COVID-19 ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ 3 ಲಕ್ಷ ಪ್ರಕರಣ ಹಿಂತೆಗೆದುಕೊಂಡ ಯುಪಿ ಸರ್ಕಾರ

ಉತ್ತರ ಪ್ರದೇಶ ಸರ್ಕಾರ ಮಂಗಳವಾರ (ಅಕ್ಟೋಬರ್ 26) ರಾಜ್ಯದಲ್ಲಿ COVID-19 ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ ಸುಮಾರು ಮೂರು ಲಕ್ಷ ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ.

Written by - Zee Kannada News Desk | Last Updated : Oct 26, 2021, 11:41 PM IST
  • ಉತ್ತರ ಪ್ರದೇಶ ಸರ್ಕಾರ ಮಂಗಳವಾರ (ಅಕ್ಟೋಬರ್ 26) ರಾಜ್ಯದಲ್ಲಿ COVID-19 ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ ಸುಮಾರು ಮೂರು ಲಕ್ಷ ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ.
 COVID-19 ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ 3 ಲಕ್ಷ ಪ್ರಕರಣ ಹಿಂತೆಗೆದುಕೊಂಡ ಯುಪಿ ಸರ್ಕಾರ title=
ಸಾಂದರ್ಭಿಕ ಚಿತ್ರ

ನವದೆಹಲಿ: ಉತ್ತರ ಪ್ರದೇಶ ಸರ್ಕಾರ ಮಂಗಳವಾರ (ಅಕ್ಟೋಬರ್ 26) ರಾಜ್ಯದಲ್ಲಿ COVID-19 ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ ಸುಮಾರು ಮೂರು ಲಕ್ಷ ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ.

ಇದನ್ನೂ ಓದಿ: Gold Price Today : ಕರೋನಾಸುರನ ಆರ್ಭಟದ ನಡುವೆಯೂ ಬಂದಿದೆ ಚಿನ್ನದಂಥ ಸುದ್ದಿ

ಯುಪಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಹೇಳಿಕೆಯು ಕಳೆದ ಒಂದೂವರೆ ವರ್ಷಗಳಲ್ಲಿ ವಿವಿಧ ಸಮಯಗಳಲ್ಲಿ ಕೇಂದ್ರ ಮತ್ತು ರಾಜ್ಯವು ಹೊರಡಿಸಿದ ವಿವಿಧ ಆದೇಶಗಳಿಗೆ ಅನುಗುಣವಾಗಿ ಹಲವಾರು COVID-19 ಗೆ ಸಂಬಂಧಿತ ನಿರ್ಬಂಧಗಳನ್ನು ಅಳವಡಿಸಲಾಗಿದೆ ಎಂದು ಗಮನಿಸಿದೆ.ಅದರಂತೆ, ವಿಪತ್ತು ನಿರ್ವಹಣಾ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ, ಐಪಿಸಿ ಸೆಕ್ಷನ್ 188 ಮತ್ತು ಇತರ ಕಾನೂನುಗಳ ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: ಸಾಕಪ್ಪ ಸಾಕು ಬೆಂಗಳೂರು.! ಲಾಕ್ ಡೌನ್ ಗೆ ಹೆದರಿ ಊರಿಗೆ ದೌಡಾಯಿಸುತ್ತಿರುವ ಜನ

"ವಿಪತ್ತು ನಿರ್ವಹಣಾ ಕಾಯಿದೆ, ಸಾಂಕ್ರಾಮಿಕ ರೋಗಗಳ ಕಾಯಿದೆ, ಐಪಿಸಿ ಸೆಕ್ಷನ್ 188 ಮತ್ತು ಇತರ ಕಡಿಮೆ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಅಂತಹ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ" ಎಂದು ಸರ್ಕಾರ ಹೇಳಿದೆ.

ಏತನ್ಮಧ್ಯೆ, ರಾಜ್ಯದಲ್ಲಿ ಹೊಸ ಕೋವಿಡ್  (Coronavirus) ಪ್ರಕರಣಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ. ಚಲನೆ ಮತ್ತು ಇತರ ಚಟುವಟಿಕೆಗಳ ಮೇಲೆ ಹೇರಲಾದ ಹೆಚ್ಚಿನ ನಿರ್ಬಂಧಗಳನ್ನು ಸಡಿಲಿಸಲಾಗಿದೆ.ಹೊಸ ಪ್ರಕರಣಗಳ ಇಳಿಕೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಕಳೆದ ವಾರ ರಾತ್ರಿ ಕರ್ಫ್ಯೂ ಅನ್ನು ಕೊನೆಗೊಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News