Tamilnadu Rain: ಚೆನ್ನೈನಲ್ಲಿ 30 ವರ್ಷಗಳ ದಾಖಲೆ ಮುರಿದ ಮಳೆ

ತಮಿಳುನಾಡಿನಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕಾವೇರಿ ಡೆಲ್ಟಾ ಪ್ರದೇಶಗಳು ಮತ್ತು ಕನ್ಯಾಕುಮಾರಿಯಂತಹ ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ 1 ರಿಂದ 9 ಸೆಂ.ಮೀ  ವರೆಗೆ ಮಳೆಯಾಗಿದೆ.

Written by - Yashaswini V | Last Updated : Nov 2, 2022, 08:47 AM IST
  • ಅಕ್ಟೋಬರ್ 29 ರಂದು ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಮಳೆ ಪ್ರಾರಂಭವಾಯಿತು.
  • ನವೆಂಬರ್ 1 ರಂದು ನುಂಗಂಬಾಕ್ಕಂನಲ್ಲಿ 8 ಸೆಂ.ಮೀ ಮಳೆ ದಾಖಲಾಗಿದೆ
  • ಇದು ಕಳೆದ 30 ವರ್ಷಗಳಲ್ಲಿ ಮೊದಲ ಅತಿ ಹೆಚ್ಚು ಮತ್ತು ಕಳೆದ 72 ವರ್ಷಗಳಲ್ಲಿ ಮೂರನೇ ಅಂತಹ ದಾಖಲೆಯಾಗಿದೆ
Tamilnadu Rain: ಚೆನ್ನೈನಲ್ಲಿ 30 ವರ್ಷಗಳ ದಾಖಲೆ ಮುರಿದ ಮಳೆ title=
Chennai Rains Updates

Tamilnadu Rain: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದೆ.  ಚೆನ್ನೈ ಮತ್ತು ಅದರ ಉಪನಗರಗಳಲ್ಲಿ ಮಂಗಳವಾರ ರಾತ್ರಿಯಿಂದ ದಾಖಲೆಯ ಮಳೆಯಾಗಿದ್ದು, ನಗರ ಮತ್ತು ಹೊರವಲಯದಲ್ಲಿರುವ ಹಲವಾರು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು, ಆದರೆ ಮಳೆ ಸಂಬಂಧಿತ ಘಟನೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚೆನ್ನೈನಲ್ಲಿ ಮಂಗಳವಾರ 8.4 ಸೆಂ.ಮೀ ಮಳೆ ದಾಖಲಾಗಿದೆ. ಇದರೊಂದಿಗೆ 30 ವರ್ಷಗಳ ದಾಖಲೆ ಮುರಿದಿದೆ. ಮೂರು ದಶಕಗಳಲ್ಲಿ ಮೊದಲ ಬಾರಿಗೆ, ಕೋರ್ ಸಿಟಿ ಪ್ರದೇಶವಾದ ನುಂಗಂಬಾಕ್ಕಂ ಒಂದೇ ದಿನದಲ್ಲಿ 8  ಸೆಂ.ಮೀ ಮತ್ತು ಉಪನಗರ ರೆಡ್ ಹಿಲ್ಸ್  ನಲ್ಲಿ 13  ಸೆಂ.ಮೀ ನಂತರ ಪೆರಂಬೂರ್‌ನಲ್ಲಿ 12  ಸೆಂ.ಮೀ ಮಳೆ ದಾಖಲಿಸಿದೆ.

ಇದನ್ನೂ ಓದಿ- Viral Video: ಬಡಪಾಯಿ ಹಸು ತೋರಿದ ಧೈರ್ಯದ ಮುಂದೆ ಶಕ್ತಿಯನ್ನೇ ಕಳೆದುಕೊಂಡ ಕ್ರೂರಿ ಮೊಸಳೆ... ವಿಡಿಯೋ ನೋಡಿ

ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶಗಳು ಮತ್ತು ಕನ್ಯಾಕುಮಾರಿಯಂತಹ ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ 1 ರಿಂದ 9 ಸೆಂ.ಮೀ  ವರೆಗೆ ಮಳೆಯಾಗಿದೆ. ಮಳೆಯ ಹಿನ್ನೆಲೆಯಲ್ಲಿ ಇಲ್ಲಿ ಎರಡು ಸುರಂಗಮಾರ್ಗಗಳನ್ನು ಮುಚ್ಚಲಾಗಿದ್ದು, ನಗರದಲ್ಲಿ ಸಂಚಾರ ದಟ್ಟಣೆ ಮತ್ತು ವಾಹನಗಳ ನಿಧಾನ ಸಂಚಾರಕ್ಕೆ ಸಾಕ್ಷಿಯಾಯಿತು.

ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. 

ಇದನ್ನೂ ಓದಿ- Viral Video: ಬೆಚ್ಚಿಬೀಳಿಸುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ!

ಚೆನ್ನೈನಲ್ಲಿ 30 ವರ್ಷಗಳ ದಾಖಲೆ ಮುರಿದ ಮಳೆ:
ಅಕ್ಟೋಬರ್ 29 ರಂದು ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಮಳೆ ಪ್ರಾರಂಭವಾಯಿತು.  ನವೆಂಬರ್ 1 ರಂದು ನುಂಗಂಬಾಕ್ಕಂನಲ್ಲಿ 8 ಸೆಂ.ಮೀ ಮಳೆ ದಾಖಲಾಗಿದೆ ಮತ್ತು ಇದು ಕಳೆದ 30 ವರ್ಷಗಳಲ್ಲಿ ಮೊದಲ ಅತಿ ಹೆಚ್ಚು ಮತ್ತು ಕಳೆದ 72 ವರ್ಷಗಳಲ್ಲಿ ಮೂರನೇ ಅಂತಹ ದಾಖಲೆಯಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಇಲಾಖೆಯ ಉಪ ಮಹಾನಿರ್ದೇಶಕರು, ಎಸ್. ಬಾಲಚಂದ್ರನ್ ಸುದ್ದಿಗಾರರಿಗೆ ತಿಳಿಸಿದರು. 1990 ರಲ್ಲಿ, ನಗರವು 13 ಸೆಂ.ಮೀ ಮಳೆಗೆ ಸಾಕ್ಷಿಯಾಯಿತು ಮತ್ತು 1964 ರಲ್ಲಿ 11 ಸೆಂ.ಮೀ ಮಳೆ ಆಗಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News