Viral Video: ಗಾಳಿಪಟದೊಂದಿಗೆ ಸಿಲುಕಿ ಆಕಾಶದಲ್ಲಿ ಹಾರಿದ ಮೂರು ವರ್ಷದ ಮಗು

ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕಿಯೊಬ್ಬಳು ಗಾಳಿಪಟದಲ್ಲಿ ಸಿಲುಕಿ ಗಾಳಿಯಲ್ಲಿ ತೇಲಾಡುತ್ತಿರುವುದನ್ನು ಕಾಣಬಹುದು.

Written by - Ranjitha R K | Last Updated : Dec 29, 2021, 03:20 PM IST
  • ಇಲ್ಲಿದೆ ಅಪಾಯಕಾರಿ ವಿಡಿಯೋ
  • ವೈರಲ್ ಆಗುತ್ತಿದೆ ಈ ವಿಡಿಯೋ
  • ಪಟದೊಂದಿಗೆ ಹಾರಿದ ಮೂರೂ ವರ್ಷದ ಬಾಲಕಿ
Viral Video:  ಗಾಳಿಪಟದೊಂದಿಗೆ ಸಿಲುಕಿ ಆಕಾಶದಲ್ಲಿ ಹಾರಿದ ಮೂರು ವರ್ಷದ ಮಗು  title=
ಪಟದೊಂದಿಗೆ ಹಾರಿದ ಮೂರೂ ವರ್ಷದ ಬಾಲಕಿ (photo instagram)

ನವದೆಹಲಿ :  ಸಾಮಾಜಿಕ ಮಾಧ್ಯಮದಲ್ಲಿ (Social media) ಅನೇಕ ರೀತಿಯ ವಿಡಿಯೋಗಳನ್ನು ಕಾಣಬಹುದು. ಕೆಲವು ವಿಡಿಯೋಗಳು  ಮನಸ್ಸಿಗೆ ಕಚಗುಳಿಯಿಟ್ಟರೆ, ಇನ್ನು ಕೆಲವು ದೃಶ್ಯಗಳನ್ನು ನೋಡಿದರೆ, ಕರುಳು ಹಿಂಡಿದಂತಾಗುತ್ತದೆ. ಇನ್ನು ಕೆಲವು ವಿಡಿಯೋಗಳನ್ನು ನೋಡಿದರೆ ಹೀಗೂ ಸಾಧ್ಯವೇ ಎಂದು ಆಶ್ಚರ್ಯವಾಗುತ್ತದೆ. ಇದೀಗ ಬಾಲಕಿಯ ವಿಡಿಯೋವೊಂದು (Viral video) ಹೊರಬಿದ್ದಿದ್ದು, ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ವೀಡಿಯೋದಲ್ಲಿ ಬಾಲಕಿಯೊಬ್ಬಳು ಗಾಳಿಪಟದೊಂದಿಗೆ ಸಿಲುಕಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ ಗಾಳಿಪಟ ಹಾರಿಸುವಾಗ, ಅದರ ದಾರದಿಂದಾಗಿ ಹಾನಿಯುಂಟಾಗುವುದನ್ನು ನಾವು ಕೇಳಿರುತ್ತೇವೆ. ಆದರೆ ಗಾಳಿಪಟ ಹಾರಿಸುವ ಮಗುವನ್ನೇ ಹಾರಿಸಿಕೊಂಡು (Kite video) ಹೋಗಿರುವುದನ್ನು ಎಲ್ಲಿಯೂ ನೋಡಿರಲಿಕ್ಕಿಲ್ಲ. ಆದರೆ ಇಲ್ಲಿ ಅಂಥಹ ಅನಾಹುತ ಸಂಭವಿಸಿದೆ. 

ಗಾಳಿಪಟದಲ್ಲಿ ಸಿಲುಕಿದ ಹುಡುಗಿ :
ವೈರಲ್ ಆಗಿರುವ ವಿಡಿಯೋದಲ್ಲಿ (Viral video) ಬಾಲಕಿಯೊಬ್ಬಳು ಗಾಳಿಪಟದಲ್ಲಿ ಸಿಲುಕಿ ಗಾಳಿಯಲ್ಲಿ ತೇಲಾಡುತ್ತಿರುವುದನ್ನು ಕಾಣಬಹುದು. ಬಾಲಕಿ ಗಾಳಿಯಲ್ಲಿ ಹಾರಾಡುತ್ತಿರುವುದನ್ನು ಕಂಡು ಮೈದಾನದಲ್ಲಿ ಸಾಕಷ್ಟು ಜನ ಜಮಾಯಿಸಿದ್ದಾರೆ. ಸ್ವಲ್ಪ ಸಮಯದ ನಂತರ ಬಾಲಕಿ ನೆಲದ ಮೇಲೆ ಬೀಳುವುದನ್ನು ಕೂಡಾ ಇಲ್ಲಿ ಗಮನಿಸಬಹುದು. ಬಾಲಕಿ ನೆಲಕ್ಕೆ ಬೀಳುತ್ತಿದ್ದಂತೆಯೇ ಅನೇಕ ಜನರು ಅಲ್ಲಿ ಸೇರುತ್ತಾರೆ.  ಈ ವಿಡಿಯೋ ತೈವಾನ್ ನದ್ದು ಎಂದು ಹೇಳಲಾಗುತ್ತದೆ. ಗಾಳಿಪಟದಲ್ಲಿ ಸಿಕ್ಕಿಬಿದ್ದ ಬಾಲಕಿಗೆ ಕೇವಲ ಮೂರು ವರ್ಷ(child video) ಎಂದು ಹೇಳಲಾಗುತ್ತಿದೆ. 

 ಇದನ್ನೂ ಓದಿ : WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್

 
 
 
 

 
 
 
 
 
 
 
 
 
 
 

A post shared by Meme wala (@memewalanews)

 

ನೆಲದ ಮೇಲೆ ಬಿದ್ದ ಪುಟ್ಟ ಪೋರಿ : 
ಗಾಳಿಪಟದೊಂದಿಗೆ ಗಾಳಿಯಲ್ಲಿ ತೂಗಾಡುತ್ತಿರುವ ಹುಡುಗಿ ಸ್ವಲ್ಪ ಸಮಯದ ನಂತರ ನೆಲದ ಮೇಲೆ ಬೀಳುತ್ತಾಳೆ. ಬಿದ್ದ ಬಾಲಕಿಗೆ ಗಾಯಗಳಾಗಿರಬೇಕು ಎಂದು ಹೇಳಲಾಗಿದೆ.  ಮೆಮೆವಾಲನ್ಯೂಸ್ ಹೆಸರಿನ ಇನ್‌ಸ್ಟಾಗ್ರಾಮ್ (instagram) ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.  ಈ ವಿಡಿಯೋಗೆ ನೆಟಿಜನ್‌ಗಳ ಪ್ರತಿಕ್ರಿಯೆಗಳೂ ಬರಲಾರಂಭಿಸಿವೆ.

 ಇದನ್ನೂ ಓದಿ : Video : ಮದುವೆಯ ಅಲಂಕಾರ ಮುಗಿಸಿಕೊಂಡು ಬಂದ ವಧುವಿನಿಂದ ವಿವಾಹಕ್ಕೆ ನಿರಾಕರಣೆ ಕಾರಣ ಇಷ್ಟೇ .!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News