Jammu Kashmir: ಮೂವರು ಜೈಶ್ ಭಯೋತ್ಪಾದಕರನ್ನು ಹತ್ಯೆ, ಮುಂದುವರೆದ ಕಾರ್ಯಾಚರಣೆ

ಅವಂತಿಪೋರಾದ ತ್ರಾಲ್‌ನ ಅರಣ್ಯ ಪ್ರದೇಶದ ಮೇಲ್ಭಾಗದಲ್ಲಿ ಎನ್ಕೌಂಟರ್ ಆರಂಭವಾದ ನಂತರ ಜೈಶ್ ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದರು.

Written by - Zee Kannada News Desk | Last Updated : Aug 21, 2021, 09:55 AM IST
  • ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಶನಿವಾರ ಎನ್ಕೌಂಟರ್ ನಡೆದಿದೆ
  • ನಿಷೇಧಿತ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮೂವರು ಅಪರಿಚಿತ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ
  • ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ಈ ಎನ್ಕೌಂಟರ್ ಅನ್ನು ದೃಢಪಡಿಸಿದ್ದಾರೆ
Jammu Kashmir: ಮೂವರು ಜೈಶ್ ಭಯೋತ್ಪಾದಕರನ್ನು ಹತ್ಯೆ, ಮುಂದುವರೆದ ಕಾರ್ಯಾಚರಣೆ title=
Representational Image

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಟ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕ ಗುಂಪು ಜೈಶ್-ಇ-ಮೊಹಮ್ಮದ್ (Jaish-e-Mohammed) ನೊಂದಿಗೆ ಸಂಬಂಧ ಹೊಂದಿದ್ದ ಮೂವರು ಅಪರಿಚಿತ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಶನಿವಾರ ಎನ್ಕೌಂಟರ್ ನಡೆದಿದೆ. ಅವಂತಿಪೋರಾದ ಟ್ರಾಲ್‌ನ ನಾಗಬರೇನ್‌ನ ಅರಣ್ಯ ಪ್ರದೇಶದ ಮೇಲ್ಭಾಗದಲ್ಲಿ ಎನ್ಕೌಂಟರ್ (Encounter) ಆರಂಭವಾಯಿತು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ- Corona Vaccine: ಮೂರನೇ ತರಂಗಕ್ಕೆ ಮುಂಚಿತವಾಗಿ ಭಾರತಕ್ಕೆ ಮತ್ತೊಂದು ಲಸಿಕೆ

ಸುದ್ದಿ ಸಂಸ್ಥೆ ANI ಯ ವರದಿಗಳ ಪ್ರಕಾರ, ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಮೂವರು ಅಪರಿಚಿತ ಭಯೋತ್ಪಾದಕರನ್ನು (Terrorist) ಹತ್ಯೆ ಮಾಡಲಾಗಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. 

ನಾಗಬೆರನ್‌ನಲ್ಲಿ ಮುಂದುವರೆದ ಕಾರ್ಯಾಚರಣೆ:
ವಾಸ್ತವವಾಗಿ, ಭಯೋತ್ಪಾದಕರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ, ಭದ್ರತಾ ಪಡೆಗಳು ತಮ್ಮ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದವು. ದಕ್ಷಿಣ ಕಾಶ್ಮೀರದ ನಾಗಬೀರನ್ ಟ್ರಾಲ್‌ನಲ್ಲಿರುವ ಅರಣ್ಯ ಪ್ರದೇಶದಲ್ಲಿ ಎತ್ತರದ ಪ್ರದೇಶಕ್ಕೆ ಮುತ್ತಿಗೆ ಹಾಕಿದವು. ಎನ್ಕೌಂಟರ್ ಆರಂಭವಾದ ನಂತರ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡಿನ ಸುರಿಮಳೆ ಗೈದಿದ್ದಾರೆ. ಭದ್ರತಾ ಪಡೆ ಕೂಡ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ- Rain In Delhi-NCR: ದೆಹಲಿ-ಎನ್‌ಸಿಆರ್‌ನಲ್ಲಿ ಭಾರೀ ಮಳೆ

ಇದಕ್ಕೂ ಮುನ್ನ, ಶುಕ್ರವಾರ, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಂಪೋರ್ ಪ್ರದೇಶದಲ್ಲಿ ಖ್ರುವ್ ನಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ನಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಹತರಾದರು. ಎನ್ಕೌಂಟರ್ ನಂತರ ಹಲವು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News