ಗೌರಿ-ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಸಿಲಿಂಡರ್‌ ಬಿಸಿ: ಸಬ್ಸಿಡಿ ರಹಿತ ಎಲ್​ಪಿಜಿ ಬೆಲೆ ಏರಿಕೆ!

ಸಬ್ಸಿಡಿ ರಹಿತ ಸಿಲಿಂಡರ್‌ಗಳ ದರದಲ್ಲಿ 16 ರೂಪಾಯಿಗಳಷ್ಟು ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಹಿಂದೆ 574.50 ರೂಪಾಯಿಗಳಿದ್ದ 14.5 ಕೆ.ಜಿ. ಸಿಲಿಂಡರ್‌ಗೆ ಈಗ 590 ರೂಪಾಯಿ ಪಾವತಿಸಬೇಕಿದೆ.   

Last Updated : Sep 2, 2019, 09:46 AM IST
ಗೌರಿ-ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಸಿಲಿಂಡರ್‌ ಬಿಸಿ: ಸಬ್ಸಿಡಿ ರಹಿತ ಎಲ್​ಪಿಜಿ ಬೆಲೆ ಏರಿಕೆ! title=

ನವದೆಹಲಿ: ಈಗಾಗಲೇ ಹಲವು ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಸಿಲಿಂಡರ್ ಬಿಸಿ ತಟ್ಟಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡದೆ ನಷ್ಟ ಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಈಗ ಅಡುಗೆ ಅನಿಲ ದರವನ್ನು ಪರಿಷ್ಕರಿಸಿದ್ದು, ಗೌರಿ-ಗಣೇಶ ಹಬ್ಬದ ಮುನ್ನಾ ದಿನ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗಿದೆ.

ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ 15.5 ರೂಪಾಯಿ ಏರಿಕೆಯಾಗಿದೆ. ಸೆ.01ರ ಮಧ್ಯರಾತ್ರಿಯಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಿಳಿಸಿವೆ.

ಸಬ್ಸಿಡಿ ರಹಿತ ಸಿಲಿಂಡರ್‌ಗಳ ದರದಲ್ಲಿ 16 ರೂಪಾಯಿಗಳಷ್ಟು ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಹಿಂದೆ 574.50 ರೂಪಾಯಿಗಳಿದ್ದ 14.5 ಕೆ.ಜಿ. ಸಿಲಿಂಡರ್‌ಗೆ ಈಗ 590 ರೂಪಾಯಿ ಪಾವತಿಸಬೇಕಿದೆ. ಇನ್ನು 19 ಕೆ.ಜಿ. ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆ ನವದೆಹಲಿಯಲ್ಲಿ 1054.50 ರೂಪಾಯಿಗಳಾಗಿದೆ.

ತೈಲ ಕಂಪನಿಗಳು ಮಹಾ ನಗರಗಳಲ್ಲಿ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಿವೆ.

ಆಗಸ್ಟ್ 01ರಂದು ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆಯಾಗಿತ್ತು. ಪ್ರತಿ ಸಿಲಿಂಡರ್ ಬೆಲೆಯಲ್ಲಿ 62.5 ರು ಇಳಿಕೆಯಾಗಿದ್ದು, 637 ರೂ.ನಿಂದ 574.5 ರೂ. ಗೆ ಇಳಿಕೆ ಮಾಡಲಾಗಿತ್ತು. ನವದೆಹಲಿಯಲ್ಲಿ ಸಬ್ಸಿಡಿಯೇತರ, 14.2 ಕೆ.ಜಿಯ ಅಡುಗೆ ಅನಿಲ ಸಿಲಿಂಡರ್ ದರ 574.50 ರೂ.ಗೆ ಇಳಿಕೆಯಾಗಿತ್ತು.
 

Trending News