕುತ್ತಿದೆ. ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಸಂಜಯ ರೌತ್ ಅವರು 'ಶಿವಸೇನಾ 2014 ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಸ್ಥಾನಗಳನ್ನು ಗೆದ್ದಿದೆ, ಆದರೆ ಇದು ರಿಮೋಟ್ ಕಂಟ್ರೋಲ್ ಪವರ್ ನ್ನು ಹೊಂದಿದೆ' ಎಂದು ಹೇಳಿದ್ದಾರೆ.