ಭವಿಷ್ಯನಿಧಿಯ ವಿಷಯದಲ್ಲಿ ಖಾಸಗಿ ಉದ್ಯೋಗಗಳಿಗೆ ಹೊಸ ವರ್ಷ ಬಹಳ ವಿಶೇಷವಾಗಿರಲಿದೆ. ಶೀಘ್ರವೇ ಪ್ರಸಕ್ತ ಹಣಕಾಸು ವರ್ಷದಲ್ಲಿನ ಬಡ್ಡಿದರಗಳ ಘೋಷಣೆಯಾಗಲಿದೆ. ಅಲ್ಲದೆ, ಮೂರು ತಿಂಗಳ ನಂತರ ಖಾಸಗಿ ವಲಯದಲ್ಲಿ ಅಪ್ರೆಸಲ್ ಪ್ರಕ್ರಿಯೆ ಕೂಡ ಪ್ರಾರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿಯನ್ನು ದ್ವಿಗುಣಗೊಳಿಸಬಹುದು. ಆದರೆ, ಇದಕ್ಕಾಗಿ ನೀವು ಮೂರು ತಿಂಗಳು ಕಾಯುವ ಅಗತ್ಯವಿಲ್ಲ. ಹೊಸ ವರ್ಷದ ಆರಂಭದಲ್ಲಿ, ನಿಮ್ಮ ಭವಿಷ್ಯ ನಿಧಿಯನ್ನು ದ್ವಿಗುಣಗೊಳಿಸಬಹುದಾಗಿದೆ.
ನಿಮ್ಮ ಠೇವಣಿ ದ್ವಿಗುಣಗೊಳಿಸುವುದು ಹೇಗೆ?
ಭವಿಷ್ಯ ನಿಧಿಯಲ್ಲಿ ಠೇವಣಿ ಇರಿಸಿದ ಮೊತ್ತವನ್ನು ದ್ವಿಗುಣಗೊಳಿಸಲು, ನೀವು ನಿಮ್ಮ ಉದ್ಯೋಗದಾತರೊಂದಿಗೆ ಮಾತನಾಡಬೇಕಾಗುತ್ತದೆ. ಇದರಲ್ಲಿ ಮಾಡಬೇಕಾದ ಏಕೈಕ ವಿಷಯವೆಂದರೆ ನಿಮ್ಮ ಸಂಬಳದ ರಚನೆಯಲ್ಲಿ ನೀವು ಸ್ವಲ್ಪ ಬದಲಾವಣೆ ಮಾಡಬಹುದು. ನಿಮ್ಮ ಉದ್ಯೋಗದಾತರಿಂದ ಪಿಎಫ್ ಕೊಡುಗೆಯನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಇನ್ ಹ್ಯಾಂಡ್ ಸಂಬಳ ಕಡಿಮೆಯಾಗಲಿದೆ. ಆದರೆ, ಇದರಿಂದ ನೀವು ನಿಮ್ಮ ಭವಿಷ್ಯನಿಧಿಯನ್ನು ದ್ವಿಗುಣಗೊಳಿಸಬಹುದು. ಅಲ್ಲದೆ, ಉಳಿತಾಯ ಮತ್ತು ತೆರಿಗೆ ವಿಷಯದಲ್ಲಿ ಉತ್ತಮ ಆಯ್ಕೆ ನಿಮಗೆ ಸಿಗಲಿದೆ.
ನಿಮ್ಮ PF ಹಣವನ್ನು ಹೇಗೆ ಹೆಚ್ಚಿಸಬೇಕು?
ನಿಮ್ಮ ಉದ್ಯೋಗದಾತ ನಿಮ್ಮ ಪಿಎಫ್ ಕೊಡುಗೆಯನ್ನು ಹೆಚ್ಚಿಸಿದರೆ. ಆದ್ದರಿಂದ ಪ್ರತಿ ತಿಂಗಳು ಹೆಚ್ಚಿನ ಹಣವನ್ನು ನಿಮ್ಮ ಪಿಎಫ್ ಖಾತೆಯಲ್ಲಿ ಜಮೆಯಾಗಲಿದೆ. ಸಮಯಕ್ಕೆ ಪಿಎಫ್ ಕೊಡುಗೆ ಹೆಚ್ಚಾದರೆ, ನಿವೃತ್ತಿಯ ಸಮಯದಲ್ಲಿ ನಿಮ್ಮ ಭವಿಷ್ಯ ನಿಧಿ ದ್ವಿಗುಣಗೊಳ್ಳಬಹುದು. ಸದ್ಯ, ನೌಕರರ ಭವಿಷ್ಯ ನಿಧಿ ಸಂಸ್ಥೆ ಅಂದರೆ ಇಪಿಎಫ್ಓ ನಿಮ್ಮ ಭವಿಷ್ಯನಿಧಿಯ ಮೇಲೆ 8.65% ಬಡ್ಡಿಯನ್ನು ನೀಡುತ್ತದೆ. ಪಿಎಫ್ ಕೊಡುಗೆಯನ್ನು ಹೆಚ್ಚಿಸುವ ಮೂಲಕ, ನಿಮ್ಮ ಪಿಎಫ್ ಮೊತ್ತದ ಮೇಲಿನ ಬಡ್ಡಿ ಸಹ ಹೆಚ್ಚಾಗಲಿದೆ.
