ಕರೋನಾ ವಿರುದ್ಧದ ಯುದ್ಧದಲ್ಲಿ ದೇಶವಾಸಿಗಳಿಗೆ ಪ್ರಯೋಜನ ನೀಡಲಿದೆ ಸರ್ಕಾರದ ಈ ನಿರ್ಧಾರ

ಮಹಾಮಾರಿ ಕೊರೋನಾವೈರಸ್ ವಿರುದ್ಧದ ಹೋರಾಟದ ಹಾದಿಯಲ್ಲಿ ಹಣಕಾಸು ಸಚಿವಾಲಯವು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ, ಇದರ ಅಡಿಯಲ್ಲಿ ಕರೋನ ವಿರುದ್ಧ ಹೋರಾಡಲು ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುವಲ್ಲಿ ಮೂಲಭೂತ ಕಸ್ಟಮ್ ಸುಂಕ ಮತ್ತು ಆರೋಗ್ಯ ಸೆಸ್‌ಗೆ ಸರ್ಕಾರ ವಿನಾಯಿತಿ ನೀಡುತ್ತದೆ.

Last Updated : Apr 10, 2020, 07:15 AM IST
ಕರೋನಾ ವಿರುದ್ಧದ ಯುದ್ಧದಲ್ಲಿ ದೇಶವಾಸಿಗಳಿಗೆ ಪ್ರಯೋಜನ ನೀಡಲಿದೆ ಸರ್ಕಾರದ ಈ ನಿರ್ಧಾರ title=

ನವದೆಹಲಿ:  ಪ್ರಪಂಚದಾದ್ಯಂತ ಮಾರಣಹೋಮ ನಡೆಸುತ್ತಿರುವ ಮಹಾಮಾರಿ ಕೊರೊನಾವೈರಸ್  (Coronavirus) ​ವಿರುದ್ಧ ಹೋರಾಡಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದರ ಹೊರತಾಗಿಯೂ ನಮ್ಮ ದೇಶದಲ್ಲಿ ಸಾಕಷ್ಟು ವೆಂಟಿಲೇಟರ್‌ಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು ಲಭ್ಯವಿರದ ಕಾರಣ ಇನ್ನೂ ಸಹ ನಿರೀಕ್ಷೆಯ ಮಟ್ಟದಲ್ಲಿ ಕೊರೋನಾ ತಡೆಯುವಿಕೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಇದರ ಅಡಿಯಲ್ಲಿ ಕರೋನದ ವಿರುದ್ಧ ಹೋರಾಡಲು ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುವಲ್ಲಿ ಮೂಲಭೂತ ಕಸ್ಟಮ್ ಸುಂಕ ಮತ್ತು ಆರೋಗ್ಯ ಸೆಸ್‌ಗೆ ಸರ್ಕಾರ ವಿನಾಯಿತಿ ನೀಡುತ್ತದೆ.

ವೆಂಟಿಲೇಟರ್, ಫೇಸ್‌ಮಾಸ್ಕ್, ಸರ್ಜಿಕಲ್ ಮಾಸ್ಕ್, ಪರ್ಸನಲ್ ಪ್ರೊಟೆಕ್ಷನ್ ಉಪಕರಣಗಳು, ಕೋವಿಡ್ -19 (Covid-19) ಟೆಸ್ಟ್ ಕಿಟ್ ಮೂಲ ಕಸ್ಟಮ್ ಡ್ಯೂಟಿ ಮತ್ತು ಆರೋಗ್ಯ ಸೆಸ್‌ನಲ್ಲಿ ವಿನಾಯಿತಿ ಪಡೆಯಲಿವೆ. ಪ್ರಸ್ತುತ, ವೈದ್ಯಕೀಯ ಸಲಕರಣೆಗಳ ಮೇಲೆ 5% ಆರೋಗ್ಯ ಸೆಸ್ ವಿಧಿಸಲಾಗುತ್ತದೆ ಮತ್ತು ಮೂಲ ಕಸ್ಟಮ್ ಸುಂಕ 7.5% ವರೆಗೆ ಇರುತ್ತದೆ. ಈಗ ಈ ವಸ್ತುಗಳು ಮುಂದಿನ ಸೆಪ್ಟೆಂಬರ್ 30 ರವರೆಗೆ ಯಾವುದೇ ಕಸ್ಟಮ್ ಸುಂಕವನ್ನು ಪಾವತಿಸಬೇಕಾಗಿಲ್ಲ ಎಂದು ಹೇಳಲಾಗಿದೆ.

