ನವದೆಹಲಿ: ಶಬರಿಮಲೆ ದೇವಸ್ತಾನಕ್ಕೆ ಮಹಿಳೆಯರ ಪ್ರವೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಫೆಬ್ರುವರಿ 6ಕ್ಕೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.ಎಎನ್ಐ ಸುದ್ದಿಸಂಸ್ಥೆ ಪ್ರಕಾರ ಶಬರಿಮಲೆ ವಿಚಾರವಾಗಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಫೆ.6 ರಂದು ನಡೆಸಲಿದೆ ಎಂದು ಸುಪ್ರೀಂ ತಿಳಿಸಿದೆ.
ಸುಪ್ರೀಂಕೋರ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಮಹಿಳೆಯರಿಗೆ ಶಬರಿಮಲೆ ದೇವಸ್ತಾನಕ್ಕೆ ಪ್ರವೇಶ ನೀಡಬೇಕಂದು ತೀರ್ಪು ನೀಡಿತ್ತು. ಈ ವಿಚಾರವಾಗಿ ಕೇರಳದೆಲ್ಲೆಡೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.ಸುಪ್ರೀಂಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಒಟ್ಟು 48 ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿತ್ತು.ಈಗ ಫೆ.6ಕ್ಕೆ ಈ ಎಲ್ಲ ಅರ್ಜಿ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್ ತಿಳಿಸಿದೆ.
Supreme Court to hear on February 6 the review petitions filed against verdict allowing entry of women of all age groups into the #Sabarimala temple. #Kerala pic.twitter.com/1RPmUTOrnF
— ANI (@ANI) January 31, 2019
ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನದ ಪೀಠವು ಫೆಬ್ರವರಿ 6 ರಿಂದ ಈ ಪ್ರಕರಣವನ್ನು ವಿಚಾರಣೆ ಆರಂಭಿಸಲಿದೆ. ಈ ಹಿಂದೆ ಈ ಪ್ರಕರಣದ ವಿಚಾರಣೆಯನ್ನು ಜನವರಿ 22 ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ವೈದ್ಯಕೀಯ ರಜೆಯಲ್ಲಿದ್ದರಿಂದ ರದ್ದುಗೊಳಿಸಬೇಕಾಯಿತು.ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಋತುಮಾನದ ವಯಸ್ಸಿನ 51 ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸಿದ್ದಾರೆ ಎಂದು ಕೇರಳ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಆದರೆ ಕೆಲವರು ಇದನ್ನು ನಿರಾಕರಿಸಿದ್ದಾರೆ.