ಪುಲ್ವಾಮಾದಲ್ಲಿ CRPF ಮತ್ತು ಪೊಲೀಸರ ಜಂಟಿ ಪಡೆಯ ಮೇಲೆ ಉಗ್ರದಾಳಿ, ಓರ್ವ ಪೇದೆ ಹುತಾತ್ಮ

ಹುತಾತ್ಮನಾದ ಪೋಲೀಸ್ ಪೇದೆಯನ್ನು ಐಆರ್‌ಪಿ 10 ನೇ ಬೆಟಾಲಿಯನ್ ನ ಅನೂಪ್ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಪೇದೆಯನ್ನು ಮೊಹಮ್ಮದ್ ಇಬ್ರಾಹಿಂ ಎಂದು ಗುರುತಿಸಲಾಗಿದೆ.  

Last Updated : May 21, 2020, 04:52 PM IST
ಪುಲ್ವಾಮಾದಲ್ಲಿ CRPF ಮತ್ತು ಪೊಲೀಸರ ಜಂಟಿ ಪಡೆಯ ಮೇಲೆ ಉಗ್ರದಾಳಿ, ಓರ್ವ ಪೇದೆ ಹುತಾತ್ಮ  title=

ಕಾಶ್ಮೀರ:ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪೋಲೀಸ್ ಹಾಗೂ CRPF ಜಂಟಿ ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಪೋಲೀಸ್ ಪೇದೆ ಹುತಾತ್ಮರಾಗಿದ್ದರೆ ಮತ್ತೋರ್ವ ಪೇದೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಪುಲ್ವಾಮಾದ ಪ್ರಿಚೂ ಪ್ರದೇಶದಲ್ಲಿರುವ ಜಂಟಿ ನಾಕಾ ಮೇಲೆ ಉಗ್ರರು ಬೇಕಾಬಿಟ್ಟಿ ಗುಂಡುಗಳನ್ನು ಹಾರಿಸಿದ್ದು, ಇಬ್ಬರು ಪೋಲೀಸ್ ಪೇದೆಗಳಿಗೆ ಗುಂಡುಗಳು ತಗುಲಿವೆ. ಗಾಯಗೊಂಡ ಇಬ್ಬರನ್ನೂ ಕೂಡ ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆ ತಲುಪುತ್ತಿದ್ದಂತೆ ಓರ್ವ ಪೋಲೀಸ್ ಪೇದೆ ಹುತಾತ್ಮನಾಗಿದ್ದಾನೆ ಹಾಗೂ ಇನ್ನೊಬ್ಬನನ್ನು ಶ್ರೀನಗರದ SMHS ಆಸ್ಪತ್ರೆಗೆ ರೆಫರ್ ಮಾಡಲಾಗಿದೆ ಎಂದು ಹೇಳಿದ್ದರೆ.

ಮೂಲಗಳ ಪ್ರಕಾರ ಸದ್ಯ ಜಂಟಿ ಪೋಲೀಸ್ ಪಡೆಗಳು ಉಗ್ರರಿಗೆ ತಕ್ಕ ಉತ್ತರ ನೀಡುತ್ತಿವೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಮೆಡಿಕಲ್ ಸುಪ್ರಿಟೆಡೆಂಟ್ ಡಾ. ಜಮೀಲ್ ಅಹ್ಮದ್ ಓರ್ವ ಪೋಲೀಸ್ ಪೇದೆಯನ್ನು ಹುತಾತ್ಮನಾಗಿದ್ದಾನೆ ಎಂದು ಘೋಷಿಸಲಾಗಿದ್ದು, ಮತೊರ್ವ ಪೇದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆತನನ್ನು ಶ್ರೀನಗರದ SMHSಗೆ ರೆಫರ್ ಮಾಡಲಾಗಿದೆ ಎಂದಿದ್ದಾರೆ.
 

Trending News