ದೆಹಲಿಯಿಂದ ಮುಂಬೈಗೆ ಕೇವಲ 10 ಗಂಟೆಯಲ್ಲಿ ರೈಲು ಪ್ರಯಾಣ..!

ಇನ್ಮುಂದೆ ರಾಜಧಾನಿ ರೈಲಿನ ಮೂಲಕ ದೆಹಲಿಯಿಂದ ಮುಂಬೈಗೆ ಕೇವಲ 10 ಗಂಟೆಯಲ್ಲಿ ತಲುಪಬಹುದಾಗಿದೆ.ಅದು ಹೇಗೆ ಅಂತೀರಾ? ಈಗ ರಾಜಧಾನಿ ರೈಲಿನ ವೇಗವನ್ನು  130 ಕಿ.ಮೀ ನಿಂದ 160 ಕಿ.ಮೀ.ಗೆ ಏರಿಸುವುದರಿಂದದಾಗಿ ದೆಹಲಿ-ಮುಂಬೈ ಮಾರ್ಗದ ಪ್ರಯಾಣ ಸಮಯವನ್ನು 5 ಗಂಟೆ ಕಡಿಮೆಯಾಗಲಿದೆ ಎಂದು ಪಶ್ಚಿಮ ರೈಲ್ವೆ ಖಚಿತಪಡಿಸಿದೆ.  

Last Updated : Aug 21, 2019, 03:47 PM IST
ದೆಹಲಿಯಿಂದ ಮುಂಬೈಗೆ ಕೇವಲ 10 ಗಂಟೆಯಲ್ಲಿ ರೈಲು ಪ್ರಯಾಣ..!  title=
file photo

ನವದೆಹಲಿ: ಇನ್ಮುಂದೆ ರಾಜಧಾನಿ ರೈಲಿನ ಮೂಲಕ ದೆಹಲಿಯಿಂದ ಮುಂಬೈಗೆ ಕೇವಲ 10 ಗಂಟೆಯಲ್ಲಿ ತಲುಪಬಹುದಾಗಿದೆ.ಅದು ಹೇಗೆ ಅಂತೀರಾ? ಈಗ ರಾಜಧಾನಿ ರೈಲಿನ ವೇಗವನ್ನು  130 ಕಿ.ಮೀ ನಿಂದ 160 ಕಿ.ಮೀ.ಗೆ ಏರಿಸುವುದರಿಂದದಾಗಿ ದೆಹಲಿ-ಮುಂಬೈ ಮಾರ್ಗದ ಪ್ರಯಾಣ ಸಮಯವನ್ನು 5 ಗಂಟೆ ಕಡಿಮೆಯಾಗಲಿದೆ ಎಂದು ಪಶ್ಚಿಮ ರೈಲ್ವೆ ಖಚಿತಪಡಿಸಿದೆ.  

ಆ ಮೂಲಕ ದೆಹಲಿ-ಮುಂಬೈ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 15.5 ಗಂಟೆಯಿಂದ 10 ಗಂಟೆಗೆ ಇಳಿಯಲಿದೆ. ಈಗ ಈ ಕುರಿತಾಗಿ ಟ್ವೀಟ್ ಮಾಡಿರುವ ಪಶ್ಚಿಮ ರೈಲ್ವೆ 'ಕೇಂದ್ರ ಸರ್ಕಾರದ ಅನುಮೋದನೆಯ ನಂತರ, ಮುಂಬೈ-ದೆಹಲಿ ಮಾರ್ಗವನ್ನು ರಾಜಧಾನಿ ಎಕ್ಸ್‌ಪ್ರೆಸ್ ಅನ್ನು 160 ಕಿ.ಮೀ ವೇಗದಲ್ಲಿ ಓಡಿಸಲು ನವೀಕರಿಸಲಾಗುವುದು, ಪ್ರಯಾಣದ ಸಮಯವನ್ನು ಸುಮಾರು 10 ಗಂಟೆಗೆ ಕಡಿತಗೊಳಿಸಲಾಗುವುದು' ಎಂದು ಹೇಳಿದೆ.

ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಭಾರತೀಯ ರೈಲ್ವೆ ತನ್ನ 100 ದಿನಗಳ ಕ್ರಿಯಾ ಯೋಜನೆಯಡಿ ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗಗಳಲ್ಲಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಉದ್ದೇಶಿಸಿದೆ.‘ಮಿಷನ್ ರಾಫ್ತಾರ್’ ಅನ್ನು ಮೊದಲು ರೈಲ್ವೆ ಬಜೆಟ್ 2016-17ರಲ್ಲಿ ಘೋಷಿಸಲಾಯಿತು. ಈ ಯೋಜನೆಯಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ರೈಲಿನ ಸರಾಸರಿ ವೇಗವನ್ನು ದ್ವೀಗುಣಗೊಳಿಸುವ ಚಿಂತನೆಗೆ ಸರ್ಕಾರ ಮುಂದಾಗಿದೆ. 

ಮಿಷನ್ ರಾಫ್ತಾರ್ ಅಡಿಯಲ್ಲಿ ದೆಹಲಿ-ಮುಂಬೈ, ದೆಹಲಿ -ಹೌರಾ, ಹೌರಾ- ಚೆನ್ನೈ, ಚೆನ್ನೈ - ಮುಂಬೈ, ದೆಹಲಿ - ಚೆನ್ನೈ ಮತ್ತು ಹೌರಾ - ಮುಂಬೈ ಮಾರ್ಗಗಳನ್ನು ಗುರುತಿಸಲಾಗಿದೆ.  
 

Trending News