ಶೀಘ್ರದಲ್ಲಿಯೇ ಅತಿ ಕಡಿಮೆ ಬೆಲೆಗೆ iPhone! ಬೆಲೆ ಕೇಳಿ ನೀವೂ ದಂಗಾಗುವಿರಿ

ವಿಶ್ವದಲ್ಲಿಯೇ ದುಬಾರಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ವಿಶ್ವದ ಖ್ಯಾತ ಮೊಬೈಲ್ ತಯಾರಕ ಕಂಪನಿ ಆಪಲ್ (Apple), ಇದೀಗ ಅತ್ಯಂತ ಅಗ್ಗದ ಬೆಲೆಯ iPhone ಲಾಂಚ್ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.

Updated: Jan 22, 2020 , 08:36 PM IST
ಶೀಘ್ರದಲ್ಲಿಯೇ ಅತಿ ಕಡಿಮೆ ಬೆಲೆಗೆ iPhone! ಬೆಲೆ ಕೇಳಿ ನೀವೂ ದಂಗಾಗುವಿರಿ

ನವದೆಹಲಿ: ಅಗ್ಗದ ಬೆಲೆಯಲ್ಲಿ iPhone ಸಿಗುವುದು ಒಂದು ಕನಸಿನ ಮಾತು. ಆದರೆ, ಈ ಕನಸು ಶೀಘ್ರದಲ್ಲಿಯೇ ನನಸಾಗಲಿದೆ ಎಂದು ಹೇಳಿದರೆ ನೀವು ನಂಬುತ್ತೀರಾ? ಹೌದು, ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ಕಂಪನಿ ಆಪಲ್, ಶೀಘ್ರದಲ್ಲಿಯೇ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಹೊಸ ಫೋನ್ ಗಳ ತಯಾರಿಕೆ ಫೆಬ್ರುವರಿ ತಿಂಗಳಲ್ಲಿ ಆರಂಭಗೊಳ್ಳಲಿದೆ ಎನ್ನಲಾಗಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಚೀನಾದ ಹಲವು ಫೋನ್ ಗಳಿಗಿಂತಲೂ ಕೂಡ ಇವುಗಳ ಬೆಲೆ ಕಮ್ಮಿ ಇರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ಮೊಬೈಲ್ ನ ಹೆಸರು ಮತ್ತು ವೈಶಿಷ್ಟ್ಯಗಳು
ವಿವಿಧ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಆಪಲ್ ಶೀಘ್ರದಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳ ತಯಾರಿಕೆ ಆರಂಭಿಸಲಿದೆ ಎನ್ನಲಾಗಿದೆ. ಈ ನೂತನ ಫೋನ್ ಗಳು 4.7 ಇಂಚಿನ LED ಡಿಸ್ಪ್ಲೇ ಪರದೆ ಹೊಂದಿರಲಿದ್ದು, ಟಚ್ ಐಡಿ ಹೋಂ ಬಟನ್ ಕೂಡ ಹೊಂದಿರಲಿವೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಹೊಸ ಫೋನ್ ಗಳಲ್ಲಿ A13 ಚಿಪ್ ಸೆಟ್ ಇರಲಿದ್ದು, 3ಜಿಬಿ RAM ಕೂಡ ಹೊಂದಿರಲಿವೆ. ಈ ಹೊಸ ಹ್ಯಾಂಡ್ ಸೆಟ್ ಗಳಿಗೆ iPhone 9 ಎಂದು ಹೆಸರಿಸಲಾಗಿದ್ದು,  iPhone 8 ಮತ್ತು iPhone 10 ರ ಬಳಿಕ iPhone 11 ಬಿಡುಗಡೆಯಾಗಿರುವುದು ಇದರ ಹಿಂದಿನ ಕಾರಣ ಎಂದು ಹೇಳಲಾಗಿದೆ. ಸಂಸ್ಥೆ ಇದುವರೆಗೆ iPhon 9 ಆವೃತ್ತಿಯನ್ನು ಬಿಡುಗಡೆಗೊಳಿಸಿಲ್ಲ.

ಈ ನೂತನ ಐಫೋನ್ ಗಳ ಬೆಲೆ ಎಷ್ಟಿರಲಿದೆ?
ಇದುವರೆಗೆ ಆಪಲ್ ಬಿಡುಗಡೆಗೊಳಿಸಿರುವ ಹ್ಯಾಂಡ್ ಸೆಟ್ ಗಳು ತುಂಬಾ ದುಬಾರಿಯಾಗಿವೆ. ಹೀಗಾಗಿ ಪ್ರತಿಯೊಬ್ಬ ಮೊಬೈಲ್ ಬಳಕೆದಾರರು ಆಪಲ್ ಫೋನ್ ಗಳನ್ನು ಖರೀದಿಸುವಲ್ಲಿ ಅಸಮರ್ಥತೆಯನ್ನು ಹೊರಹಾಕುತ್ತಾರೆ. ಇದೇ ಕಾರಣದಿಂದ ಕಂಪನಿ ಈ ಬಾರಿ ಅತ್ಯಂತ ಅಗ್ಗದ ದರದ ಫೋನ್ ಲಾಂಚ್ ಮಾಡುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಫೋನ್ ಗಳು ಸದ್ಯ ಮಾರುಕಟ್ಟೆಯಲ್ಲಿರುವ iPhone ಗಳಿಗಿಂತ ಮೂರು ಪಟ್ಟು ಅಗ್ಗದ ಬೆಲೆಯಲ್ಲಿ ಸಿಗಲಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಂತಹ ದೇಶದಲ್ಲಿ ಈ ಹೊಸ iPhone ಗಳ ಬೆಲೆ 30 ಸಾವಿರಕ್ಕಿಂತ ಕಡಿಮೆ ಇರುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.

ಆಪಲ್ ಯಾಕೆ ಈ ಕೆಲಸಕ್ಕೆ ಮುಂದಾಗಿದೆ?
ಈ ಕುರಿತು ಮಾಹಿತಿ ನೀಡಿರುವ ಮೊಬೈಲ್ ಮಾರುಕಟ್ಟೆ ತಜ್ಞರು, ಕಂಪನಿ ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಹೆಚ್ಚಿನ ಹಾನಿ ಎಂದುರಿಸುತ್ತಿರುವುದೇ ಇದರ ಹಿಂದಿನ ಕಾರಣ ಎಂದಿದ್ದಾರೆ. ಹೆಚ್ಚಿನ ಬೆಲೆ ಹೊಂದಿರುವ ಕಾರಣ ವಿಶ್ವಾದ್ಯಂತ ಅತಿ ಕಡಿಮೆ ಪ್ರಮಾಣದ iPhoneಗಳು ಮಾರಾಟವಾಗುತ್ತಿವೆ. ಈ ಹಿನ್ನೆಲೆ ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಮಾರಾಟ ಮಾಡಿ, ಹೆಚ್ಚು ಲಾಭ ಗಳಿಸುತ್ತಿವೆ. ಸ್ವಲ್ಪ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳ ಮಾರಾಟದ ಮೂಲಕ ಮೊಬೈಲ್ ಮಾರುಕಟ್ಟೆಯ ಮೇಲೆ ಮತ್ತೆ ಹಿಡಿತ ಸಾಧಿಸುವುದು ಕಂಪನಿಯ ಉದ್ದೇಶವಾಗಿದೆ.