ಪುರುಷ ಪ್ರಾಬಲ್ಯದಲ್ಲಿ ಗೆದ್ದು ಬಂದ ವಿದ್ಯಾರ್ಥಿನಿಯಿಂದ ಆರ್,ಎಸ್,ಎಸ್ ಗೆ ವಾರ್ನಿಂಗ್ !

ಇದೇ ಮೊದಲ ಬಾರಿಗೆ ಪುರುಷರ ಪ್ರಾಬಲ್ಯವನ್ನು ಮೆಟ್ಟಿ ನಿಂತುವಿವಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿರುವ ಕಾನುಪ್ರಿಯಾಗೆ ಹೊಸ ಸವಾಲೊಂದು ಎದುರಾಗಿದೆ.

Updated: Sep 12, 2018 , 01:37 PM IST
ಪುರುಷ ಪ್ರಾಬಲ್ಯದಲ್ಲಿ ಗೆದ್ದು ಬಂದ ವಿದ್ಯಾರ್ಥಿನಿಯಿಂದ ಆರ್,ಎಸ್,ಎಸ್ ಗೆ ವಾರ್ನಿಂಗ್ !
Photo:facebook

ನವದೆಹಲಿ: ಇದೇ ಮೊದಲ ಬಾರಿಗೆ ಪುರುಷರ ಪ್ರಾಬಲ್ಯವನ್ನು ಮೆಟ್ಟಿ ನಿಂತುವಿವಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿರುವ ಕಾನುಪ್ರಿಯಾಗೆ ಹೊಸ ಸವಾಲೊಂದು ಎದುರಾಗಿದೆ.

22 ವರ್ಷದ ಕಾನುಪ್ರಿಯಾ ಎಡ ವಿಚಾರಧಾರೆಯನ್ನು ಹೊಂದಿರುವ ಸ್ಟೂಡೆಂಟ್ ಫಾರ್ ಸೊಸೈಟಿ ಎನ್ನುವ ಸಂಘಟನೆಯ ಮೂಲಕ ಗೆಲುವನ್ನು ಸಾಧಿಸಿದ್ದಾಳೆ.ಈಗ ಮಾತಾ ಗುಜರಿ ಗರ್ಲ್ಸ್ ಹಾಸ್ಟೆಲ್-1 ವಿದ್ಯಾರ್ಥಿನಿಯರಿಗೆ ನೀಡಿರುವ ನೋಟಿಸ್ ನ್ನು ಎದುರಿಸಬೇಕಾಗಿದೆ.ಈ ನೋಟಿಸ್ ನಲ್ಲಿ ವಿದ್ಯಾರ್ಥಿನಿಯರು ರೂಮ್ ಗಳಲ್ಲಿ ಇರಬೇಕಾದರೆ ಊಟದ ಕೋಣೆಯಲ್ಲಿರಬೇಕಾದರೆ ಅಥವಾ ಹಾಸ್ಟೆಲ್ ನ ಯಾವುದೇ ಕಾರ್ಯಕ್ರಮದಲ್ಲಿ ಇರಬೇಕಾದರೆ ಸರಿಯಾದ ಬಟ್ಟೆಯನ್ನು ಧರಿಸಬೇಕು ಎಂದು ಹೇಳಲಾಗಿದೆ.

ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದ್ದೇ ಆದಲ್ಲಿ ಅಂತವರಿಗೆ ತಂಡ ವಿಧಿಸಲಾಗುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ .ಈ ವಿಷಯವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾನುಪ್ರಿಯಾ ವಾರ್ಡನ್ ನೀಡಿದ ನೋಟಿಸ್ ಅನ್ನು ಹಿಂತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು.

ಕಾನುಪ್ರಿಯಾ ಚುನಾವಣೆಯಲ್ಲಿ ಗೆದ್ದ ತಕ್ಷಣ ಮಾತನಾಡುತ್ತಾ " ಆರ್ ಎಸ್ ಎಸ್- ಬಿಜೆಪಿ ಬೇರೆ ವಿವಿಗಳನ್ನು ಆಳಬಹುದು ಆದರೆ ಪಂಜಾಬ್ ವಿವಿಯನ್ನಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.