'ಇವಾಂಕಗೆ ಚಾರ್ಮಿನಾರ್-ಮೋದಿಗೆ ಕಾಕತೀಯ ಕಲಾಕೃತಿ' ಮಾದರಿಯ ಉಡುಗೊರೆ

ತೆಲಂಗಾಣ ರಾಜ್ಯ ಸರ್ಕಾರ ಜಾಗತಿಕ ಉದ್ಯಮಿಗಳ ಸಮಾವೇಶದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಉಡುಗೊರೆಗಳನ್ನು ನೀಡಲು ನಿರ್ಧರಿಸಿದೆ.

Last Updated : Nov 28, 2017, 12:58 PM IST
'ಇವಾಂಕಗೆ ಚಾರ್ಮಿನಾರ್-ಮೋದಿಗೆ ಕಾಕತೀಯ ಕಲಾಕೃತಿ' ಮಾದರಿಯ ಉಡುಗೊರೆ  title=

ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರ ಜಾಗತಿಕ ಉದ್ಯಮಿಗಳ ಸಮಾವೇಶದಲ್ಲಿ ಪಾಲ್ಗೊಳ್ಳುವ ಗಣ್ಯರಿಗೆ ಉಡುಗೊರೆಗಳನ್ನು ನೀಡಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಅತಿಥಿಯಾಗಿರುವ ಇವಾಂಕ ಟ್ರಂಪ್ ಗೆ ಚಾರ್ಮಿನಾರ್ ಮಾದರಿಯನ್ನು ಹಾಗೂ ಸಮಾವೇಶವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ ಅವರಿಗೆ ಕಾಕತೀಯ ಕಲಾಕೃತಿ ಮಾದರಿಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ, ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೂ ಸಹ ಉಡುಗೊರೆ ನೀಡಲಾಗುವುದು. ಅಷ್ಟೇ ಅಲ್ಲದೆ ಸಮ್ಮೇಳನದಲ್ಲಿ ಭಾಗವಹಿಸುವ 170 ರಾಷ್ಟ್ರಗಳ ವಿದೇಶಿ ಪ್ರತಿನಿಧಿಗಳಿಗೂ ಸಹ ಉಡುಗೊರೆ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ನ. 29ರಂದು ಗೊಲ್ಕೊಂಡಾ ಹೋಟೆಲ್ನಲ್ಲಿ ಏರ್ಪಡಿಸಿರುವ ವಿಶೇಷ ಔತಣ ಕೂಟದಲ್ಲಿ ಇವಾಂಕ ಅವರಿಗೆ ಈ ಉಡುಗೊರೆ ನೀಡಲಾಗುವುದು.

Trending News