Super Blood Moon 2021 In India: ಏನಿದು ಸೂಪರ್ ಬ್ಲಡ್ ಮೂನ್ ? ಭಾರತದಲ್ಲಿ ಯಾವಾಗ ಗೋಚರಿಸಲಿದೆ?

ಸೂಪರ್ ಬ್ಲಡ್ ಮೂನ್ ಅನ್ನುವುದು ಖಗೋಳ ವಿಸ್ಮಯ. ಈ ವಿಸ್ಮಯವನ್ನು ವೀಕ್ಷಿಸಲು ಪ್ರಪಚದಾದ್ಯಂತ ಜನ ಕಾಯುತ್ತಿದ್ದಾರೆ.

Written by - Ranjitha R K | Last Updated : May 25, 2021, 02:16 PM IST
  • ನಾಳೆ ವರ್ಷದ ಮೊದಲ ಚಂದ್ರಗ್ರಹಣ
  • ಚಂದ್ರಗ್ರಹಣದೊಂದಿಗೆ ಗೋಚರಿಸಲಿದೆ ಸೂಪರ್ ಬ್ಲಡ್ ಮೂನ್
  • ಭಾರತದಲ್ಲಿ ಸೂಪರ್ ಬ್ಲಡ್ ಮೂನ್ ವೀಕ್ಷಣೆ ಹೇಗೆ?
Super Blood Moon 2021 In India: ಏನಿದು ಸೂಪರ್ ಬ್ಲಡ್ ಮೂನ್ ? ಭಾರತದಲ್ಲಿ ಯಾವಾಗ ಗೋಚರಿಸಲಿದೆ? title=
ಚಂದ್ರಗ್ರಹಣದೊಂದಿಗೆ ಗೋಚರಿಸಲಿದೆ ಸೂಪರ್ ಬ್ಲಡ್ ಮೂನ್ ( file phto zeenews )

ನವದೆಹಲಿ : Super Blood Moon 2021 In India: ಸೂಪರ್ ಬ್ಲಡ್ ಮೂನ್ ಅನ್ನುವುದು ಖಗೋಳ ವಿಸ್ಮಯ. ಈ ವಿಸ್ಮಯವನ್ನು ವೀಕ್ಷಿಸಲು ಪ್ರಪಚದಾದ್ಯಂತ ಜನ ಕಾಯುತ್ತಿದ್ದಾರೆ. ಈ ಖಗೋಳ ಘಟನೆಗೆ, ಸಾಕ್ಷಿಯಾಗಲು ಎಲ್ಲರೂ ಇಷ್ಟಪಡುತ್ತಾರೆ. ಹಾಗಿದ್ದರೆ ಯಾವಾಗ ನಡೆಯಲಿದೆ ಈ ಖಗೋಳ ವಿಸ್ಮಯ.  ಇದನ್ನು  ವೀಕ್ಷಿಸುವ ಬಗೆ ಹೇಗೆ  ತಿಳಿಯಿರಿ.. 

ಏನಿದು ಸೂಪರ್ ಬ್ಲಡ್ ಮೂನ್ ? 
ಯಾವಾಗ ಪೂರ್ಣ ಚಂದ್ರಗ್ರಹಣ (Chandra grahan) ಸಂಭವಿಸುತ್ತದೆಯೋ ಆಗ ಈ ಬ್ಲಡ್ ಮೂನ್ ಕಾಣಿಸುತ್ತದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಭೂಮಿಯ ನೆರಳು ಚಂದ್ರನ ಬೆಳಕನ್ನು  ಆವರಿಸಿಬಿಡುತ್ತದೆ. ಈಗ ಸೂರ್ಯನ ಬೆಳಕು ಭೂಮಿಯ  ಮೇಲೆ ಬಿದ್ದು. ನಂತರ ಚಂದ್ರನ ಮೇಲೆ ಬಿದ್ದಾಗ ಚಂದ್ರಪ್ರಕಾಶಮಾನವಾಗುತ್ತದೆ. ಭೂಮಿಯ ಸಮೀಪಕ್ಕೆ ಚಂದ್ರನ ಬಣ್ಣ ಮತ್ತಷ್ಟು ಗಾಢ ಬಣ್ಣಕ್ಕೆ ತಿರುಗುತ್ತದೆ. ಈ ಘಟನೆಗೆ ವಿಜ್ಞಾನದಲ್ಲಿ ಬ್ಲಡ್ ಮೂನ್ (blood moon) ಎಂದು ಕರೆಯುತ್ತಾರೆ. 

ಇದನ್ನೂ ಓದಿ  : Tobacco Products: ಈ ರಾಜ್ಯದಲ್ಲಿ ದುಬಾರಿಯಾಗಲಿವೆ ತಂಬಾಕು ಉತ್ಪನ್ನಗಳು!

ಭಾರತದಲ್ಲಿ ಬ್ಲಡ್ ಮೂನ್ -( Super Blood Moon In India ) :
ವರ್ಷದ ಮೊದಲ ಚಂದ್ರಗ್ರಹಣವು (Lunar Eclipse) ಮೇ 26, ಬುಧವಾರ ಕಾಣಿಸಿಕೊಳ್ಳುತ್ತದೆ. ಈ ದಿನವೇ, ಸೂಪರ್ ಬ್ಲಡ್ ಮೂನ್ (Super blood moon) ಕೂಡಾ ಗೋಚರಿಸಲಿದೆ. ಇದನ್ನು ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಉತ್ತರ ಮತ್ತು ದಕ್ಷಿಣ ಅಮೆರಿಕಾ ಮತ್ತು ಪೂರ್ವ ಮಹಾಸಾಗರದಲ್ಲಿ ಕಾಣಬಹುದು. ಇದು ಭಾರತದಲ್ಲಿ ಉಪಛಾಯಾ ಚಂದ್ರ ಗ್ರಹಣವಾಗಲಿದೆ.  ಬೆಳಿಗ್ಗೆ  8 ಗಂಟೆ 47 ನಿಮಿಷ 39 ಸೆಕೆಂಡುಗಳಲ್ಲಿ ಇದು ಆರಂಭವಾಗುತ್ತದೆ. ಮಧ್ಯಾಹ್ನ 1 ಗಂಟೆ 49 ನಿಮಿಷ 44 ಸೆಕೆಂಡುಗಳಿಗೆ ಕೊನೆಯಾಗಲಿದೆ. 

ಭಾರತದಲ್ಲಿ ಬ್ಲಡ್ ಮೂನ್ ವೀಕ್ಷಣೆ ಹೇಗೆ ?(How To Watch Super Blood Moon In India )
ಈ ಗ್ರಹಣವನ್ನು ನಮ್ಮ ದೇಶದಲ್ಲಿ ಗೋಚರಿಸುವುದಿಲ್ಲ. ನಮ್ಮ ದೇಶದಲ್ಲಿ ಇದು ಗೋಚರಿಸದ ಕಾರಣ, ಭಾರತದಲ್ಲಿ ಇದನ್ನು ವೀಕ್ಷಿಸಬೇಕಾದರೆ,  ಅನೇಕ ವೆಬ್‌ಸೈಟ್‌ಗಳಲ್ಲಿ (website)  ಪ್ರಸಾರದ ನೇರಪ್ರಸಾರದ ಮೂಲಕ ನೋಡಬಹುದು.

ಇದನ್ನೂ ಓದಿ  : Extremely Heavy Rain : ಯಾಸ್ ಸೈಕ್ಲೋನ್ ಪರಿಣಾಮ ಭಾರೀ ಬಿರುಗಾಳಿ ಜೊತೆ ಭಾರೀ ಮಳೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News