ಶಾಸಕರಿಗೆ ಭಾವನಾತ್ಮಕ ಪತ್ರ ಬರೆದ ಉದ್ಧವ್ ಠಾಕ್ರೆ: ಹೇಳಿರೋದು ಏನು ಗೊತ್ತಾ?

ಮಹಾರಾಷ್ಟ್ರದ 16 ಬಂಡಾಯ ಶಾಸಕರ ಅನರ್ಹತೆ ಸಂಬಂಧಿಸಿದಂತೆ ಇಂದು (ಜುಲೈ 11) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಶಿವಸೇನೆಯು, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಕ್ಕೆ ಸೇರುತ್ತದೆಯೋ ಎಂಬುದನ್ನು ನ್ಯಾಯಾಲಯದ ನಿಲುವು ಸೂಚಿಸುತ್ತದೆ. ಈ ಪ್ರಕರಣದಲ್ಲಿ ಶಿಂಧೆ ಬಣ, ಉದ್ಧವ್ ಠಾಕ್ರೆ ಬಣ ಸೇರಿ 4 ಅರ್ಜಿಗಳು ದಾಖಲಾಗಿದ್ದು, ವಿಪ್‌ನಿಂದ ಹಿಡಿದು ಶಿವಸೇನೆ ಅಧ್ಯಕ್ಷರವರೆಗೂ ಪಕ್ಷದ ಭವಿಷ್ಯ ನಿರ್ಧಾರವಾಗಲಿದೆ.

Written by - Bhavishya Shetty | Last Updated : Jul 11, 2022, 11:06 AM IST
  • ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲ
  • ಶಿವಸೇನೆ ಶಾಸಕರಿಗೆ ಪತ್ರ ಬರೆದ ಉದ್ಧವ್ ಠಾಕ್ರೆ
  • ಶಾಸಕರ ಅನರ್ಹತೆ ಸಂಬಂಧಿಸಿದಂತೆ ಇಂದು ಸುಪ್ರೀಂನಲ್ಲಿ ವಿಚಾರಣೆ
ಶಾಸಕರಿಗೆ ಭಾವನಾತ್ಮಕ ಪತ್ರ ಬರೆದ ಉದ್ಧವ್ ಠಾಕ್ರೆ:  ಹೇಳಿರೋದು ಏನು ಗೊತ್ತಾ? title=
Uddhav Thackeray

ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲದ ನಡುವೆಯೇ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮನ್ನು ಬೆಂಬಲಿಸುವ ಶಾಸಕರಿಗೆ ಪತ್ರ ಬರೆದು ಭಾವನಾತ್ಮಕ ಸಂದೇಶ ನೀಡಿದ್ದಾರೆ. ಪತ್ರದಲ್ಲಿ ಉದ್ಧವ್ ಠಾಕ್ರೆ ಅವರು ನಿಷ್ಠಾವಂತರಾಗಿರುವ ಶಾಸಕರಿಗೆ ಧನ್ಯವಾದ ಹೇಳಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯ ಶಾಸಕರು ಬಂಡಾಯವೆದ್ದು, ಇದೀಗ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ನಿರ್ಮಾಣವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಉದ್ಧವ್ ಠಾಕ್ರೆ ಪತ್ರ ಬರೆದಿದ್ದಾರೆ. 

