close

News WrapGet Handpicked Stories from our editors directly to your mailbox

ಲೋಕಸಭಾ ಚುನಾವಣೆ 2019: ಮೂರನೇ ಹಂತದಲ್ಲಿ ದೇಶಾದ್ಯಂತ ಶೇ.62.87ರಷ್ಟು ಮತದಾನ!

ಮೂರನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ.79.36ರಷ್ಟು ಮತದಾನವಾಗಿದ್ದು ಮೊದಲ ಸ್ಥಾನದಲ್ಲಿದ್ದರೆ, ಜಮ್ಮು-ಕಾಶ್ಮೀರದಲ್ಲಿ ಶೇ.12.86ರಷ್ಟು ಕನಿಷ್ಠ ಮತದಾನವಾಗಿದೆ. 

Updated: Apr 23, 2019 , 08:04 PM IST
ಲೋಕಸಭಾ ಚುನಾವಣೆ 2019: ಮೂರನೇ ಹಂತದಲ್ಲಿ ದೇಶಾದ್ಯಂತ ಶೇ.62.87ರಷ್ಟು ಮತದಾನ!

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ 13 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಕ್ಷೇತ್ರಗಳಿಗೆ ಇಂದು ನಡೆದ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಸಂಜೆ 6.45ರ ಹೊತ್ತಿಗೆ ಶೇ.62.87 ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 

ಮೂರನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ.79.36ರಷ್ಟು ಮತದಾನವಾಗಿದ್ದು ಮೊದಲ ಸ್ಥಾನದಲ್ಲಿದ್ದರೆ, ಜಮ್ಮು-ಕಾಶ್ಮೀರದಲ್ಲಿ ಶೇ.12.86ರಷ್ಟು ಕನಿಷ್ಠ ಮತದಾನವಾಗಿದೆ. ಉಳಿದಂತೆ ಬಿಹಾರದಲ್ಲಿ ಶೇ.59.97, ಚತ್ತೀಸ್ಗಡದಲ್ಲಿ ಶೇ.65.08, ದಾದರ್ ನಲ್ಲಿ ಶೇ.71.43, ದಯು-ದಾಮನ್ ನಲ್ಲಿ ಶೇ.65.34, ಗೋವಾದಲ್ಲಿ ಶೇ.71.09, ಗುಜರಾತಿನಲ್ಲಿ ಶೇ.59.77, ಕರ್ನಾಟಕದಲ್ಲಿ ಶೇ.64.09, ಕೇರಳದಲ್ಲಿ ಶೇ.70.20, ಮಹಾರಾಷ್ಟ್ರದಲ್ಲಿ ಶೇ.56.25, ಒಡಿಶಾದಲ್ಲಿ 58.18, ತ್ರಿಪುರಾದಲ್ಲಿ 78.37, ಉತ್ತರಪ್ರದೇಶದಲ್ಲಿ ಶೇ. 57.64ರಷ್ಟು ಮತದಾನವಾಗಿದೆ.

ಒಟ್ಟು ಏಳು ಹಂತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬೀಳಲಿದೆ.