ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ: ವಿಕ್ರಮ್-ಪ್ರಗ್ಯಾನ್’ಗೆ ಮರುಜೀವ ನೀಡುತ್ತಾ ‘ಶಿವಶಕ್ತಿ’?

Shivshakti Point Sunrise: ಇನ್ನೊಂದೆಡೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾಗಲಿದೆ. ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಸೂರ್ಯನ ಶಾಖದಿಂದ ಶಕ್ತಿಯನ್ನು ಪಡೆದು ಮತ್ತೆ ಕಾರ್ಯ ಪ್ರಾರಂಭಿಸುತ್ತದೆ.

Written by - Bhavishya Shetty | Last Updated : Sep 21, 2023, 11:26 AM IST
    • ಸದ್ಯ ಚಂದ್ರನಲ್ಲಿ ಇರುಳು ಕಳೆದು ಬೆಳಕು ಮೂಡಿದೆ
    • ನಿದ್ರೆಯಲ್ಲಿದ್ದ ಪ್ರಗ್ಯಾನ್ ಹಾಗೂ ವಿಕ್ರಮ್ ಮತ್ತೆ ಕೆಲಸ ಮಾಡುವ ಸಾಧ್ಯತೆ ಇದೆ.
    • ವಿಜ್ಞಾನಿಗಳು ಚಂದ್ರಯಾನ-3ರೊಂದಿಗಿನ ಸಂಪರ್ಕವನ್ನು ಮರು ಸ್ಥಾಪಿಸಲು ಸಿದ್ಧತೆ ಆರಂಭಿಸಿದ್ದಾರೆ
ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ: ವಿಕ್ರಮ್-ಪ್ರಗ್ಯಾನ್’ಗೆ ಮರುಜೀವ ನೀಡುತ್ತಾ ‘ಶಿವಶಕ್ತಿ’? title=
shiv shakti

Shivshakti Point Sunrise: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಒಮ್ಮೆ ಕೆಲಸ ಮಾಡಲು ಪ್ರಾರಂಭಿಸುವುದನ್ನು ನೋಡಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯ ಚಂದ್ರನಲ್ಲಿ ಇರುಳು ಕಳೆದು ಬೆಳಕು ಮೂಡಿದೆ. ನಿದ್ರೆಯಲ್ಲಿದ್ದ ಪ್ರಗ್ಯಾನ್ ಹಾಗೂ ವಿಕ್ರಮ್ ಮತ್ತೆ ಕೆಲಸ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ 3 ಅಪ್ಲಿಕೇಶನ್‌ಗಳ ಮೂಲಕ ಭಾರತೀಯರನ್ನು ಟಾರ್ಗೆಟ್ ಮಾಡ್ತೀದ್ದಾರೆ ಪಾಕಿಸ್ತಾನಿ ಹ್ಯಾಕರ್‌ಗಳು

ಇನ್ನೊಂದೆಡೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯೋದಯವಾಗಲಿದೆ. ಅಂದರೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಸೂರ್ಯನ ಶಾಖದಿಂದ ಶಕ್ತಿಯನ್ನು ಪಡೆದು ಮತ್ತೆ ಕಾರ್ಯ ಪ್ರಾರಂಭಿಸುತ್ತದೆ. ಎರಡರ ಸೌರ ಫಲಕಗಳ ಮೇಲೆ ಸಾಕಷ್ಟು ಪ್ರಮಾಣದ ಸೂರ್ಯನ ಬೆಳಕು ಬಿದ್ದರೆ ಅವು ಎಚ್ಚರಗೊಂಡು, ಕೆಲಸ ಮಾಡಲು ಪ್ರಾರಂಭಿಸುತ್ತವೆ ಎಂದು ಇಸ್ರೋ ಹೇಳಿದೆ.

ಭೂಮಿಯಿಂದ ಸುಮಾರು ಮೂರು ಲಕ್ಷದ 75 ಸಾವಿರ ಕಿಲೋಮೀಟರ್ ದೂರದಲ್ಲಿರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಚಂದ್ರಯಾನದ ಲ್ಯಾಂಡರ್ ಮತ್ತು ರೋವರ್ ಕಾಲಿಟ್ಟಿದ್ದು ಇತಿಹಾಸ ಸೃಷ್ಟಿಸಿದೆ,  

ವಿಜ್ಞಾನಿಗಳು ಚಂದ್ರಯಾನ-3ರೊಂದಿಗಿನ ಸಂಪರ್ಕವನ್ನು ಮರು ಸ್ಥಾಪಿಸಲು ಸಿದ್ಧತೆ ಆರಂಭಿಸಿದ್ದಾರೆ. ನಾಳೆ ಅಂದರೆ ಸೆಪ್ಟೆಂಬರ್ 22ರಂದು ಶಿವಶಕ್ತಿ ಪಾಯಿಂಟ್ ಇರುವ ಜಾಗಕ್ಕೆ ಸೂರ್ಯನ ಬೆಳಕು ಬೀಳಲಿದೆ. ಈ ಸಂದರ್ಭದಲ್ಲಿ ಎರಡು ಸೌರ ಫಲಕಗಳ ಮೇಲೆ ಸೂರ್ಯನ ಶಾಖ ಬಿದ್ದಾಗ, ವಿಕ್ರಮ್ ಮತ್ತು ಪ್ರಗ್ಯಾನ್ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತಿದೆ.

ಚಂದ್ರಯಾನ-3 ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿ ಇತಿಹಾಸವನ್ನು ಸೃಷ್ಟಿಸಿತು. ಅದರ ಪೇಲೋಡ್‌’ಗಳು ಚಂದ್ರನಲ್ಲಿ ಒಂದು ದಿನ ಅಂದರೆ  ಭೂಮಿಯ 14 ದಿನಗಳ ಕಾಲ ಕೆಲಸ ಮಾಡಿದ್ದವು.  ಅಷ್ಟೇ ಅಲ್ಲದೆ, ಚಂದ್ರನ ಮಣ್ಣಿನಲ್ಲಿ ಸಲ್ಫರ್, ಕಬ್ಬಿಣ ಮತ್ತು ಆಮ್ಲಜನಕ ಸೇರಿದಂತೆ ಇತರ ಖನಿಜಗಳ ಉಪಸ್ಥಿತಿಯನ್ನು ಖಚಿತಪಡಿಸಿತ್ತು.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ, ದಿನಾಂಕ, ಸಮಯ, ಉಚಿತ ವೀಕ್ಷಣೆ, ಲೈವ್ ಸ್ಟ್ರೀಮಿಂಗ್ ಮಾಹಿತಿ

ಇನ್ನು ಲ್ಯಾಂಡರ್ ಮತ್ತು ವಿಕ್ರಮ್‌’ನಲ್ಲಿ ಅಳವಡಿಸಿರುವ ಸೌರ ಫಲಕಗಳ ಮೇಲೆ ಸೂರ್ಯನ ಬೆಳಕು ಬಿದ್ದಾಗ ಆ ಬ್ಯಾಟರಿಗಳು ಚಾರ್ಜ್ ಆಗುತ್ತವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News