UIDAI Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಈ ದಾಖಲೆಗಳು ಅಗತ್ಯ, UIDAI ಜಾರಿ ಮಾಡಿದೆ ಪಟ್ಟಿ

UIDAI ನಿಂದ ಈ ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಆಧಾರ್ ಅನ್ನು ನವೀಕರಿಸಲು ಯಾವ ದಾಖಲೆಗಳು ಮಾನ್ಯವಾಗಿರುತ್ತವೆ ಎನ್ನುವುದು ಈ ಪಟ್ಟಿಯ ಮೂಲಕ ತಿಳಿಯುತ್ತದೆ. 

Written by - Ranjitha R K | Last Updated : Sep 2, 2021, 08:23 PM IST
  • ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ ನೀಡಿದ UIDAI
  • ಆಧಾರ್ ಅನ್ನು ನವೀಕರಿಸಲು ಯಾವ ದಾಖಲೆಗಳು ಬೇಕು
  • ದಾಖಲೆಗಳ ಪಟ್ಟಿ ಬಿಡುಗಡೆ ಮಾಡಿದ UIDAI
 UIDAI Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಈ ದಾಖಲೆಗಳು ಅಗತ್ಯ, UIDAI  ಜಾರಿ ಮಾಡಿದೆ ಪಟ್ಟಿ   title=
ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ ನೀಡಿದ UIDAI (file photo)

ನವದೆಹಲಿ : UIDAI Update: ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿಯನ್ನು UIDAI ನೀಡಿದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀವು ಏನನ್ನಾದರೂ ಅಪ್‌ಡೇಟ್ ಮಾಡಲು ಬಯಸಿದರೆ ಇದು ನಿಮಗೆ ಪ್ರಮುಖ ಸುದ್ದಿಯಾಗಿದೆ. ಬ್ಯಾಂಕ್ ಖಾತೆಯಿಂದ ಪಾಸ್‌ಪೋರ್ಟ್ ಮಾಡುವವರೆಗೆ ಎಲ್ಲೆಡೆ ಆಧಾರ್ ಅನ್ನು ಬಳಸಲಾಗುತ್ತದೆ. ಆದ್ದರಿಂದ ತಪ್ಪು ಜನ್ಮ ದಿನಾಂಕ ಅಥವಾ ತಪ್ಪು ವಿಳಾಸ ಆಧಾರ್ ನಲ್ಲಿದ್ದರೆ ನಿಮಗೆ ಸಮಸ್ಯೆಯಾಗಬಹುದು. ಹಾಗಾಗಿ ದಾಖಲೆಗಳಲ್ಲಿ ಏನಾದರೂ ತಪ್ಪುಗಳಾಗಿದ್ದರೆ,  ಇದನ್ನು  ನಿಮ್ಮ ಆಧಾರ್‌ನಲ್ಲಿ, ಸರಿಪಡಿಸಿಕೊಳ್ಳಬೇಕಾಗುತ್ತದೆ.

UIDAI ನಿಂದ ಈ ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಆಧಾರ್ ಅನ್ನು ನವೀಕರಿಸಲು (Aadhaar update) ಯಾವ ದಾಖಲೆಗಳು ಮಾನ್ಯವಾಗಿರುತ್ತವೆ ಎನ್ನುವುದು ಈ ಪಟ್ಟಿಯ ಮೂಲಕ ತಿಳಿಯುತ್ತದೆ. 

ಇದನ್ನೂ ಓದಿ :  ಚಿಪ್ ಕೊರತೆಯಿಂದ 7 ದಿನ ಉತ್ಪಾದನೆ ಸ್ಥಗಿತಗೊಳಿಸಲಿರುವ ಮಹೀಂದ್ರಾ

 ಟ್ವೀಟ್ ಮೂಲಕ ಮಾಹಿತಿ ನೀಡಿರುವ ಯುಐಡಿಎಐ : 
ಯುಐಡಿಎಐ ತನ್ನ ಟ್ವೀಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಆಧಾರ್ (Aadhaar card) ಅನ್ನು ಅಪ್‌ಡೇಟ್ ಮಾಡಬೇಕಾದರೆ ಕೇಳು ದಾಖಲೆಗಳ ಅಗತ್ಯವಿರುತ್ತದೆ. ಈ ದಾಖಲೆಗಳು ನಿಮ್ಮ ಹೆಸರಿನಲ್ಲಿದೆಯೇ ? ಇದ್ದರೆ ಅದು ಮಾನ್ಯವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಈ ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ :
UIDAI ಪ್ರಕಾರ, ಆಧಾರ್‌ನಲ್ಲಿ ಗುರುತಿನ ಪುರಾವೆಗಾಗಿ 32 ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ. ಸಂಬಂಧದ ಪುರಾವೆಗಾಗಿ 14 ದಾಖಲೆಗಳನ್ನು, ಹುಟ್ಟಿದ ದಿನಾಂಕಕ್ಕೆ 15  ಮತ್ತುವಿಳಾಸದ ಪುರಾವೆಗಾಗಿ  45 ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ. ಈ ದಾಖಲೆಗಳ ಪಟ್ಟಿಯನ್ನು ಪರಿಶೀಲಿಸೋಣ.

ಸಂಬಂಧದ ಪುರಾವೆ :
MNREGA ಜಾಬ್ ಕಾರ್ಡ್
ಪಿಂಚಣಿ ಕಾರ್ಡ್
ಪಾಸ್ಪೋರ್ಟ್ (Passport)
ಸೇನಾ ಕ್ಯಾಂಟೀನ್ ಕಾರ್ಡ್

ಹುಟ್ಟಿದ ದಿನಾಂಕದ ದಾಖಲೆ:
ಜನನ ಪ್ರಮಾಣಪತ್ರ
ಪಾಸ್ಪೋರ್ಟ್
ಪ್ಯಾನ್ ಕಾರ್ಡ್(PAN card)
ಮಾರ್ಕ್ ಶೀಟ್ 
SSLC ಸರ್ಟಿಫಿಕೆಟ್ 

ಇದನ್ನೂ ಓದಿ :  Atal Pension Yojana : ಪ್ರತಿ ದಿನ ಏಳು ರೂ. ಉಳಿಸುತ್ತಾ ಬಂದರೆ ಸಿಗಲಿದೆ 5000 ರೂಪಾಯಿ ಪಿಂಚಣಿ

ಗುರುತಿನ ಪುರಾವೆ :
ಪಾಸ್ಪೋರ್ಟ್
ಪ್ಯಾನ್ ಕಾರ್ಡ್
ಪಡಿತರ ಚೀಟಿ
ವೋಟರ್ ಐಡಿ (Voter ID)
ಚಾಲನಾ ಪರವಾನಿಗೆ

ವಿಳಾಸ ಪುರಾವೆ :
ಪಾಸ್ಪೋರ್ಟ್
ಬ್ಯಾಂಕ್ ಪಾಸ್ ಬುಕ್ 
ಬ್ಯಾಂಕ್ ಸ್ಟೇಟ್ಮೆಂಟ್ 
ಪಡಿತರ ಚೀಟಿ
ಪೋಸ್ಟ್ ಆಫೀಸ್ ಖಾತೆ ವಿವರಗಳು
ವೋಟರ್ ಐಡಿ
ಚಾಲನಾ ಪರವಾನಿಗೆ
ವಿದ್ಯುತ್ ಬಿಲ್
ನೀರಿನ ಬಿಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News