ನವದೆಹಲಿ: ಜುಲೈ 1 ರಿಂದ ದೇಶದಲ್ಲಿ ಬ್ಯಾಂಕಿಂಗ್‌ನ ಹಲವು ಪ್ರಮುಖ ನಿಯಮಗಳು ಬದಲಾಗಲಿವೆ. ಬ್ಯಾಂಕ್ ವಹಿವಾಟಿನಿಂದ ಹಿಡಿದು ಎಟಿಎಂ ಕಾರ್ಡಿನಿಂದ ಹಣ ವಿತ್ ಡ್ರಾ ಮಾಡುವವರೆಗಿನ ನಿಯಮಗಳು ಬದಲಾಗಲಿವೆ. ನಿಯಮಗಳಲ್ಲಿನ ಬದಲಾವಣೆಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಯಮಗಳಲ್ಲಿನ ಬದಲಾವಣೆಯ ಜೊತೆಗೆ, ನೀವು ಬ್ಯಾಂಕಿನ ಅನೇಕ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು. ಹಾಗಾಗಿ ಬದಲಾದ ನಿಯಮಗಳನ್ನು ತಪ್ಪದೇ ತಿಳಿಯಿರಿ.
ಎಸ್‌ಬಿಐ ಎಟಿಎಂನಿಂದ ಹಣವನ್ನು ಹಿಂಪಡೆಯಲು ಶುಲ್ಕ:
ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಪ್ರಕಾರ ಮಾರ್ಚ್ 24 ರಂದು ಹಣಕಾಸು ಸಚಿವರು ಎಟಿಎಂ ವಹಿವಾಟುಗಳಿಗೆ ಶುಲ್ಕ ವಿಧಿಸದಂತೆ ಸೂಚಿಸಿದ್ದರು. ಅದರಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‌ಬಿಐ (SBI) ಎಟಿಎಂ ಮತ್ತು ಇತರ ಬ್ಯಾಂಕ್ ಎಟಿಎಂಗಳಲ್ಲಿ ಮಾಡಿದ ಎಲ್ಲಾ ಎಟಿಎಂ ವಹಿವಾಟುಗಳಿಗೆ ಜೂನ್ 30 ರೊಳಗೆ ಯಾವುದೇ ಶುಲ್ಕ ವಿಧಿಸುವುದನ್ನು ರದ್ದುಗೊಳಿಸಿತ್ತು. ಈ ನಿಯಮಗಳ ಗಡುವನ್ನು ಸರ್ಕಾರ ವಿಸ್ತರಿಸದಿದ್ದರೆ, ಹಳೆಯ ನಿಯಮಗಳನ್ನು ಮತ್ತೊಮ್ಮೆ ಜಾರಿಗೆ ತರಲಾಗುವುದು.
ಅಟಲ್ ಪಿಂಚಣಿ ಯೋಜನೆ ನಿಯಮಗಳಲ್ಲಿ ಬದಲಾವಣೆ:
ಜೂನ್ 30 ರ ನಂತರ ಅಟಲ್ ಪಿಂಚಣಿ ಯೋಜನೆ (ಎಪಿವೈ) ನಂತರ ಆಟೋ ಡೆಬಿಟ್ ಪುನರಾರಂಭಿಸಬಹುದು. ಪಿಎಫ್‌ಆರ್‌ಡಿಎಯ ಏಪ್ರಿಲ್ 11 ರ ಸುತ್ತೋಲೆ ಪ್ರಕಾರ ಕರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಸೌಲಭ್ಯವನ್ನು ಜೂನ್ 30ರವರೆಗೆ ಸ್ಥಗಿತಗೊಳಿಸಲಾಗಿದೆ. ಅದಕ್ಕಾಗಿಯೇ ಬ್ಯಾಂಕುಗಳು ಅಟಲ್ ಪಿಂಚಣಿ ಯೋಜನೆಯಿಂದ ಆಟೋ ಡೆಬಿಟ್ ಅನ್ನು ನಿಲ್ಲಿಸಿದವು. ಇದು ಜುಲೈ 1 ರಿಂದ ಮತ್ತೆ ಪ್ರಾರಂಭಿಸಬಹುದು.
ಪಿಎನ್‌ಬಿ ಉಳಿತಾಯ ಖಾತೆಗೆ ಕಡಿಮೆ ಬಡ್ಡಿ:
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ಶೇಕಡಾ 0.50 ರಷ್ಟು ಕಡಿತಗೊಳಿಸಿದೆ. ಜುಲೈ 1 ರಿಂದ ಬ್ಯಾಂಕಿನ ಉಳಿತಾಯ ಖಾತೆಗೆ ವಾರ್ಷಿಕ ಗರಿಷ್ಠ 3.25 ರಷ್ಟು ಬಡ್ಡಿ ಸಿಗುತ್ತದೆ. ಪಿಎನ್‌ಬಿಯ ಉಳಿತಾಯ ಖಾತೆಯಲ್ಲಿ 50 ಲಕ್ಷ ರೂ.ಗಳ ಬಾಕಿ ಮೊತ್ತಕ್ಕೆ ವಾರ್ಷಿಕ 3 ಪ್ರತಿಶತ ಮತ್ತು 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ವಾರ್ಷಿಕವಾಗಿ 3.25 ಶೇಕಡಾ ಬಡ್ಡಿಯನ್ನು ನೀಡಲಾಗುವುದು. ಈ ಹಿಂದೆ ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಉಳಿತಾಯ ಖಾತೆಯ ಬಡ್ಡಿಯನ್ನು ಕಡಿತಗೊಳಿಸಿತ್ತು.
