Viarl video : ಹಾವಿಗೆ ಆಹಾರವಾಗಿ ಇಲಿಯನ್ನು ನೀಡಿದರೆ, ಈ ಸರ್ಪ ಮತ್ತು ಮೂಷಕನ ಆಟವನ್ನೊಮ್ಮೆ ನೋಡಿ

ಇಲ್ಲಿ ವೈರಲ್ ಆಗಿರುವ ವಿಡಿಯೋ ಕೂಡಾ ವಿಶೇಷವಾಗಿದೆ. ಈ ವಿಡಿಯೋ ನೋಡಿದವರು ಆಶ್ಚರ್ಯಪಟ್ಟಿದ್ದೇ ಹೆಚ್ಚು. ಯಾಕೆಂದರೆ ಇಲ್ಲಿ ಹಾವು ಮತ್ತು ಇಲಿ ಪರಸ್ಪರ ಆಟವಾಡುತ್ತಿರುವುದನ್ನು ನೋಡಬಹುದು.  

Written by - Ranjitha R K | Last Updated : Nov 11, 2021, 07:23 PM IST
  • ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಆಗುತ್ತಿದೆ ಸಾವಿರಾರು ವಿಡಿಯೋ
  • ಕೆಲ ವಿಡಿಯೋ ವಿಶೇಷ ಸ್ಥಾನ ಪಡೆದುಕೊಳ್ಳುತ್ತದೆ
  • ಹಾವು ಇಲಿಯ ವಿಡಿಯೋ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ
Viarl video : ಹಾವಿಗೆ ಆಹಾರವಾಗಿ ಇಲಿಯನ್ನು ನೀಡಿದರೆ, ಈ ಸರ್ಪ ಮತ್ತು ಮೂಷಕನ ಆಟವನ್ನೊಮ್ಮೆ ನೋಡಿ    title=
ಹಾವು ಇಲಿಯ ವಿಡಿಯೋ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ (photo instagram)

ನವದೆಹಲಿ : ಇಂಟರ್ನೆಟ್ ಮೂಲಕ ಅದೆಷ್ಟೋ ಚಿತ್ರ ವಿಚಿತ್ರ ವಿಡಿಯೋಗಳನ್ನು ವೀಕ್ಷಿಸುವುದು ಸಾಧ್ಯವಾಗುತ್ತದೆ. ಸಾಮಾಜಿಕ  ಮಾಧ್ಯಮಗಳಲ್ಲಿ (Socia media) ಪ್ರತಿ ದಿನ ಸಾವಿರಾರು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ. ಇವುಗಳಲ್ಲಿ ಕೆಲವೊಂದು ವಿಡಿಯೋ ಮನಸ್ಸಿಗೆ ಮುದ ನೀಡಿದರೆ, ಇನ್ನುಕೆಲವು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಸಾವಿರಾರು ವಿಡಿಯೋಗಳಲ್ಲಿ ತಮ್ಮ ವಿಶೇಷತೆಗಳಿಂದ ಕೆಲವು ವಿಡಿಯೋಗಳು (Viral Video) ವಿಶೇಷ ಮನ್ನಣೆ ಪಡೆಯುತ್ತವೆ

ಇಲ್ಲಿ ವೈರಲ್ ಆಗಿರುವ ವಿಡಿಯೋ (Viral video) ಕೂಡಾ ವಿಶೇಷವಾಗಿದೆ. ಈ ವಿಡಿಯೋ ನೋಡಿದವರು ಆಶ್ಚರ್ಯಪಟ್ಟಿದ್ದೇ ಹೆಚ್ಚು. ಯಾಕೆಂದರೆ ಇಲ್ಲಿ ಹಾವು (Snake video) ಮತ್ತು ಇಲಿ ಪರಸ್ಪರ ಆಟವಾಡುತ್ತಿರುವುದನ್ನು ನೋಡಬಹುದು. ಇಲ್ಲಿ ದೊಡ್ಡ ಗಾಜಿನ ಪೆಟ್ಟಿಗೆಯೊಳಗೆ ಒಂದು ದೈತ್ಯ ಹಾವನ್ನು ಕಾಣಬಹುದು. ಈ ಹಾವಿಗೆ ಆಹಾರವಾಗಿ ಬಿಳಿ ಬಣ್ಣದ ಇಲಿಯನ್ನು ನೀಡಲಾಗಿದೆ. ಆದರೆ, ತಾನು ಈ ಹಾವಿನ ಆಹಾರವಾಗ ಬಲ್ಲೆ ಎಂಬ ಭಯ ಇಲಿಯಲ್ಲಿಯೂ ಕಾಣುತ್ತಿಲ್ಲ. ಇಲಿಯನ್ನು (snake and mouse video) ತಿಂದು ಹೊಟ್ಟೆ ತುಂಬಿಸಿಕೊಳ್ಳುವ ತವಕ ಹಾವಿನಲ್ಲಿಯೂ ಕಂಡು ಬರುತ್ತಿಲ್ಲ . ಹಾವು ಮತ್ತು ಇಲಿ ಎರಡು ಪರಸ್ಪರ ಸ್ನೇಹಿತರಂತೆ ಆಟವಾಡುತ್ತಿರುವುದನ್ನು ಇಲ್ಲಿ ಕಾಣಬಹುದು.   

 
 
 
 

 
 
 
 
 
 
 
 
 
 
 

A post shared by Royal Pythons (@royal_pythons_)

 

ಇದನ್ನೂ ಓದಿ Viral video : ಮರಿಗಳ ಮೇಲೆ ಕಣ್ಣು ಹಾಕಿದ್ದೇ ತಪ್ಪಾಯಿತು, ನಾಯಿಗೆ ಏಳು ಲೋಕ ತೋರಿಸಿದ ತಾಯಿ ಕೋಳಿ

ಇನ್ನೂ ವಿಶೇಷವೆಂದರೆ ಇಲ್ಲಿ ಇಲಿ ಹಾವಿನ ಬಾಯಿಯ ಬಳಿಯೇ ಸುತ್ತಾಡುತ್ತಿದೆ. ಹಾವಿನ ಮೈ ಮೇಲೆಲ್ಲಾ ಓಡಾಡುತ್ತಿದೆ. ಹಾವಿನ ಬಾಲದೊಂದಿಗೆ ಆಡುತ್ತಿದೆ. ಕುತ್ತಿಗೆ ಬಳಿ ನೇತಾಡುತ್ತಿದೆ.  ಆದರೂ ಹಾವು ಇಲಿಯನ್ನು ತಿನ್ನುವ ಪ್ರಯತ್ನ ಮಾಡುತ್ತಿಲ್ಲ. ಈ ಕಾರಣಕ್ಕಾಗಿಯೇ ವಿಡಿಯೋ (Viral video) ನೋಡಿದ ಎಲ್ಲರಿಗೂ ಆಶ್ಚರ್ಯವಾಗುತ್ತಿದೆ. 

ವೈರಲ್ ಆಗುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮ (Social media) ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) royal_pythons ಹೆಸರಿನ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಬಾರಿ ವೀಕ್ಷಿಸಲಾಗಿದ್ದು, 13 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Wedding Video: ವಧುವಿನ ಮುಂದೆ ನಕರ ತೋರಿಸಿದ ವರ, ಮುಂದೇನಾಯ್ತು ಈ ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News