India-China Border: ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾ! ಹಲವು ಯೋಧರಿಗೆ ಗಾಯ

ವಾರದ ಹಿಂದೆ ಚೀನಾ ಸೈನಿಕರು ಸಿಕ್ಕಿಂನಲ್ಲಿ ಭಾರತದ ಪ್ರಾಂತ್ಯ ಪ್ರವೇಶಿಸಲು ಪ್ರಯತ್ನಿಸಿದ್ದು ಸಣ್ಣ ಪ್ರಮಾಣದ ಮುಖಾಮುಖಿ ನಡೆದಿತ್ತು ಎಂದು ಭಾರತೀ ಸೇನೆ ಸೋಮವಾರದಂದು ತಿಳಿಸಿದೆ.

Last Updated : Jan 25, 2021, 04:09 PM IST
  • ಕೆಲ ತಿಂಗಳ ಹಿಂದೆ ಲಡಾಕ್​ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಕ್ಯಾತೆ ತೆಗೆದಿದ್ದ ಚೀನಾ ಸೇನೆ ಇದೀಗ ಮತ್ತೊಮ್ಮೆ ಕ್ಯಾತೆ ತೆಗೆದಿದೆ.
  • ವಾರದ ಹಿಂದೆ ಚೀನಾ ಸೈನಿಕರು ಸಿಕ್ಕಿಂನಲ್ಲಿ ಭಾರತದ ಪ್ರಾಂತ್ಯ ಪ್ರವೇಶಿಸಲು ಪ್ರಯತ್ನಿಸಿದ್ದು ಸಣ್ಣ ಪ್ರಮಾಣದ ಮುಖಾಮುಖಿ ನಡೆದಿತ್ತು ಎಂದು ಭಾರತೀ ಸೇನೆ ಸೋಮವಾರದಂದು ತಿಳಿಸಿದೆ.
  • ಜನವರಿ 20ರಂದು ಸಿಕ್ಕಿಂ ಸೆಕ್ಟರ್​ನ ನಕು ಲಾ ಪ್ರದೇಶದಲ್ಲಿ ಮುಖಾಮುಖಿ ನಡೆದಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು ಭಾರತದ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ್ದರಿಂದಾಗಿ ಮುಖಾಮುಖಿ ನಡೆದಿದೆ.
India-China Border: ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾ! ಹಲವು ಯೋಧರಿಗೆ ಗಾಯ title=

ಗ್ಯಾಂಗ್ಟಾಕ್: ಕೆಲ ತಿಂಗಳ ಹಿಂದೆ ಲಡಾಕ್​ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಕ್ಯಾತೆ ತೆಗೆದಿದ್ದ ಚೀನಾ ಸೇನೆ ಇದೀಗ ಮತ್ತೊಮ್ಮೆ ಕ್ಯಾತೆ ತೆಗೆದಿದೆ. ವಾರದ ಹಿಂದೆ ಚೀನಾ ಸೈನಿಕರು ಸಿಕ್ಕಿಂನಲ್ಲಿ ಭಾರತದ ಪ್ರಾಂತ್ಯ ಪ್ರವೇಶಿಸಲು ಪ್ರಯತ್ನಿಸಿದ್ದು ಸಣ್ಣ ಪ್ರಮಾಣದ ಮುಖಾಮುಖಿ ನಡೆದಿತ್ತು ಎಂದು ಭಾರತೀ ಸೇನೆ ಸೋಮವಾರದಂದು ತಿಳಿಸಿದೆ.

ಜನವರಿ 20ರಂದು ಸಿಕ್ಕಿಂ ಸೆಕ್ಟರ್​ನ ನಕು ಲಾ ಪ್ರದೇಶದಲ್ಲಿ ಮುಖಾಮುಖಿ ನಡೆದಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಸೈನಿಕರು ಭಾರತದ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ್ದರಿಂದಾಗಿ ಮುಖಾಮುಖಿ ನಡೆದಿದೆ. ಅಲ್ಲಿನ ಸ್ಥಳೀಯ ಕಮಾಂಡರ್​ಗಳು ಸಮಸ್ಯೆಯನ್ನು ಪರಿಹರಿಸಿದ್ದಾರೆ ಎಂದು ಸೇನೆ ತಿಳಿಸಿದೆ. ಮುಖಾಮುಖಿಯಲ್ಲಿ ಸಣ್ಣ ಪ್ರಮಾಣದ ಹಾನಿಯುಂಟಾಗಿದೆ. ಭಾರತೀಯ ಸೇನೆ(Indian soldier)ಯ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಚೀನಾದ ಸೇನೆಯಲ್ಲಿ ಉಂಟಾದ ಹಾನಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸುಮಾರು 20 ಚೀನೀ ಸೈನಿಕರಿಗೆ ಗಾಯಾಳುಗಳಾಗಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

PM Kisan Yojana: ಭೂರಹಿತ ರೈತರಿಗೂ ಸಿಗಲಿದೆ ಈ ಸೌಲಭ್ಯ

19,000 ಅಡಿ ಎತ್ತರದಲ್ಲಿರುವ ನಕು ಲಾ ಪಾಸ್, ಸಿಕ್ಕಿಂ ಅನ್ನು ಚೀನಾದ ಟಿಬೆಟ್ ಪ್ರದೇಶಕ್ಕೆ ಸಂಪರ್ಕಿಸುತ್ತದೆ ಮತ್ತು ಇದು ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ.

Bullet Train : ನೀರೊಳಗಿನ ಸುರಂಗ ನಿರ್ಮಾಣಕ್ಕೆ ಆಸಕ್ತಿ ತೋರಿದ ಭಾರತೀಯ ಕಂಪನಿಗಳು!

ಈ ಹಿಂದೆ 2020ರ ಮೇ ತಿಂಗಳಲ್ಲಿ ಲಡಾಕ್​ನಲ್ಲಿ ಚೀನಾ ಮತ್ತು ಭಾರತೀಯ ಸೇನೆಯ ನಡುವೆ ಮುಖಾಮುಖಿ ನಡೆದಿತ್ತು. ಅಂದಿನಿಂದ ಒಂದು ರೀತಿಯ ಬಿಕ್ಕಟ್ಟು ಉಭಯ ದೇಶಗಳು ನಡುವೆ ಉಂಟಾಗಿದೆ.

National Voters Day - 2021: ಇನ್ಮುಂದೆ ನೀವು ಮತದಾನಕ್ಕಾಗಿ ನಿಮ್ಮ ಊರಿಗೆ ಹೋಗಬೇಕಾಗಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News