ಮೋದಿ ಸರ್ಕಾರ ತೊಲಗಿಸಲು ಮತ್ತೊಂದು ಕ್ವಿಟ್ ಇಂಡಿಯಾ ಅಗತ್ಯವೆಂದ ಮಮತಾ ಬ್ಯಾನರ್ಜೀ

ಪ್ರಧಾನಿ ವಿರುದ್ದ ಟೀಕಾ ಪ್ರಹಾರವನ್ನು ಹರಿತಗೊಳಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಮೋದಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಮತ್ತೊಂದು ಕ್ವಿಟ್ ಇಂಡಿಯಾ ರೀತಿಯ ಚಳುವಳಿ ಅಗತ್ಯವೆಂದು ಹೇಳಿದ್ದಾರೆ.

Last Updated : May 8, 2019, 06:05 PM IST
ಮೋದಿ ಸರ್ಕಾರ ತೊಲಗಿಸಲು ಮತ್ತೊಂದು ಕ್ವಿಟ್ ಇಂಡಿಯಾ ಅಗತ್ಯವೆಂದ ಮಮತಾ ಬ್ಯಾನರ್ಜೀ title=
file photo

ನವದೆಹಲಿ: ಪ್ರಧಾನಿ ವಿರುದ್ದ ಟೀಕಾ ಪ್ರಹಾರವನ್ನು ಹರಿತಗೊಳಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಮೋದಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ಮತ್ತೊಂದು ಕ್ವಿಟ್ ಇಂಡಿಯಾ ರೀತಿಯ ಚಳುವಳಿ ಅಗತ್ಯವೆಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಏಳು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಇನ್ನು17 ಕ್ಷೇತ್ರಗಳ ಚುನಾವಣೆಗೆ ಬಾಕಿ ಇದೆ. ಈ ಹಿನ್ನಲೆಯಲ್ಲಿ ಮೋದಿ ವಿರುದ್ಧ ಮಮತಾ ಬ್ಯಾನರ್ಜೀ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

"ಯಾರಾದರೂ ಒಬ್ಬರು ಬೆಕ್ಕಿಗೆ ಗಂಟೆಯನ್ನು ಕಟ್ಟಬೇಕಾಗಿದೆ. 1942 ರಲ್ಲಿ, ಬ್ರಿಟಿಷರ ವಿರುದ್ಧ  ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದಂತೆ, ಈಗ ನಾವು ಫ್ಯಾಸಿಸ್ಟ್ ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಲು ನಾವು ಹೋರಾಡುತ್ತಿದ್ದೇವೆ. "ದೇಶದಲ್ಲಿ ತುರ್ತುಪರಿಸ್ಥಿತಿ ಇದೆ. ಸಾರ್ವಜನಿಕವಾಗಿ ಮಾತನಾಡಲು ಈಗ ಜನರು  ಹೆದರುತ್ತಿದ್ದಾರೆ. ಆದ್ದರಿಂದ ಈ ಫ್ಯಾಸಿಸಂ ಮತ್ತು ಭಯೋತ್ಪಾದನೆಗೆ ತಡೆಯೊಡ್ಡಬೇಕಾಗಿದೆ" ಎಂದು ಮಿಡ್ನಾಪೋರ್ನ ಡೆಬ್ರಾದಲ್ಲಿ ನಡೆದ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜೀ ಹೇಳಿದರು. 

ಇತ್ತೀಚಿಗೆ ಪ್ರಧಾನಿ ಮೋದಿ ಬಂಗಾಳದ ರ್ಯಾಲಿಯಲ್ಲಿ, ಬಂಗಾಳದ ಟ್ರಿಪಲ್ ಟಿ-ತೃಣಮೂಲ,ತೊಲಾಬಾಜಿ, ಟ್ಯಾಕ್ಸ್ "ಎಂದು ಹೇಳಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದರು.

 "

Trending News