Heavy Rain : ತೌಕ್ತೆ ಸೈಕ್ಲೋನ್ ಗೆ ತತ್ತರಿಸಿದ ಮುಂಬೈ : ವಾಣಿಜ್ಯ ನಗರಿಯಲ್ಲಿ ಭಾರೀ ಮಳೆ-ಗಾಳಿ..! 

ಮುಂಬೈನಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ಬಾಂದ್ರಾ-ವರ್ಲಿ ಸೇತುವೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ

Last Updated : May 17, 2021, 05:36 PM IST
  • ತೌಕ್ತೆ ಚಂಡಮಾರುತವು ಗುಜರಾತ್‌ನತ್ತ ಸಾಗಿರುವ ಹಿನ್ನೆಲೆ
  • ವಾಣಿಜ್ಯ ನಗರಿ ಮುಂಬೈ ಸೇರಿದಂತೆ ನೆರೆ ಪ್ರದೇಶಗಳಲ್ಲಿ ಇಂದು ಭಾರೀ ಗಾಳಿ, ಮಳೆ
  • ಬಾಂದ್ರಾ-ವರ್ಲಿ ಸೇತುವೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತ
Heavy Rain : ತೌಕ್ತೆ ಸೈಕ್ಲೋನ್ ಗೆ ತತ್ತರಿಸಿದ ಮುಂಬೈ : ವಾಣಿಜ್ಯ ನಗರಿಯಲ್ಲಿ ಭಾರೀ ಮಳೆ-ಗಾಳಿ..!  title=

ಮುಂಬೈ : ತೌಕ್ತೆ ಚಂಡಮಾರುತವು ಗುಜರಾತ್‌ನತ್ತ ಸಾಗಿರುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ನೆರೆ ಪ್ರದೇಶಗಳಲ್ಲಿ ಇಂದು ಭಾರೀ ಗಾಳಿ, ಮಳೆಯಾಗಿದೆ.

ಮುಂಬೈ(Mumbai)ನಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ಬಾಂದ್ರಾ-ವರ್ಲಿ ಸೇತುವೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ, ವಾಹನಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಮನವಿ ಮಾಡಲಾಗಿದೆ ಎಂದು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ : ಇನ್ನೂ ಖಾತೆ ಸೇರಿಲ್ಲವೇ PM Kisan ದುಡ್ಡು; ತಕ್ಷಣ ಈ ಕೆಲಸ ಮಾಡಿ

'ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರತಿ ಗಂಟೆಗೆ 102 ಕಿ.ಮೀ ವೇಗದಲ್ಲಿ ಗಾಳಿ(Heavy Wind) ಬೀಸಿದೆ. ಐಎಂಡಿಯ ಕೊಲಾಬಾ ವೀಕ್ಷಣಾಲಯದಲ್ಲಿ ಬೆಳಿಗ್ಗೆ 8.30 ರಿಂದ ೧೧ ತನಕ 79.4 ಮಿ.ಮೀ ಮಳೆ ದಾಖಲಾಗಿದೆ. ಸಾಂತಾಕ್ರೂಜ್‌ ವೀಕ್ಷಣಾಲಯದಲ್ಲಿ 44.4 ಮಿ.ಮೀ ಮಳೆ ದಾಖಲಾಗಿದೆ' ಎಂದು ಮುಂಬೈನ ಐಎಂಡಿ ಪ್ರಾದೇಶಿಕ ಕಚೇರಿಯ ಹಿರಿಯ ನಿರ್ದೇಶಕ ಶುಭಾಂಗಿ ಭುಟೆ ಹೇಳಿದ್ದಾರೆ.

ಇದನ್ನೂ ಓದಿ : Infinix Hot 10S- 6000mAh ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ ಇನ್ಫಿನಿಕ್ಸ್ ಹಾಟ್ 10 ಎಸ್

ಭಾರಿ ಮಳೆ(Heavy Rain)ಯಿಂದಾಗಿ ರೈಲ್ವೆ ತಂತಿಯ ಮೇಲೆ ಮರ ಬಿದ್ದು, ಘಾಟ್‌ಕೊಪರ್‌ ಮತ್ತು ವಿಕ್ರೊಲಿ ಉಪನಗರ ರೈಲ್ವೆ ಸೇವೆಯಲ್ಲಿ ಅರ್ಧ ಗಂಟೆಯವರೆಗೆ ಅಡಚಣೆ ಉಂಟಾಗಿತ್ತು. ಬೆಳಿಗ್ಗೆ 11.35ಕ್ಕೆ ಚುನಾಭಟಿ ಮತ್ತು ಗುರುತೇಜ್‌ ಬಹಾದ್ದೂರ್‌ ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ತಂತಿ ಮೇಲೆ ಬ್ಯಾನರ್‌ವೊಂದು ಬಿದ್ದಿತ್ತು. ಇದನ್ನು ಅರ್ಧಗಂಟೆಯೊಳಗೆ ತೆರವುಗೊಳಿಸಲಾಯಿತು ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ ಲಾಂಚ್ ಆಯಿತು Amazon miniTV , ಈ ಎಲ್ಲಾ ವಿಡಿಯೋಗಳನ್ನು ಉಚಿತವಾಗಿ ವೀಕ್ಷಿಸಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News