ಇದನ್ನೂ ಓದಿ: Lucky Zodiac Signs: ರಾಜಯೋಗದೊಂದಿಗೆ ಜನಿಸುತ್ತಾರಂತೆ ಈ 3 ರಾಶಿಯ ಜನ

ಪತ್ರದಲ್ಲಿ ಹೇಳಿರೋದೇನು? 
ಬಿಕ್ಕಟ್ಟಿನ ಸಂದರ್ಭದಲ್ಲಿ ನಿಷ್ಠೆ ಮತ್ತು ಬೆಂಬಲವಾಗಿ ನಿಂತ ಶಿವಸೇನೆಯ 15 ನಿಷ್ಠಾವಂತ ಶಾಸಕರಿಗೆ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಧನ್ಯವಾದಗಳನ್ನು ಅರ್ಪಿಸಿ ಭಾವನಾತ್ಮಕ ಪತ್ರವನ್ನು ಕಳುಹಿಸಿದ್ದಾರೆ. ʼತಾಯಿಯ ಹಾಲಿನಲ್ಲಿ ಅಪ್ರಾಮಾಣಿಕತೆ ಮಾಡಬೇಡಿʼ ಎಂದು ಪತ್ರದಲ್ಲಿ ಬರೆದಿದ್ದಾರೆ. ನೀವು ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರ ತತ್ವವನ್ನು ಅನುಸರಿಸಿದ್ದೀರಿ. ಯಾವುದೇ ಬೆದರಿಕೆ ಮತ್ತು ಪ್ರಚೋದನೆಗಳಿಲ್ಲದೆ ನಿಷ್ಠರಾಗಿರಿ. ಜಗದಂಬಾ ಮಾತೆ ನಿಮಗೆ ಆರೋಗ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ ಅಂತ ಪತ್ರದಲ್ಲಿ ಬರೆದಿದ್ದಾರೆ. 

ಶಿಂಧೆ ಅಥವಾ ಠಾಕ್ರೆ: ಶಿವಸೇನೆ ಯಾರಾದ್ದಾಗಲಿದೆ?
ಮಹಾರಾಷ್ಟ್ರದ 16 ಬಂಡಾಯ ಶಾಸಕರ ಅನರ್ಹತೆ ಸಂಬಂಧಿಸಿದಂತೆ ಇಂದು (ಜುಲೈ 11) ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಶಿವಸೇನೆಯು, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಕ್ಕೆ ಸೇರುತ್ತದೆಯೋ ಎಂಬುದನ್ನು ನ್ಯಾಯಾಲಯದ ನಿಲುವು ಸೂಚಿಸುತ್ತದೆ. ಈ ಪ್ರಕರಣದಲ್ಲಿ ಶಿಂಧೆ ಬಣ, ಉದ್ಧವ್ ಠಾಕ್ರೆ ಬಣ ಸೇರಿ 4 ಅರ್ಜಿಗಳು ದಾಖಲಾಗಿದ್ದು, ವಿಪ್‌ನಿಂದ ಹಿಡಿದು ಶಿವಸೇನೆ ಅಧ್ಯಕ್ಷರವರೆಗೂ ಪಕ್ಷದ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ: ಪಿಕ್ನಿಕ್ ತಾಣವಾಗಿ ಮಾರ್ಪಟ್ಟ ರಾಷ್ಟ್ರಪತಿ ಭವನ, ಅಡುಗೆ ಕ್ಯಾರಂ ಆಟದ ಮೂಲಕ ಪ್ರತಿಭಟನಾಕಾರರ ಮೋಜು

ಶಿವಸೇನೆಯ 53 ಶಾಸಕರಿಗೆ ಶೋಕಾಸ್ ನೋಟಿಸ್
ಮಹಾರಾಷ್ಟ್ರ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು 55 ಶಿವಸೇನೆ ಶಾಸಕರ ಪೈಕಿ 53 ಮಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅವರಲ್ಲಿ ಏಕನಾಥ್ ಶಿಂಧೆ ಬಣದ 39 ಮತ್ತು ಉದ್ಧವ್ ಠಾಕ್ರೆ ಬಣದ 14 ಶಾಸಕರಿದ್ದಾರೆ. ಆದರೆ, ಆದಿತ್ಯ ಠಾಕ್ರೆಗೆ ನೋಟಿಸ್ ಜಾರಿ ಮಾಡಿಲ್ಲ. ಬಹುಮತ ಪರೀಕ್ಷೆಯ ವೇಳೆ ವಿಪ್ ಉಲ್ಲಂಘಿಸಿದ್ದಕ್ಕಾಗಿ ಅನರ್ಹತೆ ಕಾಯಿದೆಯಡಿ ಈ ನೋಟಿಸ್‌ಗಳನ್ನು ನೀಡಲಾಗಿದೆ. ಶಿಂಧೆ ಬಣವು ವಿಪ್ ಉಲ್ಲಂಘಿಸಿದ್ದಕ್ಕಾಗಿ ಉಳಿದ ಶಾಸಕರ ವಿರುದ್ಧ ಅನರ್ಹತೆ ಕ್ರಮಕ್ಕೆ ಒತ್ತಾಯಿಸಲಾಗಿತ್ತು. ಆದರೆ ಆದಿತ್ಯ ಠಾಕ್ರೆ ಹೆಸರನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News