ಈ ಸಾಫ್ಟ್‌ ವೇರ್ ಇಂಜಿನಿಯರ್ ಭಾನುವಾರ ಟ್ಯಾಕ್ಸಿ ಓಡಿಸುತ್ತಾನೆ!: ಏಕೆ ಗೊತ್ತಾ..?

ಮುಂಬೈ ವೃತ್ತಿಪರ ಜನರ ನಗರ ಎಂದು ನೀಲೇಶ್ ನಂಬಿದ್ದಾರೆ. ಆದರೆ ಇದು ಎಷ್ಟು ಸತ್ಯ..? ಇದನ್ನು ತಿಳಿಯಲೆಂದೇ ನೀಲೇಶ್ ಟ್ಯಾಕ್ಸಿ ಡ್ರೈವರ್ ಡ್ರೆಸ್ ಹಾಕಿಕೊಂಡು ಟ್ಯಾಕ್ಸಿ ಓಡಿಸಲು ಶುರು ಮಾಡಿದರಂತೆ.

Written by - Puttaraj K Alur | Last Updated : Nov 13, 2021, 07:21 AM IST
  • ನೀಲೇಶ್ ವರ್ಷದಲ್ಲಿ 30 ದಿನ ಭಾನುವಾರ ಮುಂಬೈನ ಬೀದಿಗಳಲ್ಲಿ ಟ್ಯಾಕ್ಸಿ ಓಡಿಸುತ್ತಾರೆ
  • ಮುಂಬೈ ವೃತ್ತಿಪರ ಜನರ ನಗರವೆಂದು ನಂಬಿರುವ ನೀಲೇಶ್ ಇದು ಎಷ್ಟು ಸತ್ಯವೆಂದು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
  • ಟ್ಯಾಕ್ಸಿ ಡ್ರೈವರ್ ಡ್ರೆಸ್ ನಲ್ಲಿ ನೀಲೇಶ್ ನನ್ನು ಕಾಣುವ ಜನರು ಈತ ಬಡವರ್ಗದ ವ್ಯಕ್ತಿ ಎನ್ನುತ್ತಾರಂತೆ
ಈ ಸಾಫ್ಟ್‌ ವೇರ್ ಇಂಜಿನಿಯರ್ ಭಾನುವಾರ ಟ್ಯಾಕ್ಸಿ ಓಡಿಸುತ್ತಾನೆ!: ಏಕೆ ಗೊತ್ತಾ..? title=
ಮುಂಬೈ ಬೀದಿಗಳಲ್ಲಿ ಟ್ಯಾಕ್ಸಿ ಓಡಿಸುವ ಸಾಫ್ಟ್ ವೇರ್ ಇಂಜಿನಿಯರ್

ನವದೆಹಲಿ: ನೀವು ಎಂದಾದರೂ ನಿಮ್ಮ ಕೆಲಸದ ಜೊತೆಗೆ ಟ್ಯಾಕ್ಸಿ ಓಡಿಸಲು ಬಯಸುತ್ತೀರಾ? ನಿಮ್ಮ ವಾರಾಂತ್ಯದಲ್ಲಿ ಬೇರೆ ಕೆಲಸ ಮಾಡಲು ಬಯಸುವಿರಾ? ಈ ಪ್ರಶ್ನೆಗಳು ನಿಮಗೆ ವಿಚಿತ್ರವೆನಿಸಬಹುದು. ಆದರೆ ಒಬ್ಬ ಸಾಫ್ಟ್‌ ವೇರ್ ಇಂಜಿನಿಯರ್(Software Engineer) ಪ್ರತಿ ಭಾನುವಾರ ಮುಂಬೈನ ಬೀದಿಗಳಲ್ಲಿ ಟ್ಯಾಕ್ಸಿಗಳನ್ನು ಓಡಿಸುತ್ತಾನೆ. ಇಂಟ್ರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಈ ಇಂಜಿನಿಯರ್ ಹಣ ಸಂಪಾದನೆಗಾಗಿ ಈ ರೀತಿ ಮಾಡುತ್ತಿಲ್ಲ. ಹಾಗಾದರೆ ಈತ ಏತಕ್ಕೆ ಟ್ಯಾಕ್ಸಿ ಓಡಿಸುತ್ತಾನೆ ಗೊತ್ತಾ..?

