'Three Idiots' ಖ್ಯಾತಿಯ ಈ ಶಾಲೆಗೆ ಸಿಗಲಿದೆ CBSE ಮಾನ್ಯತೆ! ಎರಡು ದಶಕಗಳ ನಿರೀಕ್ಷೆಗೆ ಬೀಳಲಿದೆ ತೆರೆ

3 Idiots' Fame School - ಸ್ಥಾಪನೆಯಾದ ಎರಡು ದಶಕಗಳ ನಂತರ, '3 ಈಡಿಯಟ್ಸ್' (Three Idiots Movie) ಖ್ಯಾತಿಯ ಡ್ರುಕ್ ಪದ್ಮಾ ಕಾರ್ಪೋ ಸ್ಕೂಲ್ (Druk Padma Karpo School) ಗೆ ಇದೀಗ CBSE ಮಾನ್ಯತೆ (CBSE Accreditation) ಸಿಗುವ ನಿರೀಕ್ಷೆ ಇದೆ. ಪ್ರಸ್ತುತ ಶಾಲೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ (JKBOSE Affiliation) ಸಂಯೋಜಿತವಾಗಿದೆ (Affiliated).

Written by - Nitin Tabib | Last Updated : Jan 23, 2022, 08:44 PM IST
  • '3 Idiots' ಖ್ಯಾತಿಯ ಶಾಲೆಗೊಂದು ಸಂತಸದ ಸುದ್ದಿ.
  • ಶೀಘ್ರದಲ್ಲಿಯೇ ಸಿಗಲಿದೆ CBSE ಮಾನ್ಯತೆ.
  • ದೀರ್ಘ ಕಾಲದಿಂದ CBSE ಮಾನ್ಯತೆಗಾಗಿ ಪ್ರಯತ್ನ
'Three Idiots' ಖ್ಯಾತಿಯ ಈ ಶಾಲೆಗೆ ಸಿಗಲಿದೆ CBSE ಮಾನ್ಯತೆ! ಎರಡು ದಶಕಗಳ ನಿರೀಕ್ಷೆಗೆ ಬೀಳಲಿದೆ ತೆರೆ title=
3 Idiots' Fame School (File Photo)

ನವದೆಹಲಿ:  ಲಡಾಖ್‌ನಲ್ಲಿರುವ ದ್ರುಕ್ ಪದ್ಮಾ ಕಾರ್ಪೋ ಶಾಲೆಗೆ (Druk Padma Karpo School) ಸ್ಥಾಪನೆಯಾದ ಎರಡು ದಶಕಗಳ ನಂತರ CBSE ಅಫಿಲಿಯೇಶನ್ (CBSE Affiliation) ಸಿಗುವ ನಿರೀಕ್ಷೆ ಇದೆ. ದೀರ್ಘ ಕಾಲದ ಬಳಿಕ ಜಮ್ಮು ಮತ್ತು ಕಾಶ್ಮೀರ ಮಂಡಳಿಯು (Jammu And Kashmir Board)  ಅದಕ್ಕೆ ತನ್ನ ಅನುಮೋದನೆಯನ್ನು ನೀಡಿದೆ. ಈ ಶಾಲೆಯನ್ನು ರಾಂಚೋ  (Rancho) ಶಾಲೆ ಎಂದೂ ಕೂಡ ಕರೆಯಲಾಗುತ್ತದೆ. 

ರಾಜ್ಯ ಮಂಡಳಿಯಿಂದ  'NOC' ಅಗತ್ಯವಿದೆ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಯ ಅಫಿಲಿಯೇಶನ್ ನಿಯಮಗಳ ಪ್ರಕಾರ, ಶಾಲೆಗಳಿಗೆ ಆಯಾ ರಾಜ್ಯ ಮಂಡಳಿಯಿಂದ 'ನೋ ಆಬ್ಜೆಕ್ಷನ್ ಸರ್ಟಿಫಿಕೇಟ್' ('NOC') ಅಗತ್ಯವಿರುತ್ತದೆ. ವಿದೇಶಿ ಶಾಲೆಗಳಿಗೆ (Foreign Schools) ಆಯಾ ದೇಶದ ವಾಣಿಜ್ಯ ರಾಯಭಾರ (Commerce Embassy) ಕಚೇರಿಯಿಂದ ಅಥವಾ ಭಾರತದ ದೂತಾವಾಸದಿಂದ ಇದೇ ರೀತಿಯ ದಾಖಲೆ ಅವಶ್ಯಕತೆ ಇರುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ

