ಮುಂಬೈ: ಜೈಪುರದಿಂದ ಬರುತ್ತಿದ್ದ ಸ್ಪೈಸ್‌ಜೆಟ್ ವಿಮಾನವು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಓವರ್‌ಶಾಟ್ ಆಗಿ ಅಪಘಾತಕ್ಕೀಡಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಎಸ್‌ಜಿ -6237 ಎಂಬ ಬೋಯಿಂಗ್ ವಿಮಾನವೊಂದು ರಾತ್ರಿ 11.51 ರ ಸುಮಾರಿಗೆ ಇಲ್ಲಿಗೆ ಬಂದಿಳಿದಿದ್ದು, ಈ ವೇಳೆ ಅಪಘಾತಕ್ಕೀಡಾಗಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರನ್ನು ಸ್ಥಳಾಂತರಿಸಲು ಸಹಾಯ ಮಾಡಿದರು ಮತ್ತು ಎಂಜಿನಿಯರ್‌ಗಳ ತಂಡವು ವಿಮಾನದಿಂದ ಉಂಟಾದ ಹಾನಿಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Mumbai Airport PRO: SpiceJet SG 6237 Jaipur-Mumbai flight overshot runway yesterday while landing at Mumbai Airport. All passengers are safe, no injuries reported. #Maharashtra pic.twitter.com/hEULogZHr4
— ANI (@ANI) July 2, 2019
ಕೆಲವು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಮಾಹಿತಿಯ ಪ್ರಕಾರ, ಅಪಘಾತದ ನಂತರ, ವಿಮಾನ ನಿಲ್ದಾಣದ ಮುಖ್ಯ ರನ್ ವೇ ಮುಚ್ಚಲಾಗಿದ್ದು, ಎರಡನೇ ರನ್‌ವೇಯಿಂದ ವಿಮಾನ ಹಾರಾಟ ಕಾರ್ಯಾಚರಣೆ ನಡೆಯುತ್ತಿದೆ. ಈ ಅಪಘಾತದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ, ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಪ್ರಯಾಣಿಕರು ತೆಗೆದ ಛಾಯಾಚಿತ್ರಗಳಲ್ಲಿ ಹಳದಿ ಆಮ್ಲಜನಕದ ಮುಖವಾಡಗಳು ಆಸನಗಳ ಮೇಲೆ ನೇತಾಡುತ್ತಿರುವುದನ್ನು ಕಾಣಬಹುದು ಮತ್ತು ಪ್ರಯಾಣಿಕರು ಸ್ಪೈಸ್ ಜೆಟ್ ವಿಮಾನ ಎಸ್‌ಜಿ 6237 ನಿಂದ ಹೊರಬರಲು ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದು.
ಕೆಲವು ಅಂತರರಾಷ್ಟ್ರೀಯ ವಿಮಾನಗಳನ್ನು ಬೆಂಗಳೂರು ಮತ್ತು ಅಹಮದಾಬಾದ್‌ನಂತಹ ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.