ಯಾರು ಈ ಇಂಜಿನಿಯರ್..?

ನೀಲೇಶ್ ಆರ್ತೆ(Nilesh Arte) ವೃತ್ತಿಯಲ್ಲಿ ಪುಣೆ ಮೂಲದ ಕಂಪನಿಯೊಂದರಲ್ಲಿ ಸಾಫ್ಟ್‌ ವೇರ್ ಇಂಜಿನಿಯರ್. ಆದರೆ ಕೈತುಂಬಾ ಸಂಬಳ ಪಡೆಯುವ ಈತ ಭಾನುವಾರ ಟ್ಯಾಕ್ಸಿ ಓಡಿಸುತ್ತಾನೆ(Taxi Driving). ನೀಲೇಶ್ ವರ್ಷದಲ್ಲಿ 30 ದಿನ ಭಾನುವಾರ ಈ ಕೆಲಸ ಮಾಡುತ್ತಾನಂತೆ. ಮುಂಬೈನ ಬೀದಿಗಳಲ್ಲಿ ಕಪ್ಪು ಮತ್ತು ಹಳದಿ ಟ್ಯಾಕ್ಸಿಗಳು ನಗರವನ್ನು ಹಲವು ವಿಧಗಳಲ್ಲಿ ಪ್ರತಿನಿಧಿಸುತ್ತವೆ ಎಂದು ನೀಲೇಶ್ ನಂಬುತ್ತಾರೆ. ಹಾಗೆಯೇ ನೀಲೇಶ್ ಬಾಲ್ಯದಲ್ಲಿ ಅಪ್ಪನ ಜೊತೆ ಸುತ್ತಾಡಲು ಹೋದಾಗಲೆಲ್ಲ ಕಪ್ಪು-ಹಳದಿ ಟ್ಯಾಕ್ಸಿಯಲ್ಲಿ ಕೂರುತ್ತಿದ್ದರು. ಆದರೆ ಪುಣೆಯ ಸಾಫ್ಟ್‌ ವೇರ್ ಇಂಜಿನಿಯರ್‌ಗೆ ಮಹಾನಗರದಲ್ಲಿ ಟ್ಯಾಕ್ಸಿ ಓಡಿಸುವಂತೆ ಒತ್ತಾಯಿಸಿದವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇದನ್ನೂ ಓದಿ: ನಿಮಗೂ Online Shopping ಬಗೆಗಿನ ಈ ಮೆಸೇಜ್ ಬರುತ್ತಿದ್ದರೆ ಹುಷಾರಾಗಿರಿ, ಇದೊಂದು ವಂಚನೆಯ ಜಾಲ

ಜನರ ವರ್ತನೆ ತಿಳಿಯಲು ಟ್ಯಾಕ್ಸಿ ಓಡಿಸುತ್ತಿರುವ ನೀಲೇಶ್..!

ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ನೀಲೇಶ್ ತಾನು ಏಕೆ ಪ್ರತಿ ಭಾನುವಾರ ಟ್ಯಾಕ್ಸಿ ಓಡಿಸುತ್ತೇನೆಂಬುದರ(Taxi Driving) ಬಗ್ಗೆ ತಿಳಿಸಿದ್ದಾನೆ. ಹೀಗೆ ಟ್ಯಾಕ್ಸಿ ಓಡಿಸುವ ಮೂಲಕ ಅವರು ತಮ್ಮ ತಂದೆಯೊಂದಿಗೆ ಹೋಗುತ್ತಿದ್ದ ರಸ್ತೆಗಳಲ್ಲಿ ತಿರುಗಾಡುತ್ತಾರೆ. ಈ ಮೂಲಕ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾರಂತೆ. ಎರಡನೆಯದಾಗಿ ಅವರು ಜನರ ನಡವಳಿಕೆಯನ್ನು ತಿಳಿಯಲು ಬಯಸುತ್ತಾರಂತೆ. ಮುಂಬೈ ವೃತ್ತಿಪರ ಜನರ ನಗರ ಎಂದು ನೀಲೇಶ್ ನಂಬಿದ್ದಾರೆ. ಆದರೆ ಇದು ಎಷ್ಟು ಸತ್ಯ..? ಇದನ್ನು ತಿಳಿಯಲೆಂದೇ ನೀಲೇಶ್ ಟ್ಯಾಕ್ಸಿ ಡ್ರೈವರ್ ಡ್ರೆಸ್ ಹಾಕಿಕೊಂಡು ಟ್ಯಾಕ್ಸಿ ಓಡಿಸಲು ಶುರು ಮಾಡಿದರಂತೆ.

ಟ್ಯಾಕ್ಸಿ ಓಡಿಸುವಾಗ ನೀಲೇಶ್ ಟ್ಯಾಕ್ಸಿ ಡ್ರೈವರ್‌ನ ಉಡುಗೆ(Taxi Driver Dress) ನೋಡುವ ಜನರು ಅವರನ್ನು ಬಡ ವರ್ಗದ ವ್ಯಕ್ತಿ ಎಂದುಕೊಳ್ಳುತ್ತಾರಂತೆ. ಡ್ರೈವರ್ ಡ್ರೆಸ್ ಹಾಕಿಕೊಂಡು ಪ್ರತಿಷ್ಠಿತ ರೆಸ್ಟೊರೆಂಟ್ ಗೆ ಹೋದರೆ ಅಲ್ಲಿ ಇವರಿಗೆ ಒಳಗಡೆ ಹೋಗಲು ಎಂಟ್ರಿಯೇ ಸಿಗುವುದಿಲ್ಲವಂತೆ. ಎಂಟ್ರಿ ಸಿಕ್ಕರೂ ಸಹ ಅವರನ್ನು ಬೇರೆಯದ್ದೇ ರೀತಿಯಲ್ಲಿ ಜನರು ಕಾಣುತ್ತಾರಂತೆ.

ಇದನ್ನೂ ಓದಿ: BJP-RSS ಮೇಲೆ ರಾಹುಲ್ ಗಾಂಧಿ ವಾಗ್ದಾಳಿ, 'ಹಿಂದೂ ಧರ್ಮ-ಹಿಂದುತ್ವದಲ್ಲಿದೆ ವ್ಯತ್ಯಾಸ ಇದೆ' ಎಂದ ರಾಹುಲ್

ಜನರ ಈ ವರ್ತನೆಯಿಂದ ನೀಲೇಶ್ ನಿರಾಸೆಗೊಂಡಿದ್ದಾರೆ. ಅವರ ಪ್ರಕಾರ ನೀವು ವೃತ್ತಿಪರರಾಗಿದ್ದರೆ ಬಡವರ ಅಥವಾ ಟ್ಯಾಕ್ಸಿ ಡ್ರೈವರ್‌ಗಳ ಬಗ್ಗೆ ನಿಮ್ಮ ವರ್ತನೆ ಹೀಗಿರಬಾರದು. ಟ್ಯಾಕ್ಸಿ ಡ್ರೈವರ್ ಗಳು ಕೂಡ ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ದೇಶದಲ್ಲಿ ಟ್ಯಾಕ್ಸಿ ಡ್ರೈವರ್ ಗಳು ಲಕ್ಷಾಂತರ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಟ್ಯಾಕ್ಸಿ ಡ್ರೈವರ್ ಗಳನ್ನು ಕೀಳಾಗಿ ಕಾಣದೆ ಅವರಿಗೂ ವೃತ್ತಿ ಗೌರವ ನೀಡಬೇಕೆಂದು ನೀಲೇಶ್ ಒತ್ತಾಯಿಸುತ್ತಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News