ಫ್ರೀಜ್ ಆಗುತ್ತೆ ಬ್ಯಾಂಕ್ ಆಫ್ ಬರೋಡಾ ಖಾತೆ :
ಬ್ಯಾಂಕ್ ಆಫ್ ಬರೋಡಾ ಈ ಹಿಂದೆ ಗ್ರಾಹಕರಿಗೆ ಎಸ್‌ಎಂಎಸ್ ಕಳುಹಿಸಿತ್ತು ಮತ್ತು ಅವರು ತಮ್ಮ ಬ್ಯಾಂಕ್ ಖಾತೆಯನ್ನು ಆದಷ್ಟು ಬೇಗ ನವೀಕರಿಸದಿದ್ದರೆ ಖಾತೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿದೆ. ಇತ್ತೀಚೆಗೆ ವಿಜಯ ಮತ್ತು ದೇನಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಂಡಿವೆ. ಬ್ಯಾಂಕ್ ನವೀಕರಣಕ್ಕಾಗಿ ಆಧಾರ್, ಪ್ಯಾನ್ ಮತ್ತು ಪಡಿತರ ಚೀಟಿ ಅಥವಾ ಜನ್ಮ ಮರಣವನ್ನು ಬರೆದ ಯಾವುದೇ ಗುರುತನ್ನು ಸಲ್ಲಿಸಿ. ಡಾಕ್ಯುಮೆಂಟ್ ಸಲ್ಲಿಸದಿದ್ದರೆ, ಖಾತೆಯನ್ನು ಫ್ರೀಜ್ ಮಾಡಬಹುದು.
ಜುಲೈ 1 ರಿಂದ ಬ್ಯಾಂಕಿನ ಉಳಿತಾಯ ಖಾತೆಯಲ್ಲಿನ ಕನಿಷ್ಠ ಬಾಕಿ ವಿನಾಯಿತಿ ನಿಯಮವು ಕೊನೆಗೊಳ್ಳುತ್ತದೆ. ಲಾಕ್‌ಡೌನ್ ಸಮಯದಲ್ಲಿ ಜೂನ್ 30 ರವರೆಗೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮಾಸಿಕ ಬಾಕಿ ಉಳಿಸಿಕೊಳ್ಳುವ ಅಗತ್ಯವನ್ನು ಸರ್ಕಾರ ಕೊನೆಗೊಳಿಸಿತ್ತು. ಗ್ರಾಹಕರ ಉಳಿತಾಯ ಖಾತೆಯಲ್ಲಿ ಕನಿಷ್ಠ ಬಾಕಿ ಇಲ್ಲದಿದ್ದರೆ ಬ್ಯಾಂಕುಗಳು ಅದಕ್ಕೆ ಯಾವುದೇ ಶುಲ್ಕ ವಿಧಿಸಲು ಸಾಧ್ಯವಿರಲಿಲ್ಲ. ಇದೀಗ, ಮೆಟ್ರೋ ನಗರ, ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಪ್ರಕಾರ, ವಿವಿಧ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವುದು ಕಡ್ಡಾಯವಾಗಬಹುದು.
ಎಟಿಎಂ ಹಣ ವಿತ್ ಡ್ರಾ ವಿನಾಯಿತಿ:
ದೇಶಾದ್ಯಂತ ಎಟಿಎಂ ಹಿಂಪಡೆಯುವಿಕೆಯ ವಿನಾಯಿತಿ ಜುಲೈ 1 ರಿಂದ ಕೊನೆಗೊಳ್ಳುತ್ತದೆ. ಪ್ರಸ್ತುತ ಎಟಿಎಂ (ATM)ನಿಂದ 10 ಸಾವಿರ ರೂಪಾಯಿಗಳನ್ನು ಹಿಂಪಡೆಯಲು ವಿನಾಯಿತಿ ಇದೆ. ಅದೇ ಸಮಯದಲ್ಲಿ, ಲಾಕ್‌ಡೌನ್ ಸಮಯದಲ್ಲಿ ವಿತ್ ಡ್ರಾ ಮಿತಿಯ ಮೇಲೆ ಮೂರು ತಿಂಗಳವರೆಗೆ ವಿನಾಯಿತಿ ನೀಡಲಾಯಿತು. ಈ ಅವಧಿಯಲ್ಲಿ ಎಟಿಎಂಗಳಿಂದ ಹಣವನ್ನು ಹಿಂಪಡೆಯಲು ಯಾವುದೇ ಶುಲ್ಕವಿರಲಿಲ್ಲ. ಈ ವಿನಾಯಿತಿ ಜೂನ್ 30 ರವರೆಗೆ ಅನ್ವಯಿಸುತ್ತದೆ. ಅಂದರೆ ನಾಳೆಯಿಂದ ಮತ್ತೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಮಿತಿ ಹೇರಬಹುದು.