ನವದೆಹಲಿ: ಮಹಾರಾಷ್ಟ್ರದಾದ್ಯಂತದ ವಿದ್ಯಾರ್ಥಿಗಳು ಶಾಲೆಗಳಲ್ಲಿ ಜನವರಿ 26 ರಿಂದ ಬೆಳಿಗಿನ ಸಭೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದುವುದನ್ನು ಕಡ್ಡಾಯಗೊಳಿಸಲಾತ್ತದೆ ಎಂದು ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್ ಮಂಗಳವಾರ ಹೇಳಿದ್ದಾರೆ.
ಮುನ್ನುಡಿಯನ್ನು ಓದುವುದು 'ಸಂವಿಧಾನದ ಸಾರ್ವಭೌಮತ್ವ, ಎಲ್ಲರ ಕಲ್ಯಾಣ" ಅಭಿಯಾನದ ಒಂದು ಭಾಗವಾಗಿದೆ ಎಂದು ರಾಜ್ಯ ಸರ್ಕಾರದ ಸುತ್ತೋಲೆ ತಿಳಿಸಿದೆ.'ವಿದ್ಯಾರ್ಥಿಗಳು ಸಂವಿಧಾನದ ಮುನ್ನುಡಿಯನ್ನು ಅದರ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುತ್ತಾರೆ. ಅದು ಹಳೆಯ ಸುತ್ತೋಲೆಯಲ್ಲಿರುವ ಅಂಶ .ಆದರೆ ನಾವು ಅದನ್ನು ಜನವರಿ 26 ರಿಂದ ಜಾರಿಗೆ ತರುತ್ತೇವೆ' ಎಂದು ಸಚಿವರು ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬೆಳಿಗ್ಗೆ ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳು ಪ್ರತಿದಿನ ಪ್ರಸ್ತಾವನೆಯನ್ನು ಓದುತ್ತಾರೆ ಎಂದು ಸಚಿವರು ಹೇಳಿದರು.ಕಾಂಗ್ರೆಸ್-ಎನ್ಸಿಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2013 ರ ಫೆಬ್ರವರಿಯಲ್ಲಿ ಶಾಲಾ ಸಭೆಗಳಲ್ಲಿ ಮುನ್ನುಡಿ ಓದುವ ಬಗ್ಗೆ ಸರ್ಕಾರದ ನಿರ್ಣಯವನ್ನು ಹೊರಡಿಸಲಾಯಿತು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ವಿರುದ್ಧ ಬೃಹತ್ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿರುವ ಸಮಯದಲ್ಲಿ, ಸಂವಿಧಾನದ ಮುನ್ನುಡಿಯನ್ನು ವಿದ್ಯಾರ್ಥಿಗಳನ್ನು ಓದುವಂತೆ ಮಾಡುವ ಕ್ರಮ ಜಾರಿಗೆ ಬಂದಿದೆ.ಮಹಾರಾಷ್ಟ್ರದಲ್ಲಿ ಅಸಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಅವಕಾಶ ನೀಡುವುದಿಲ್ಲ ಎಂದು ಅನೇಕ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.