ಪ್ರೇಮಿಗಳ ದಿನದಂದು ಜನರು ಹಸುವನ್ನು ತಬ್ಬಿಕೊಳ್ಳಬೇಕು ಎಂಬ ಸರ್ಕಾರಿ ಸಂಸ್ಥೆಯ ಮನವಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಫೆಬ್ರವರಿ 14ರಂದು ವಿಶ್ವವೇ ಪ್ರೀತಿಯ ದಿನವನ್ನಾಗಿ ಆಚರಿಸುತ್ತದೆ. ಇದೀಗ ಕೇಂದ್ರ ಸರ್ಕಾರ ಲವ್ ಡೇ ದಿನವನ್ನು 'ಹಸು ಅಪ್ಪುಗೆಯ ದಿನ'ವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಭಾರತೀಯ ಸಂಸ್ಕೃತಿ ಮತ್ತು ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು ಗೋವು ಎಂದು ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶನ ನೀಡಿದೆ. ಗೋವು ತಾಯಿಯಂತೆ ಪ್ರಕೃತಿಯನ್ನು ರಕ್ಷಿಸುತ್ತದೆ ಹಾಗಾಗಿ ಗೋಪ್ರೇಮಿಗಳು ಫೆ.14ನ್ನು ‘ಗೋವು ಅಪ್ಪುಗೆ ದಿನ’ವನ್ನಾಗಿ ಆಚರಿಸಬೇಕು ಎಂದು ಪ್ರಾಣಿ ಸಂರಕ್ಷಣಾ ಮಂಡಳಿ ವಿಶೇಷ ಸುತ್ತೋಲೆ ಮೂಲಕ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.