ಶಾಲೆಯು JKBOSE ಗೆ ಅಫಿಲಿಯೇಟ್ ಆಗಿದೆ
ಅಮೀರ್ ಖಾನ್ ಅವರ 2009 ರ ಚಲನಚಿತ್ರ '3 ಈಡಿಯಟ್ಸ್' ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಗೆ ಬಂದ ಈ ಶಾಲೆಯು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ (JKBOSE) ಸಂಯೋಜಿತವಾಗಿದೆ. ನಮ್ಮ ಶಾಲೆಗೆ ಸಿಬಿಎಸ್‌ಇ ಮಾನ್ಯತೆ ಪಡೆಯಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ ಎಂದು ಶಾಲೆಯ ಮುಖ್ಯೋಪಾಧ್ಯಾಪಕಿ ಮಿಂಗೂರ್ ಆಗಮೊ ಅವರು ಪಿಟಿಐಗೆ ತಿಳಿದಿದ್ದಾರೆ.

ಇದನ್ನೂ ಓದಿ-Puneeth Rajkumar : 'ಜೇಮ್ಸ್ ಸಿನಿಮಾ'ದ ಶೂಟಿಂಗ್ ಕಂಪ್ಲೀಟ್ ಮಾಡಿದ ಚಿತ್ರ ತಂಡ

ಮುಖ್ಯೋಪಾಧ್ಯಾಯರ ಹೇಳಿಕೆ
ಈ ಕುರಿತು ಮಾತನಾಡಿರುವ ಮುಖ್ಯೋಪಾಧ್ಯಾಪಕಿ, 'ಆದರೆ, ನಮಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳಿವೆ. ಅತ್ಯುತ್ತಮ ಫಲಿತಾಂಶ ದಾಖಲೆಯನ್ನು ಹೊಂದಿದ್ದೇವೆ. ನಾವು ಬೋಧನೆಯ ಹೊಸ ವಿಧಾನಗಳತ್ತ ಗಮನ ಹರಿಸುತ್ತಿದ್ದೇವೆ. ಇಷ್ಟೆಲ್ಲಾ ಇದ್ದರೂ ಕೂಡ ನಮಗೆ NOC ಪ್ರಮಾಣಪತ್ರ ಸಿಕ್ಕಿರಲಿಲ್ಲ. ಈ ವರ್ಷ ನಮಗೆ ಅಫಿಲಿಯೇಶನ್ ಸಿಗಲಿದೆ ಎಂದು ಭಾವಿಸಿದ್ದು, ಯಾವುದೇ ಹೆಚ್ಚಿನ ಅಡೆತಡೆಗಳಿಲ್ಲದೆ ಅದು ನಮಗೆ ದೊರೆಯಲಿದೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ-Amazon Prime Offer: ಪವರ್ ಸ್ಟಾರ್ ಪುನೀತ್ ಸ್ಮರಣೆಗಾಗಿ ಉಚಿತ ಸಿನಿಮಾ ನೋಡುವ ಅವಕಾಶ

ಅನುಮೋದನೆ ಪಡೆಯಲು ಮೊದಲಿನಿಂದಲೂ ಪ್ರಯತ್ನ
ಲಡಾಖ್ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಸಿಗುವುದಕ್ಕಿಂತ ಮುಂಚಿತವಾಗಿಗೂ ಕೂಡ ನಾವು ಶಾಲೆಗೆ ಈ ಅನುಮೋದನೆಯನ್ನು ಪಡೆಯಲು ಪ್ರಯತ್ನಿಸುತ್ತಿದೆ. ರಾಜ್ಯ ವಿಭಜನೆಯ ನಂತರವೂ ಲಡಾಖ್‌ನ ಶಾಲೆಗಳು ಜಮ್ಮು ಮತ್ತು ಕಾಶ್ಮೀರ ಮಂಡಳಿಯೊಂದಿಗೆ ಸಂಯೋಜಿತವಾಗಿವೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ-ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ-ನಿಕ್ ದಂಪತಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News