ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿಗೆ ಮಧ್ಯಂತರ ರಕ್ಷಣೆ ನೀಡಿದ ಕರ್ನಾಟಕ ಹೈಕೋರ್ಟ್

ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ ಮತ್ತು ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಗಾಜಿಯಾಬಾದ್ ಪೊಲೀಸರಿಗೆ ನಿರ್ದೇಶನ ನೀಡಿದೆ.

Written by - Zee Kannada News Desk | Last Updated : Jun 24, 2021, 06:48 PM IST
  • ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ ಮತ್ತು ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಗಾಜಿಯಾಬಾದ್ ಪೊಲೀಸರಿಗೆ ನಿರ್ದೇಶನ ನೀಡಿದೆ.
  • ಲೋನಿ ಘಟನೆಗೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಟ್ವಿಟರ್ ಇಂಡಿಯಾ ಸೇರಿದಂತೆ ಒಂಬತ್ತು ಘಟಕಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿಗೆ ಮಧ್ಯಂತರ ರಕ್ಷಣೆ ನೀಡಿದ ಕರ್ನಾಟಕ ಹೈಕೋರ್ಟ್  title=

ನವದೆಹಲಿ: ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ ಮತ್ತು ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಗಾಜಿಯಾಬಾದ್ ಪೊಲೀಸರಿಗೆ ನಿರ್ದೇಶನ ನೀಡಿದೆ.

ಘಜಿಯಾಬಾದ್ ಪೊಲೀಸರು ಟ್ವಿಟರ್ (Twitter) ಎಂಡಿಯನ್ನು ಪರೀಕ್ಷಿಸಲು ಬಯಸಿದರೆ ಅದನ್ನು ವರ್ಚುವಲ್ ಮೋಡ್ ಮೂಲಕ ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.ಸೆಕ್ಷನ್ 41 ಎ ಸಿಆರ್‌ಪಿಸಿ ಅಡಿಯಲ್ಲಿ ಯುಪಿ ಪೊಲೀಸ್ ಗಾಜಿಯಾಬಾದ್ ನೀಡಿರುವ ನೋಟಿಸ್ ವಿರುದ್ಧ ಕರ್ನಾಟಕ ಹೈಕೋರ್ಟ್ ಟ್ವಿಟರ್ ಎಂಡಿ ಅರ್ಜಿಯನ್ನು ವಿಚಾರಣೆ ನಡೆಸುತ್ತಿತ್ತು.

ಇದನ್ನೂ ಓದಿ-Fake SIM Card: ಎಚ್ಚರಿಕೆ! ನಿಮ್ಮ ಹೆಸರಲ್ಲೂ ನಕಲಿ SIM ಚಾಲ್ತಿಯಲ್ಲಿದೆಯಾ? ಈ ರೀತಿ ಬ್ಲಾಕ್ ಮಾಡಿ

ಲೋನಿಯಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿದ ಮತ್ತು ಅವನ ಗಡ್ಡವನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಆತನಿಗೆ ನೋಟಿಸ್ ನೀಡಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ನ್ಯಾಯಮೂರ್ತಿ ಜಿ. ನರೇಂದರ್ ಅವರ ಏಕ-ನ್ಯಾಯಾಧೀಶರ ಪೀಠವು "ಈ ವಿಷಯಕ್ಕೆ ಹೆಚ್ಚಿನ ರೀತಿಯಲ್ಲಿ ಪರಿಶೀಲಿಸಬೇಕು ಆದ್ದರಿಂದ ಜೂನ್ 29 ರವರೆಗೆ ಆದೇಶಗಳನ್ನು ಕಾಯ್ದಿರಿಸಲಾಗಿದೆ.ಅಲ್ಲಿಯವರೆಗೆ ಯುಪಿ ಪೊಲೀಸರು ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ನರೇಂದರ್ ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ-Super Blood Moon 2021 In India: ಏನಿದು ಸೂಪರ್ ಬ್ಲಡ್ ಮೂನ್ ? ಭಾರತದಲ್ಲಿ ಯಾವಾಗ ಗೋಚರಿಸಲಿದೆ?

ತಮ್ಮ ಕ್ಲೈಂಟ್ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂದು ಟ್ವಿಟರ್ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದ್ದರು. ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಬೇಕಾದರೆ ಹೇಳಿಕೆಯನ್ನು ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಹೇಳಿದೆ,ಆದರೆ ಗಾಜಿಯಾಬಾದ್ ಪೊಲೀಸರು ಅವರ ವೈಯಕ್ತಿಕ ಉಪಸ್ಥಿತಿಯನ್ನು ಬಯಸುತ್ತಾರೆ ಎಂದು ವಕೀಲರು ಹೇಳಿದ್ದಾರೆ.

ಇದನ್ನೂ ಓದಿ- WhatsApp New Privacy Policy: WhatsApp ಹೊಸ ಆಟ ಆರಂಭ! ಗೌಪ್ಯತಾ ನೀತಿ ಒಪ್ಪಿಕೊಳ್ಳದ ಬಳಕೆದಾರದಿಗೆ ಎದುರಾದ ಅಡಚಣೆಗಳು

ಲೋನಿ ಘಟನೆಗೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಟ್ವಿಟರ್ ಇಂಡಿಯಾ ಸೇರಿದಂತೆ ಒಂಬತ್ತು ಘಟಕಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಇದನ್ನೂ ಓದಿ: Video: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಲಿಸ್ ಲಾಠಿಚಾರ್ಜ್ ನಿಂದ ರಕ್ಷಿಸಿದ ಪ್ರಿಯಾಂಕಾ ಗಾಂಧಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News