ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣಕ್ಕೆ ಇಳಿಯಲಿರುವ ಶಿವಸೇನೆ..!

ಈ ವರ್ಷದ ಕೊನೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಪಕ್ಷದ ವಕ್ತಾರ ಸಂಜಯ್ ರೌತ್ ಭಾನುವಾರ ಪ್ರಕಟಿಸಿದ್ದಾರೆ.

Last Updated : Jan 17, 2021, 08:43 PM IST
  • ಈಗಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಯ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತೀವ್ರ ಸ್ಪರ್ಧೆ ಬೆನ್ನಲ್ಲೇ ಈಗ ಶಿವಸೇನೆ ನಡೆ ಮತ್ತಷ್ಟು ಕುತೂಹಲ ಕೆರಳಿಸಿದೆ.
  • ಕಳೆದ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಪಕ್ಷಕ್ಕೆ ಬಿಜೆಪಿ ತೀವ್ರ ಸ್ಪರ್ಧೆಯನ್ನು ನೀಡಿತ್ತು, ಈಗ ಅದು ದೀದಿಯಿಂದ ಆಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣಕ್ಕೆ ಇಳಿಯಲಿರುವ ಶಿವಸೇನೆ..!

ನವದೆಹಲಿ: ಈ ವರ್ಷದ ಕೊನೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಪಕ್ಷದ ವಕ್ತಾರ ಸಂಜಯ್ ರೌತ್ ಭಾನುವಾರ ಪ್ರಕಟಿಸಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಯ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತೀವ್ರ ಸ್ಪರ್ಧೆ ಬೆನ್ನಲ್ಲೇ ಈಗ ಶಿವಸೇನೆ ನಡೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: 'ಟ್ಯಾಗೋರ್ ಅವರ ನಾಡಿನಲ್ಲಿ ಎಂದಿಗೂ ದ್ವೇಷದ ರಾಜಕಾರಣ ಗೆಲ್ಲಲು ಸಾಧ್ಯವಿಲ್ಲ'

ಪಕ್ಷದ ಮುಖ್ಯಸ್ಥ ಶ್ರೀ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಿದ ನಂತರ, ಶಿವಸೇನೆ (Shiv Sena) ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದೆ. ನಾವು ಶೀಘ್ರದಲ್ಲೇ ಕೋಲ್ಕತ್ತಾಗೆ ತಲುಪುತ್ತಿದ್ದೇವೆ" ಎಂದು ಸಂಸದ ಮತ್ತು ಪಕ್ಷದ ಉನ್ನತ ವಕ್ತಾರರಾದ ರೌತ್ ಟ್ವೀಟ್ ಮಾಡಿದ್ದಾರೆ.

ಕಮ್ಯುನಿಸ್ಟ್ ಭದ್ರಕೋಟೆಯನ್ನು ಭೇದಿಸಿ ಪಶ್ಚಿಮ ಬಂಗಾಳದಲ್ಲಿ ಎರಡು ಅವಧಿಗಳ ಕಾಲ ಆಡಳಿತ ನಡೆಸಿದ ಮಮತಾ ಬ್ಯಾನರ್ಜೀಯಿಂದ ಅಧಿಕಾರ ಕಿತ್ತುಕೊಳ್ಳುವ ಸಂಕಲ್ಪವನ್ನು ಬಿಜೆಪಿ ಮಾಡಿದೆ.ಕಳೆದ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಪಕ್ಷಕ್ಕೆ ಬಿಜೆಪಿ ತೀವ್ರ ಸ್ಪರ್ಧೆಯನ್ನು ನೀಡಿತ್ತು, ಈಗ ಅದು ದೀದಿಯಿಂದ ಆಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಇದನ್ನೂ ಓದಿ: BJP: 'ಮುಂದಿನ ತಿಂಗಳು 50 TMC ಶಾಸಕರು ಬಿಜೆಪಿ ಸೇರ್ಪಡೆ'

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗೆಲುವಿನ ನಂತರ ಹಲವಾರು ರಾಜ್ಯಗಳನ್ನು ತನ್ನತ್ತ ತಿರುಗಿಸಿದ ನಂತರ, ಬಿಜೆಪಿ ನಾಯಕತ್ವವು ಇತ್ತೀಚಿನ ವರ್ಷಗಳಲ್ಲಿ ಬಂಗಾಳವನ್ನು ತನ್ನ ಪ್ರಮುಖ ಆದ್ಯತೆಗಳಲ್ಲಿ ಒಂದನ್ನಾಗಿ ಮಾಡಿಕೊಂಡಿದೆ,ಅದಕ್ಕಾಗಿ ಬಿಜೆಪಿ ಈಗ ದೀದಿ ಅವರನ್ನು ನೇರ ಟಾರ್ಗೆಟ್ ಮಾಡಿದ್ದು, ತೀವ್ರ ಟೀಕಾ ಪ್ರಹಾರವನ್ನು ನಡೆಸಿದೆ.ಅಷ್ಟೇ ಅಲ್ಲದೆ ಆಕ್ರಮಣಕಾರಿ ಪ್ರಚಾರ ಹಮ್ಮಿಕೊಳ್ಳಲು ಮುಂದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News