COVID-19: ಸ್ಥಳೀಯ ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆ ಮಾಡಿದ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ

ದೇಶದಲ್ಲಿ ಪ್ರತಿವರ್ಷ ಸುಮಾರು 39,000 ಕೋಟಿ ರೂ. ಮೌಲ್ಯದ ವೈದ್ಯಕೀಯ ಸಾಧನ ಆಮದು ನಡೆಯುತ್ತಿದೆ, ಆದರೆ ಕರೋನ ಸಮಯದಲ್ಲಿ ಕೋವಿಡ್ -19 ಪರೀಕ್ಷೆಯು ತೀರಾ ಕಡಿಮೆ ಆಗುತ್ತಿದೆ ಎಂದು ಹಲವು ವರದಿಗಳು ಉಲ್ಲೇಖಿಸಿರುವುದರ ಜೊತೆಗೆ ಕೊರೋನಾ ವಿರುದ್ಧದ ಹೋರಾಟದಲ್ಲಿ Covid-19 ಟೆಸ್ಟ್ ಅನ್ನು ಹೆಚ್ಚಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿವೆ. ಕೊರೋನಾ ಪರೀಕ್ಷೆಗೆ ಒಳಪಟ್ಟಾಗ ಕರೋನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತದೆ, ಹೀಗಾಗಿ ಹೆಚ್ಚಿನ ಸಂಖ್ಯೆಯ ವೆಂಟಿಲೇಟರ್‌ಗಳು ಬೇಕಾಗುತ್ತವೆ. ಇದಲ್ಲದೆ, ಕರೋನಾದೊಂದಿಗೆ ಹೋರಾಡುವ ವೈದ್ಯರು ಮತ್ತು ಸಿಬ್ಬಂದಿಗೆ ಹೆಚ್ಚಿನ ಸಂಖ್ಯೆಯ ಪಿಪಿಪಿಗಳು ಬೇಕಾಗುತ್ತವೆ, ಆದ್ದರಿಂದ ಅವರ ಕೊರತೆಯನ್ನು ಪೂರೈಸಲು ಕೆಲವು ತಿಂಗಳುಗಳವರೆಗೆ ಸೆಸ್ ವಿಧಿಸದಿರಲು ಸರ್ಕಾರ ನಿರ್ಧರಿಸಿದೆ.

ತನ್ನ ಅಳುವ ಮಗುವನ್ನೂ ಭೇಟಿಯಾಗಲಾಗದೆ ಸೇವೆ ಸಲ್ಲಿಸುತ್ತಿರುವ ನರ್ಸ್‍ಗೆ ಧೈರ್ಯ ತುಂಬಿತ ಸಿಎಂ ಯಡಿಯೂರಪ್ಪ

ಆದಾಗ್ಯೂ, ದೇಶದಲ್ಲಿ ಜುಗಾಡ್ ತಂತ್ರ ಅಥವಾ ವಿಭಿನ್ನ ತಂತ್ರಜ್ಞಾನದೊಂದಿಗೆ ಮಾಸ್ಕ್ ಪಿಪಿಪಿ ಮತ್ತು ವೆಂಟಿಲೇಟರ್ ತಯಾರಿಸಲು ಪ್ರಯತ್ನಗಳು ನಡೆಯುತ್ತಿವೆ. ಅದೇ ಸಮಯದಲ್ಲಿ ಪರೀಕ್ಷಾ ಕಿಟ್‌ಗಳನ್ನು ಸಹ ತಯಾರಿಸಲಾಗುತ್ತಿದೆ. ಆದರೆ ಈ ಸರಕುಗಳನ್ನು ನಿಗದಿತ ಮಾನದಂಡಗಳಲ್ಲಿ ತಯಾರಿಸಲು ಕಚ್ಚಾ ವಸ್ತುಗಳ ಅಗತ್ಯವಿರುತ್ತದೆ. ಈ ವಸ್ತುಗಳನ್ನು ಭಾರತದಲ್ಲಿ ತಯಾರಿಸಬಹುದು, ಆದ್ದರಿಂದ ಈ ರಿಯಾಯಿತಿ ಬಹಳ ಮುಖ್ಯ. ಸೆಸ್ ವಿನಾಯಿತಿ ನೀಡುವುದರಿಂದ ಈ ಸರಕು ಉಪಕರಣಗಳ ಬೆಲೆ ಕಡಿಮೆಯಾಗುತ್ತದೆ ಮತ್ತು ಅಗ್ಗದ ದರದಲ್ಲಿ ಲಭ್ಯವಿರುತ್ತದೆ.
 

Trending News