EPFO ನಿಯಮ ಏನು ಹೇಳುತ್ತದೆ
ನೌಕರರ ಭವಿಷ್ಯ ನಿಧಿ ಸಂಸ್ಥೆಯ ಮಾಜಿ ಸಹಾಯಕ ಆಯುಕ್ತ ಎ.ಕೆ.ಶುಕ್ಲಾ ಹೇಳುವ ಪ್ರಕಾರ, ಇಪಿಎಫ್ಓ ನಿಯಮದ ಅನ್ವಯ ಪ್ರತಿ ಉದ್ಯೋಗಿಗೆ ತಮ್ಮ ಕಂಪನಿಯಲ್ಲಿನ ತಮ್ಮ ಪಿಎಫ್ ಕೊಡುಗೆಯನ್ನು ಹೆಚ್ಚಿಸಲು ಸಡಿಲಿಕೆ ನೀಡಲಾಗಿದೆ. ನೌಕರರ ಭವಿಷ್ಯನಿಧಿ ಕಾಯ್ದೆಯಡಿ ಅವರಿಗೆ ಈ ಸಡಿಲಿಕೆ ನೀಡಲಾಗುತ್ತದೆ. ನಿಯಮಗಳ ಪ್ರಕಾರ, ಮೂಲ ವೇತನ ಹಾಗೂ ತುಟ್ಟಿಭತ್ಯೆಯ 12%ರಷ್ಟು ಹಣವನ್ನು ಭವಿಷ್ಯನಿಧಿಯಲ್ಲಿ ಠೇವಣಿ ಇಡಲಾಗುತ್ತದೆ. ಇದೇ ಸಮಯದಲ್ಲಿ, ಅಷ್ಟೇ ಪ್ರಮಾಣದ ಹಣವನ್ನು ಕಂಪನಿ ತನ್ನ ಉದ್ಯೋಗಿಯ ಭವಿಷ್ಯನಿಧಿ ಖಾತೆಗೆ ಜಮಾ ಮಾಡುತ್ತದೆ. ಯಾವುದೇ ಓರ್ವ ಉದ್ಯೋಗಿ ಭವಿಷ್ಯನಿಧಿಗೆ ನೀಡುತ್ತಿರುವ ತನ್ನ ಮಾಸಿಕ ಕೊಡುಗೆಯನ್ನು ಮೂಲ ವೇತನದ 100%ವರೆಗೆ ಹೆಚ್ಚಿಸಬಹುದು.
ಹೇಗೆ ದ್ವಿಗುಣಗೊಳ್ಳಲಿದೆ ನಿಮ್ಮ PF?
ಯಾವುದೇ ಉದ್ಯೋಗಿ ತನ್ನ ಮಾಸಿಕ ಕೊಡುಗೆಯ ಮೊತ್ತವನ್ನು ದ್ವಿಗುಣಗೊಳಿಸಿದರೆ, ಅವನ ಪಿಎಫ್ ನಿಧಿಯ ಮೊತ್ತವೂ ದ್ವಿಗುಣಗೊಳ್ಳುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ, ಮೂಲ ವೇತನದಲ್ಲಿ 12% ಪಿಎಫ್ ಕೊಡುಗೆ ನೀಡಲಾಗುತ್ತದೆ. ಒಂದು ವೇಳೆ ಉದ್ಯೋಗಿ ಅದನ್ನು ಶೇಕಡಾ 24 ಕ್ಕೆ ಹೆಚ್ಚಿಸಿದರೆ, ಅವನ ಪಿಎಫ್ ನಿಧಿ ಸಹ ದ್ವಿಗುಣಗೊಳ್ಳುತ್ತದೆ.
ಸಿಗಲಿದೆ ಚಕ್ರಬಡ್ಡಿಯ ಲಾಭ
ಪಿಎಫ್ ನಿಧಿಯನ್ನು ದ್ವಿಗುಣಗೊಳಿಸುವ ಹೊರತಾಗಿ, ನೀವು ಅದರ ಮೇಲೆ ಎರಡು ಪಟ್ಟು ಹೆಚ್ಚು ಬಡ್ಡಿಯ ಲಾಭವನ್ನು ಸಹ ಪಡೆಯಬಹುದು. ವಾಸ್ತವವಾಗಿ, ಪಿಎಫ್ ಮೇಲಿನ ಬಡ್ಡಿಯನ್ನು ಚಕ್ರಬಡ್ಡಿ ಸೂತ್ರದಿಂದ ಲೆಕ್ಕ ಹಾಕಲಾಗುತ್ತದೆ. ಇದಕ್ಕೆ ಕಂಪೌಂಡ್ ಇಂಟರೆಸ್ಟ್ ಎಂದೂ ಸಹ ಹೇಳಲಾಗುತ್ತದೆ. ಈ ಪರಿಸ್ಥಿತಿಯಲ್ಲಿ, ನಿಮ್ಮ ಭವಿಷ್ಯನಿಧಿ ಠೇವಣಿಯಲ್ಲಿ ಎರಡು ಪಟ್ಟು ಹೆಚ್ಚಳವಾಗಿ, ಪ್ರತಿವರ್ಷ ನಿಮಗೆ ಸಿಗುವ ಬಡ್ಡಿಯ ಮೇಲೆಯೂ ಬಡ್ಡಿ ಲಾಭ ಸಿಗಲಿದೆ. ಈ ರೀತಿ ನಿಮ್ಮ ನಿವೃತ್ತಿಯವರೆಗೆ ಒಂದು ದೊಡ್ಡ ಮೊತ್ತ ನಿಮ್ಮ ಕೈ ಸೇರಲಿದೆ.