ವಿಶೇಷ ರೈಲುಗಳ ಸಮಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ವಲಯಗಳಿಗೆ ರೈಲ್ವೆ ಮಂಡಳಿ ಸೂಚನೆ

230 ವಿಶೇಷ ರೈಲುಗಳ ಓಟದಲ್ಲಿ ಶೇ 100 ರಷ್ಟು ಸಮಯ ಪ್ರಜ್ಞೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆ (Indian railways) ತನ್ನ ವಲಯಗಳಿಗೆ ಸೂಚನಾ ಪತ್ರವನ್ನು ಕಳುಹಿಸಿದೆ.

Last Updated : Jun 7, 2020, 12:00 AM IST
ವಿಶೇಷ ರೈಲುಗಳ ಸಮಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ವಲಯಗಳಿಗೆ ರೈಲ್ವೆ ಮಂಡಳಿ ಸೂಚನೆ  title=

ನವದೆಹಲಿ: 230 ವಿಶೇಷ ರೈಲುಗಳ ಓಟದಲ್ಲಿ ಶೇ 100 ರಷ್ಟು ಸಮಯ ಪ್ರಜ್ಞೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆ (Indian railways) ತನ್ನ ವಲಯಗಳಿಗೆ ಸೂಚನಾ ಪತ್ರವನ್ನು ಕಳುಹಿಸಿದೆ.

ರೈಲ್ವೆ ಮಂಡಳಿಯ ಅಧ್ಯಕ್ಷ ವಿ ಕೆ ಯಾದವ್ ಎಲ್ಲಾ ಸಾಮಾನ್ಯ ವ್ಯವಸ್ಥಾಪಕರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ 15 ಜೋಡಿ ರಾಜಧಾನಿ ವಿಶೇಷ ರೈಲುಗಳು ಮತ್ತು 100 ಜೋಡಿ ಪ್ಯಾಸೆಂಜರ್ ರೈಲುಗಳು ಯಾವುದೇ ವಿಳಂಬವಿಲ್ಲದೆ ತಮ್ಮ ವೇಳಾಪಟ್ಟಿಯನ್ನು ಕಾಯ್ದುಕೊಳ್ಳುವಂತೆ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ರೈಲುಗಳ ಸಮಯ ಪ್ರಜ್ಞೆಯನ್ನು ಮೇಲ್ವಿಚಾರಣೆ ಮಾಡುವಂತೆ ಅವರು ವಲಯ ಮುಖ್ಯಸ್ಥರನ್ನು ಕೇಳಿಕೊಂಡಿದ್ದಾರೆ, ನೆಟ್‌ವರ್ಕ್‌ನಲ್ಲಿ ಚಾಲನೆಯಲ್ಲಿರುವ ರೈಲುಗಳ ಸಂಖ್ಯೆ ಪ್ರಸ್ತುತ ಚಿಕ್ಕದಾಗಿದೆ, ಆದ್ದರಿಂದ ಸಮಯ ಪ್ರಜ್ಞೆಯು ಶೇಕಡಾ 100 ರಷ್ಟು ಆಗಿರಬೇಕು.

ಈ ರೈಲುಗಳನ್ನು ಓಡಿಸುವಲ್ಲಿ ವಿಳಂಬವಾಗಿದೆ ಎಂದು ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ,ಈ ರೈಲುಗಳ ಕಾರ್ಯಾಚರಣೆಯಲ್ಲಿ ಹೆಚ್ಚಿನ ಜಾಗರೂಕರಾಗಿರಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.ಈ ವಲಯಗಳಲ್ಲಿ ಹೆಚ್ಚಿನ ಸರಕು ರೈಲುಗಳು ಸಹ ಓಡುತ್ತವೆ, ಈ ಹಿನ್ನಲೆಯಲ್ಲಿ ವಿಳಂಬಕ್ಕೆ ಇದು ಒಂದು ಕಾರಣ ಎನ್ನಲಾಗಿದೆ. ಶ್ರಮಿಕ್ ವಿಶೇಷ ರೈಲುಗಳ ಚಾಲನೆಯಲ್ಲಿ ರೈಲ್ವೆ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ.

ಮೂಲಗಳ ಪ್ರಕಾರ, ಕೆಲವು ಪ್ರೋಟೋಕಾಲ್‌ಗಳು ಒಳಗೊಂಡಿರುವ ಹಿನ್ನಲೆಯಲ್ಲಿ ಮೂಲ ನಿಲ್ದಾಣಗಳಲ್ಲಿಯೇ ಶೇ 50 ರಷ್ಟು ರೈಲುಗಳು ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಓಡುತ್ತವೆ ಎನ್ನಲಾಗಿದೆ.ಪ್ರತಿ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ , ರೋಗಲಕ್ಷಣವಿಲ್ಲದ ವ್ಯಕ್ತಿಗಳು ಮಾತ್ರ ರೈಲುಗಳನ್ನು ಹತ್ತುವುದು, ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು, ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಅವರ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಇವೆಲ್ಲವೂ ಕೂಡ ಪ್ರೋಟೋಕಾಲ್ ನಲ್ಲಿ ಬರುತ್ತವೆ.ಈ ಹಿನ್ನಲೆಯಲ್ಲಿ ಶ್ರಮಿಕ್ ರೈಲುಗಳು ವಿಳಂಬವಾಗುತ್ತವೆ ಎನ್ನಲಾಗಿದೆ.
 

Trending News