ನವದೆಹಲಿ: ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಜನವರಿ 29 ಕ್ಕೆ ಲಭ್ಯವಿಲ್ಲದ ಕಾರಣ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಯುವುದು ಅನುಮಾನ ಎಂದು ತಿಳಿದುಬಂದಿದೆ.ಈ ಹಿನ್ನಲೆಯಲ್ಲಿ ಅಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂವಿಧಾನದ ಪೀಠವು ಪ್ರಕರಣದ ವಿಚಾರಣೆಯನ್ನು ತೆಗೆದುಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.
ಜನವರಿ 25 ರಂದು ನ್ಯಾಯಾಧೀಶ ಅಶೋಕ್ ಭೂಷಣ್ ಮತ್ತು ಎಸ್.ಎ.ನಜೀರ್ ಅವರು ಅಯೋಧ್ಯೆ ಪ್ರಕರಣದ ವಿಚಾರಣೆಗಾಗಿ ನೂತನವಾಗಿ ರಚಿಸಲಾಗಿರುವ ಪಂಚ ನ್ಯಾಯಾಧೀಶರ ಪೀಠಕ್ಕೆ ಆಯ್ಕೆಯಾಗಿದ್ದರು.ಈ ಇಬ್ಬರು ನ್ಯಾಯಾದೀಶರು ಜನವರಿ 8 ರಂದು ರಚನೆ ಮಾಡಿದ ಪಂಚ ಸದಸ್ಯರ ಪೀಠದಲ್ಲಿ ಇದ್ದಿರಲಿಲ್ಲ.ಆದರೆ ಈ ವಿಚಾರವಾಗಿ ಜನವರಿ 10 ರಂದು ಸುಪ್ರೀಂ ನಲ್ಲಿ ವಿಚಾರಣೆ ನಡೆಸಿದ ನಂತರ ಅವರನ್ನು 5 ಸದಸ್ಯರ ಪೀಠಕ್ಕೆ ಸೇರಿಸಿಕೊಳ್ಳಲಾಯಿತು. ಪಂಚಪೀಠದ ಇನ್ನೂಳಿದ ಸದಸ್ಯರೆಂದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ಎಸ್.ಎ ಬಾಬ್ದೆ, ಡಿ.ವೈ ಚಂದ್ರಚೂಡ್.
Ayodhya case won't be taken up for hearing by the 5-judge constitution bench of Supreme Court on January 29 due to the non-availability of Justice SA Bobde pic.twitter.com/wzuJsBjwSJ
— ANI (@ANI) January 27, 2019
2010 ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ 14 ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಹಿಂದೆ ಹೈಕೋರ್ಟ್ ಅಯೋಧ್ಯೆ ವಿವಾದ ವಿಚಾರವಾಗಿ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರಾ ಮತ್ತು ರಾಮ್ ಲಲ್ಲಾ ಹೀಗೆ ಮೂರು ಭಾಗಗಳಾಗಿ ವಿಂಗಡಿಸಿತ್ತು.ಈಗ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಗೆ ಮೊರೆ ಹೋಗಿರುವುದರಿಂದ ಸರ್ವೋಚ್ಚ ನ್ಯಾಯಾಲಯ ಈಗ ಅಂತೀಮ ತೀರ್ಪನ್ನು ನೀಡಬೇಕಾಗಿದೆ. ಈ ವಿವಾದವನ್ನು ಸುಪ್ರೀಕೋರ್ಟ್ ನ ಐದು ನ್ಯಾಯಾಧೀಶರ ಸಂವಿಧಾನಿಕ ಪೀಠ ಈ ಕುರಿತು ವಿಚಾರಣೆ ನಡೆಸಲಿದೆ. ಸುಪ್ರೀಕೋರ್ಟ್ ಈ ಹಿಂದೆ ಜ.29 ವಿಚಾರಣೆ ಕೈಗೊಳ್ಳುವುದಾಗಿ ಹೇಳಿತ್ತು, ಆದರೆ ಈಗ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಅಲಭ್ಯವಿರುವ ಕಾರಣ ಅಂದು ವಿಚಾರಣೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.