ನೂತನ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ನೇಮಕ

ಕೇಂದ್ರ ತೆರಿಗೆ ನಿಯಂತ್ರಣ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ನೂತನ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.

Last Updated : Feb 14, 2019, 06:30 PM IST
ನೂತನ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ನೇಮಕ title=
Photo courtesy: ANI

ನವದೆಹಲಿ: ಕೇಂದ್ರ ತೆರಿಗೆ ನಿಯಂತ್ರಣ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ನೂತನ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.

ಭಾರತೀಯ ಕಂದಾಯ ಇಲಾಖೆಯ 1980 ರ ಬ್ಯಾಚ್ ಅಧಿಕಾರಿಯಾಗಿರುವ ಚಂದ್ರ ಅವರು ಐಐಟಿ ಪದವೀಧರರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.ಈಗ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾರೊಂದಿಗೆ ಸುಶೀಲ್ ಚಂದ್ರ, ಅಶೋಕ್ ಲವಾಸಾ ಅವರು ಚುನಾವಣಾ ಆಯೋಗದ ಕಮಿಷನರ್ ಗಳಾಗಿದ್ದಾರೆ.

ಏಪ್ರಿಲ್- ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಇರುವುದರ ಹಿನ್ನಲೆಯಲ್ಲಿ ಈಗ ಸುಶೀಲ್ ಚಂದ್ರರನ್ನು ನೇಮಕ ಮಾಡಲಾಗಿದೆ.ಈ ತಿಂಗಳ ಅಂತ್ಯದ ವೇಳೆಗೆ ಚುನಾವಣೆ ದಿನಾಂಕ ಮತ್ತು ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಘೋಷಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಸುಶೀಲ್ ಚಂದ್ರ ಅವರು ನವೆಂಬರ್ 1, 2016 ರಂದು ಸಿಬಿಡಿಟಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.

Trending News