ಚೆನ್ನೈ : ದೇಶದಲ್ಲಿ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನ ಬೇಸತ್ತಿದ್ದಾರೆ. ಜನರ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು ಸರ್ಕಾರವು ಜನರಿಗೆ ಪರಿಹಾರ ನೀಡಲು ಉಪಕ್ರಮವನ್ನು ಕೈಗೊಂಡಿದೆ.
ಇಂದು ತಮಿಳುನಾಡು ಸರ್ಕಾರದ ಬಜೆಟ್ ಮಂಡನೆ
ತಮಿಳುನಾಡಿನಲ್ಲಿ ಶುಕ್ರವಾರ ರಾಜ್ಯ ಬಜೆಟ್(Tamil Nadu Budget 2021) ಮಂಡಿಸಲಾಗಿದೆ. ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗ ರಾಜನ್ ಮೊದಲ ಪೇಪರ್ ಲೆಸ್ ಬಜೆಟ್ ಅನ್ನು ಮಂಡಿಸುತ್ತಾ, ಪೆಟ್ರೋಲ್ ಮೇಲಿನ ರಾಜ್ಯ ಅಬಕಾರಿ ಸುಂಕದಲ್ಲಿ 3 ರೂ. ಕಡಿತಗೊಳಿಸಿ ಘೋಷಿಸಿದರು. ಈ ನಿರ್ಧಾರದಿಂದ ತಮಿಳುನಾಡಿನಲ್ಲಿ ಪೆಟ್ರೋಲ್ 3 ರೂ. ಅಗ್ಗವಾಗಲಿದೆ ಎಂದು ಅವರು ಹೇಳಿದರು. ಈ ನಿರ್ಧಾರದಿಂದಾಗಿ, ರಾಜ್ಯ ಸರ್ಕಾರವು ವಾರ್ಷಿಕವಾಗಿ 1,160 ಕೋಟಿ ರೂ. ನಷ್ಟ ಅನುಭವಿಸುತ್ತದೆ.
ಇದನ್ನೂ ಓದಿ : ಈಗ ಇನ್ನೂ ಹೆಚ್ಚು ಜನ ವೀಕ್ಷಿಸಬಹುದು ನಿಮ್ಮ whatsaap ಸ್ಟೇಟಸ್, ಬಂದಿದೆ ಹೊಸ ಫೀಚರ್
ಪೆಟ್ರೋಲ್ ಬೆಲೆಯಲ್ಲಿ 3 ರೂ. ಕಡಿತ
ಮಾಹಿತಿಯ ಪ್ರಕಾರ, ಶುಕ್ರವಾರ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ(Petrol price) 102.49 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 94.39 ರೂ. ವಿಧಾನಸಭೆಯಲ್ಲಿ ಬಜೆಟ್ ಅಂಗೀಕರಿಸಿದ ನಂತರ, ಅದು ಮೇ 2021 ರಿಂದ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿದೆ. ಪ್ರಸ್ತುತ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ ಮತ್ತು ಪಂಜಾಬ್ ಸೇರಿದಂತೆ ಸುಮಾರು 15 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100 ರೂ. ಇದೆ.
ಇದನ್ನೂ ಓದಿ : Pre-Paid Smart Meter ಅಳವಡಿಕೆಗೆ ಟ್ರೈಲ್ ಶುರು : ಮೊದಲು ಎಲ್ಲಿ? ಬಿಲ್ ಕಟ್ಟುವುದು ಹೇಗೆ?
ಇತರ ರಾಜ್ಯಗಳಲ್ಲಿಯೂ ಬೆಲೆ ಕಡಿಮೆಯಾಗಿರಬಹುದು!
ತಮಿಳುನಾಡು ಸರ್ಕಾರ(Tamil Nadu Govt)ದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ಇತರ ರಾಜ್ಯಗಳ ಮೇಲೆ ಒತ್ತಡ ಬೀಳುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರೊಂದಿಗೆ, ಅವರು ಮುಂದಿನ ಕೆಲವು ದಿನಗಳಲ್ಲಿ ತಮ್ಮ ರಾಜ್ಯಗಳಲ್ಲಿ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಬಹುದು. ವಿಶೇಷವಾಗಿ ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು ಹೀಗಾಗಿ ಬೆಲೆ ಇಳಿಕೆ ಮಾಡುವ ಎಲ್ಲ ಸಾಧ್ಯತೆಯು ಹೆಚ್ಚಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