ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 2

ಕರೋನಾ ಸಾಂಕ್ರಾಮಿಕದ  ಎರಡನೇ ಅಲೆಯ ಕಾರಣ ಇಡೀ ದೇಶ ತಲ್ಲಣಿಸಿದೆ. ಈ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್  ಮತ್ತು ಕರ್ಫ್ಯೂಗಳನ್ನು ಹೇರಲಾಗಿದೆ. ಈ ಕಾರಣದಿಂದಾಗಿ, ಪ್ರಯಾಣಿಕರ ಚಲನ ವಲನ ಕೂಡಾ ಕಡಿಮೆಯಾಗಿದೆ.

Written by - Ranjitha R K | Last Updated : May 17, 2021, 06:09 PM IST
  • ಇಂದು ಮಧ್ಯರಾತ್ರಿಯಿಂದಲೇ ಟರ್ಮಿನಲ್ 2 ಬಂದ್
  • ನಾಳೆಯಿಂದ ಟರ್ಮಿನಲ್ 3 ಮೂಲಕ ಎಲ್ಲಾ ವಿಮಾನಗಳ ಹಾರಾಟ
  • ಕರೋನಾ ಹಿನ್ನೆಲೆಯಲ್ಲಿ ವಿದೇಶಿ ವಿಮಾನಗಳ ಹಾರಾಟವೂ ರದ್ದು
ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 2

ನವದೆಹಲಿ : ರಾಜಧಾನಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ. ದೆಹಲಿ ಇಂಟರ್ ನ್ಯಾಷನಲ್  ಏರ್ಪೋರ್ಟ್ ಲಿಮಿಟೆಡ್ (DIAL) ಪ್ರಕಾರ, ಕರೋನಾ ಸೋಂಕಿನಿಂದಾಗಿ, ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಈ ಕಾರಣದಿಂದಾಗಿ,  ಎರಡನೇ ಟರ್ಮಿನಲ್ (Terminal 2) ಅನ್ನು ಮಧ್ಯರಾತ್ರಿಯಿಂದ ಬಂದ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಮೇ 18 ರಿಂದ ಎಲ್ಲಾ ವಿಮಾಣಗಳು ಟರ್ಮಿನಲ್ ಮೂರರಿಂದ ಹಾರಾಟ ನಡೆಸಲಿದೆ. 

ಕರೋನಾ ಸಾಂಕ್ರಾಮಿಕದ (Coronavirus) ಎರಡನೇ ಅಲೆಯ ಕಾರಣ ಇಡೀ ದೇಶ ತಲ್ಲಣಿಸಿದೆ. ಈ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್ (Lockdown) ಮತ್ತು ಕರ್ಫ್ಯೂಗಳನ್ನು ಹೇರಲಾಗಿದೆ. ಈ ಕಾರಣದಿಂದಾಗಿ, ಪ್ರಯಾಣಿಕರ ಚಲನ ವಲನ ಕೂಡಾ ಕಡಿಮೆಯಾಗಿದೆ. ಕೇಂದ್ರ ಸರ್ಕಾರ (Central government) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ ವಾರದಲ್ಲಿ ದೇಶೀಯ ಪ್ರಯಾಣಿಕರ ದಿನಕ್ಕೆ 2.2 ಲಕ್ಷದಷ್ಟು ಕಡಿಮೆಯಾಗಿದ್ದು, ಕೇವಲ 75,000 ಕ್ಕೆ ಇಳಿದಿದೆ. ಇದಕ್ಕೂ ಮೊದಲು ದೆಹಲಿ ವಿಮಾನ ನಿಲ್ದಾಣದಿಂದ ಪ್ರತಿ ದಿನ 1,500 ವಿಮಾನಗಳ ಹಾರಾಟ ನಡೆಸುತ್ತಿತ್ತು. ಆದರೆ ಈಗ ಕೇವಲ 325 ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. 

ಇದನ್ನೂ ಓದಿ : Heavy Rain : ತೌಕ್ತೆ ಸೈಕ್ಲೋನ್ ಗೆ ತತ್ತರಿಸಿದ ಮುಂಬೈ : ವಾಣಿಜ್ಯ ನಗರಿಯಲ್ಲಿ ಭಾರೀ ಮಳೆ-ಗಾಳಿ..! 

ಕರೋನಾದ (COVID-19) ಎರಡನೇ ಅಲೆಯ ನಂತರ, ಮಂದಿಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದಾದ ನಂತರ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಯತೊಡಗಿದೆ. ಕರೋನಾ ವಿದೇಶಿ ವಿಮಾನಗಳ (International flight) ಹಾರಾಟವನ್ನು ಕೂಡಾ ರದ್ದುಗೊಳಿಸಲಾಗಿದೆ. ಈ ಕಾರಣಗಳಿಂದ ಆರ್ಥಿಕ ಬಿಕ್ಕಟ್ಟನ್ನು ಕೂಡಾ ಎದುರಿಸುವಂತಾಗಿದೆ. 

ಇದನ್ನೂ ಓದಿ : ಇನ್ನೂ ಖಾತೆ ಸೇರಿಲ್ಲವೇ PM Kisan ದುಡ್ಡು; ತಕ್ಷಣ ಈ ಕೆಲಸ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News