ಅಫ್ಜಲ್ ಗುರು ಅವರ ಮಗ ಗಲಿಬ್ ಅಫ್ಜಲ್ ಗುರು ಜಮ್ಮು ಮತ್ತು ಕಾಶ್ಮೀರದ ಬೋರ್ಡ್ ಪರೀಕ್ಷೆಯಲ್ಲಿಜಮ್ಮು ಮತ್ತು ಕಾಶ್ಮೀರದ ಬೋರ್ಡ್ ಪರೀಕ್ಷೆಯಲ್ಲಿ 12ನೇ ತರಗತಿಯನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಗಲಿಬ್ ಅಫ್ಜಲ್ ಗುರು 500 ಅಂಕಗಳಲ್ಲಿ 441 ಅಂಕಗಳನ್ನು ಗಳಿಸಿದ್ದಾರೆ.
Afzal Guru's son Ghalib Afzal Guru clears class XII J&K state board exams with distinction. pic.twitter.com/XH0LSK2vni
— ANI (@ANI) January 11, 2018
ಜಮ್ಮು ಮತ್ತು ಕಾಶ್ಮೀರ ರಾಜ್ಯ ಬೋರ್ಡ್ ಆಫ್ ಸ್ಕೂಲ್ ಎಜ್ಯುಕೇಷನ್ ಫಲಿತಾಂಶಗಳು ಗುರುವಾರ ಬೆಳಿಗ್ಗೆ ಘೋಷಿಸಲ್ಪಟ್ಟವು. ಗಲಿಬ್ 500 ಅಂಕಗಳನ್ನು 441 ಅಂಕಗಳನ್ನು ಗಳಿಸಿದರು. ಅವರು ಪರಿಸರ ವಿಜ್ಞಾನದಲ್ಲಿ 94, ರಸಾಯನಶಾಸ್ತ್ರದಲ್ಲಿ 89, ಭೌತಶಾಸ್ತ್ರದಲ್ಲಿ 87, ಜೀವಶಾಸ್ತ್ರದಲ್ಲಿ 85 ಮತ್ತು ಸಾಮಾನ್ಯ ಇಂಗ್ಲಿಷ್ನಲ್ಲಿ 86 ಅಂಕಗಳನ್ನು ಗಳಿಸಿದ್ದಾರೆ.
ತನ್ನ ಮೆಟ್ರಿಕ್ ಪರೀಕ್ಷೆಯಲ್ಲಿ ಶೇ. 95 ಕ್ಕಿಂತಲೂ ಹೆಚ್ಚು ಅಂಕ ಪಡೆದುಕೊಂಡ ನಂತರ, ಮೃತ ಭಯೋತ್ಪಾದಕ ಅಫ್ಜಲ್ ಗುರು ಅವರ ಮಗನಾದ ಗಲಿಬ್ ಅಫ್ಜಲ್ ಗುರು ಎರಡು ವರ್ಷಗಳ ನಂತರ 12 ನೇ ತರಗತಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವ ಮೂಲಕ ತನ್ನ ಯಶಸ್ಸನ್ನು ಪುನರಾವರ್ತಿಸಿದ್ದಾನೆ.
2016 ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಶೇ. 95 ಅಂಕ ಗಳಿಸಿದ್ದ, ಗಲಿಬ್ ಅವರು ವೈದ್ಯಕೀಯ ಶಿಕ್ಷಣ ಹೊಂದುವ ಅಭಿಲಾಷೆ ಹೊಂದಿರುವುದಾಗಿ ತಿಳಿಸಿದ್ದರು.
ಗಲೀಬ್ ಅಫ್ಜಲ್ ಗುರುವಿನ ತಂದೆ ಮೊಹಮ್ಮದ್ ಅಫ್ಜಲ್ ಗುರು ಅವರು ಕಾಶ್ಮೀರಿ ಪ್ರತ್ಯೇಕತಾವಾದಿಯಾಗಿದ್ದರು. ಇವರು 2001 ರ ಭಾರತೀಯ ಸಂಸತ್ತಿನ ದಾಳಿಯಲ್ಲಿ ತಮ್ಮ ಪಾತ್ರಕ್ಕಾಗಿ ಶಿಕ್ಷೆಗೊಳಗಾದರು. ಅವನ ಈ ಅಪರಾಧಕ್ಕಾಗಿ 2013ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಇದನ್ನು ಭಾರತೀಯ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.