ವಿಜಯವಾಡ: ಕೃಷ್ಣಾ ಜಿಲ್ಲೆಯಲ್ಲಿ ಹುಚ್ಚು ಬೆಕ್ಕು (Cat) ಕಚ್ಚಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಎರಡು ತಿಂಗಳ ಹಿಂದೆ ಬೆಕ್ಕಿನಿಂದ ಕಚ್ಚಿಸಿಕೊಂಡಿದ್ದ ಮಹಿಳೆಯರು ಶನಿವಾರ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Kabzaa:ಬಿಗ್ ಸರ್ಪ್ರೈಸ್ ನೀಡಿದ 'ಕಬ್ಜ' ಟೀಂ.. ಕಿಚ್ಚ ಸುದೀಪ್‌ಗೆ ಇವರೇ ನಾಯಕಿ!
ರೇಬಿಸ್‌ನಿಂದಾಗಿ (rabies) ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವೈದ್ಯರು ಹೇಳಿದ್ದಾರೆ. ಬೆಕ್ಕುಗಳು ತಮ್ಮಲ್ಲಿ ರೇಬೀಸ್ ಸೂಕ್ಷ್ಮಾಣುಗಳನ್ನು ಹೊಂದಿರುತ್ತವೆ. ಬೆಕ್ಕು ಕಡಿತದಿಂದ ಜನರು ರೇಬೀಸ್‌ನಿಂದ ಸಾಯುವುದು ಅಪರೂಪ. ಮಾನವರಲ್ಲಿ ರೇಬೀಸ್‌ಗೆ ಸಾಮಾನ್ಯ ಕಾರಣವೆಂದರೆ ಹುಚ್ಚು ನಾಯಿಗಳ ಕಡಿತ.
ಮೃತರನ್ನು ಆರ್‌ಟಿಸಿ ಬಸ್ ಕಂಡಕ್ಟರ್ ಸಾಲಿ ಭಾಗ್ಯರಾವ್ ಅವರ ಪತ್ನಿ ಕಮಲಾ (64) ಮತ್ತು ಗ್ರಾಮೀಣ ವೈದ್ಯಾಧಿಕಾರಿ ಬೊಡ್ಡು ಬಾಬು ರಾವ್ ಅವರ ಪತ್ನಿ ನಾಗಮಣಿ (43) ಎಂದು ಪೊಲೀಸರು ಗುರುತಿಸಿದ್ದಾರೆ.
ಇವರು ಕೃಷ್ಣಾ ಜಿಲ್ಲೆಯ ವೇಮುಲಮಾಡ ಕಾಲೋನಿಯ ನಿವಾಸಿಗಲಾಗಿದ್ದರು. ಬೆಕ್ಕಿನ ಕಡಿತದ (Cat Bite) ನಂತರ, ಅವರು ಆಸ್ಪತ್ರೆಗೆ ಹೋದರು, ಅಲ್ಲಿ ವೈದ್ಯರು ಆಂಟಿ ಟೆಟನಸ್ ಶಾಟ್ ನೀಡಿದರು. ಆದರೆ ಬೆಕ್ಕಿಗೆ ಹುಚ್ಚು ಹಿಡಿದಿದೆ ಎಂದು ವೈದ್ಯರು ನಿರೀಕ್ಷಿಸಿರಲಿಲ್ಲ.
ಬಳಿಕ ನಾಲ್ಕು ದಿನಗಳ ಹಿಂದೆ ಕಮಲಾ ಮತ್ತು ನಾಗಮಣಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಮಲಾ ಅವರನ್ನು ಮಂಗಳವಾರ ಮಂಗಳಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೊಂದೆಡೆ ನಾಗಮಣಿ ಶುಕ್ರವಾರ ಪಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆದಿದ್ದು, ಅಲ್ಲಿನ ವೈದ್ಯರ ಸೂಚನೆಯಂತೆ ವಿಜಯವಾಡದ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಪದೆ ಪದೇ ತಲೆ ಕೂದಲು ಕತ್ತರಿಸುವುದರಿಂದ ಆಗುವ ಪರಿಣಾಮವೇನು?
ನಾಗಮಣಿ ಹಾಗೂ ಕಮಲಾ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆದರೆ ಈ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಇಬ್ಬರಿಗೂ ರೇಬಿಸ್ ಸೋಂಕು ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.