ಸಿಕ್ಸ್ ಪ್ಯಾಕ್ ಬಾಡಿ, ಫಟಾಫಟ್ 15 ಪುಶ್ ಅಪ್ಸ್ : ಇಲ್ಲಿದೆ ರಾಹುಲ್ ಗಾಂಧಿ ಫಿಟ್ನೆಸ್ ವಿಡಿಯೋ

ತಮಿಳುನಾಡಿನಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ವಿದ್ಯಾರ್ಥಿಯೊಬ್ಬರು ರಾಹುಲ್ ಗಾಂಧಿಗೆ ಪುಷ್ ಅಪ್ ಚಾಲೆಂಜ್ ನೀಡಿದ್ದಾರೆ. ವಿದ್ಯಾರ್ಥಿ ನೀಡಿದ ಸವಾಲನ್ನು ಸ್ವೀಕರಿಸಿದ ರಾಹುಲ್ ಗಾಂಧಿ ಸರಾಗವಾಗಿ ಪುಷ್ ಅಪ್ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. 

Written by - Ranjitha R K | Last Updated : Mar 1, 2021, 07:32 PM IST
  • ಪುಷ್ ಅಪ್ ಮಾಡಿ ವಿದ್ಯಾರ್ಥಿಗಳ ಮನಗೆದ್ದ ರಾಹುಲ್ ಗಾಂಧಿ
  • ರಾಹುಲ್ ಗಾಂಧಿ ಫಿಟ್ನೆಸ್ ಗೆ ನೆಟ್ಟಿಗರು ಫಿದಾ
  • ವೈರಲ್ ಆಗುತ್ತಿದೆ ರಾಹುಲ್ ಗಾಂಧಿ ಪುಷ್ ಅಪ್ ವಿಡಿಯೋ
ಸಿಕ್ಸ್ ಪ್ಯಾಕ್ ಬಾಡಿ, ಫಟಾಫಟ್ 15 ಪುಶ್ ಅಪ್ಸ್ : ಇಲ್ಲಿದೆ ರಾಹುಲ್ ಗಾಂಧಿ ಫಿಟ್ನೆಸ್ ವಿಡಿಯೋ  title=
ಪುಷ್ ಅಪ್ ಮಾಡಿ ವಿದ್ಯಾರ್ಥಿಗಳ ಮನಗೆದ್ದ ರಾಹುಲ್ ಗಾಂಧಿ (Photo ANI twitter)

ತಮಿಳುನಾಡು : ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಚುನಾವಣೆ (Election) ಘೋಷಣೆಯಾಗಿದೆ. ರಾಹುಲ್ ಗಾಂಧಿ (Rahul Gandhi) ಈ ರಾಜ್ಯಗಳಲ್ಲಿ ಫುಲ್ ಪ್ರಚಾರಕ್ಕಿಳಿದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ  ಕೇರಳದ ಕೊಚ್ಚಿಯಲ್ಲಿ ಮೀನುಗಾರರೊಂದಿಗೆ ದೋಣಿಯಲ್ಲಿ ತೆರಳಿದ್ದ ರಾಹುಲ್ ಗಾಂಧಿ, ಸಮುದ್ರಕ್ಕೆ ಧುಮುಕಿ ಈಜಾಡಿ ಸುದ್ದಿಯಾಗಿದ್ದರು.  ಇದೀಗ ವೇಗವಾಗಿ ಪುಷ್‌ ಅಪ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. 

ತಮಿಳುನಾಡಿನಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ವಿದ್ಯಾರ್ಥಿಯೊಬ್ಬರು ರಾಹುಲ್ ಗಾಂಧಿಗೆ (Rahul Gandhi) ಪುಷ್ ಅಪ್ ಚಾಲೆಂಜ್ ನೀಡಿದ್ದಾರೆ. ವಿದ್ಯಾರ್ಥಿ ನೀಡಿದ ಸವಾಲನ್ನು ಸ್ವೀಕರಿಸಿದ ರಾಹುಲ್ ಗಾಂಧಿ ಸರಾಗವಾಗಿ ಪುಷ್ ಅಪ್ (Pushup) ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಫಿಟ್ನೆಸ್ (Fitness) ಸಾಬೀತುಪಡಿಸಿದ್ದಾರೆ. 

 

ಇದನ್ನೂ ಓದಿ : ಮೀನುಗಾರರೊಂದಿಗೆ ಸಮುದ್ರಕ್ಕೆ ಧುಮುಕಿದ Rahul Gandhi : ವಿಡಿಯೋ ವೈರಲ್
ಅಲ್ಲದೆ, ವಿದ್ಯಾರ್ಥಿಗಳೊಂದಿಗೆ ಹಾಡಿಗೆ ಹೆಜ್ಜೆ ಹಾಕುವ ಮೂಲಕವೂ ಗಮನ ಸೆಳೆದಿದ್ದಾರೆ. ಈ ವೇಳೆ, ಎಐಸಿಸಿ (AICC) ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡೂರಾವ್ (DInesh Gundu Rao) ಕೂಡಾ ಡ್ಯಾನ್ಸ್ ಮಾಡಿದ್ದಾರೆ.

 

ಇದನ್ನೂ ಓದಿ : Mansi Sehgal: APP ಪಾರ್ಟಿ ಸೇರಿದ ಮಿಸ್ ಇಂಡಿಯಾ ದೆಹಲಿ..!

ಕೊಚ್ಚಿಯಲ್ಲಿ ಮೀನುಗಾರರ (Fisherman) ಜೊತೆ ದೋಣಿಯಲ್ಲಿ ತೆರಳಿದ್ದ ರಾಹುಲ್ ಗಾಂಧಿ, ಸಮುದ್ರಕ್ಕೆ ಧುಮುಕಿ, ಸಮುದ್ರದಲ್ಲಿ ಈಜಿ (Swimming) ಎಲ್ಲರ ಗಮನ ಸೆಳೆದಿದ್ದರು. ಇದಾದ ನಂತರ  ವಿಡಿಯೋ ಫೋಟೋ ವೈರಲ್ ಆಗಿತ್ತು. ರಾಹುಲ್ ಗಾಂಧಿ ಸಿಕ್ಸ್  ಪ್ಯಾಕ್ (Six pack), ಫಿಟ್ನೆಸ್ ಕೂಡಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೆ ರಾಹುಲ್ ಫಿಟ್ ನೆಸ್ ಸಿಕ್ರೇಟ್ ಬಗ್ಗೆ ಬಾಲಿವುಡ್ ಮಂದಿಯೂ ಪ್ರಶ್ನೆಗಳ ಸುರಿಮಳೆಗೈದಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News