ಇಂದಿನಿಂದ ವಿಶೇಷ ರೈಲು ಸಂಚಾರ ಆರಂಭ, ಪ್ರಯಾಣ ಕೈಗೊಳ್ಳುವ ಮೊದಲು ಈ 10 ವಿಷಯಗಳನ್ನು ನೆನಪಿನಲ್ಲಿಡಿ

ಇಂದಿನಿಂದ 15 ಮಾರ್ಗಗಳಲ್ಲಿ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ.

Last Updated : May 12, 2020, 09:45 AM IST
ಇಂದಿನಿಂದ ವಿಶೇಷ ರೈಲು ಸಂಚಾರ ಆರಂಭ,  ಪ್ರಯಾಣ ಕೈಗೊಳ್ಳುವ ಮೊದಲು  ಈ 10 ವಿಷಯಗಳನ್ನು ನೆನಪಿನಲ್ಲಿಡಿ  title=

ನವದೆಹಲಿ: ಕೊರೊನಾವೈರಸ್ (Coronavirus)  ಅವಧಿಯಲ್ಲಿ ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಸಮಯದ ಲಾಕ್‌ಡೌನ್ (Lockdown) ‌ ನಂತರ ಆರ್ಥಿಕತೆಯನ್ನು ಮತ್ತೆ ಟ್ರ್ಯಾಕ್‌ಗೆ ತರಲು ಪ್ರಯತ್ನಗಳು ನಿಧಾನವಾಗಿ ಪ್ರಾರಂಭವಾಗಿವೆ. ಈ ಸರಣಿಯಲ್ಲಿ ಭಾರತೀಯ ರೈಲ್ವೆ ಇಂದಿನಿಂದ 15 ಸ್ಥಳಗಳಿಗೆ ರೈಲು ಸೇವೆಯನ್ನು ಪ್ರಾರಂಭಿಸುತ್ತಿದೆ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಉತ್ಸಾಹವಿದೆ. ನೀವೂ ಸಹ ನಿಮ್ಮ ಟಿಕೆಟ್ ಕಾಯ್ದಿರಿಸಿದ್ದರೆ ಮತ್ತು ಪ್ರಯಾಣಿಸಲು ಸಿದ್ಧರಿದ್ದರೆ ಅದಕ್ಕೂ ಮೊದಲು ಈ 10 ವಿಷಯಗಳ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು.

ಇಂದಿನಿಂದ 15 ಮಾರ್ಗಗಳಲ್ಲಿ ಭಾರತೀಯ ರೈಲ್ವೆ (Indian Railway) ವಿಶೇಷ ರೈಲುಗಳನ್ನು ಓಡಿಸಲಿದೆ. ನಿಮಗೆ ಖಚಿತವಾದ ಟಿಕೆಟ್ ಸಿಕ್ಕಿದ್ದರೆ, ನವದೆಹಲಿ ರೈಲ್ವೆ ನಿಲ್ದಾಣದ ಪ್ರಯಾಣಿಕರಿಗೆ ಚೆಲ್ಮ್ಸ್ಫೊಡ್ ರಸ್ತೆಯಲ್ಲಿರುವ ಪಹಾರ್ಗಂಜ್ ಕಡೆಯಿಂದ ಮಾತ್ರ ಪ್ರವೇಶ ನೀಡಲಾಗುವುದು ಎಂಬುದನ್ನು ನೆನಪಿನಲ್ಲಿಡಿ.

ಮೇ 12 ರಿಂದ 20ರವರೆಗಿನ ರೈಲ್ವೆ ವೇಳಾಪಟ್ಟಿ, ರೈಲು ಯಾವ ಯಾವ ನಿಲ್ದಾಣಗಳಲ್ಲಿ ನಿಲ್ಲಲಿದೆ?

ಪ್ರಯಾಣಿಕರು ನೆನಪಿನಲ್ಲಿಡಬೇಕಾದ 10 ವಿಷಯಗಳು:
1. ರೈಲು ಹೊರಡುವ 90 ನಿಮಿಷಗಳ ಮೊದಲು ರೈಲ್ವೆ ನಿಲ್ದಾಣವನ್ನು ತಲುಪಿ
2. ದೃಢಪಡಿಸಿದ ಟಿಕೆಟ್ ಹೊಂದಿರುವವರು ಮಾತ್ರ ನಿಲ್ದಾಣಕ್ಕೆ ಪ್ರವೇಶ ಪಡೆಯುತ್ತಾರೆ.
3. ಪ್ರಯಾಣಿಕರಿಗೆ ಫೇಸ್ ಕವರ್ ಮತ್ತು ಸ್ಕ್ರೀನಿಂಗ್ ಅಗತ್ಯವಿದೆ
4. ಉಷ್ಣ ಪರೀಕ್ಷೆಯ ನಂತರವೇ ಪ್ರಯಾಣಿಸಲು ಸಾಧ್ಯವಾಗುತ್ತದೆ
5. ಸೋಂಕಿನ ಚಿಹ್ನೆಗಳು ಕಂಡುಬಂದಲ್ಲಿ ಪ್ರಯಾಣವನ್ನು ಅನುಮತಿಸಲಾಗುವುದಿಲ್ಲ.
6. ಪ್ರಯಾಣಿಕರು ಆಹಾರ, ನೀರು ಮತ್ತು ಬೆಡ್‌ಶೀಟ್‌ಗಳನ್ನುತಾವೇ ಕೊಂಡೊಯ್ಯಬೇಕು.
7. ಪ್ಯಾಕೇಜ್ ಮಾಡಿದ ಆಹಾರಕ್ಕಾಗಿ ಪಾವತಿಸಬೇಕಾಗುತ್ತದೆ.
8. ವಿಶೇಷ ರೈಲುಗಳಲ್ಲಿ ರೈಲ್ವೆ ಕವರ್ ಶೀಟ್ ಮತ್ತು ಕಂಬಳಿ ನೀಡುವುದಿಲ್ಲ.
9. ಆರೋಗ್ಯ ಸೇತು ಆ್ಯಪ್ ಬಳಸಲು ಪ್ರಯಾಣಿಕರಿಗೆ ಸಲಹೆ.
10. ನವದೆಹಲಿ ನಿಲ್ದಾಣಕ್ಕೆ ಪ್ರವೇಶ ಪಹಗಂಜ್ ನಿಂದ ಇರುತ್ತದೆ.

Trending News