ಮುಂಬೈ : ಮಾಜಿ ಸಿಎಂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಕಿರಿಯ ಪುತ್ರ ತೇಜಸ್ ಠಾಕ್ರೆ ರಾಜಕೀಯಕ್ಕೆ ಎಂಟ್ರಿ ನೀಡಲು ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ತೇಜಸ್ ಹುಟ್ಟುಹಬ್ಬ, ಈ ಸಂದರ್ಭದಲ್ಲಿ ಉದ್ಧವ್ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ ತೇಜಸ್ ಠಾಕ್ರೆಗೆ ಶಿವಸೇನೆಯ ಯುವ ಘಟಕದ ಮುಖ್ಯಸ್ಥನಾಗಿ ಮಾಡಬಹುದು. ಈ ಊಹಾಪೋಹಗಳ ನಡುವೆ ಬಿಜೆಪಿ ನಾಯಕ ನೀಲೇಶ್ ರಾಣೆ ಅವರು ತೇಜಸ್ ಠಾಕ್ರೆ ಅವರನ್ನು ತೀವ್ರವಾಗಿ ಟಾರ್ಗೆಟ್ ಮಾಡಿದ್ದಾರೆ. ತೇಜಸ್ ರಾಜಕೀಯದಲ್ಲಿ ಯಾವುದೇ ಅನುಭವವಿಲ್ಲ. ಇಲ್ಲಿಯವರೆಗೆ ಅವರು ಸ್ನೇಹಿತರು ಜೊತೆ ಮೋಜು ಮಸ್ತಿ ಮಾಡುತ್ತ ಅಲೆದಾಡಿದ್ದಾರೆ. ಠಾಕ್ರೆ ಉಪನಾಮದಿಂದ ಅವರಿಗೆ ಏನು ಸಿಕ್ಕರೂ ಅದು ಸಿಕ್ಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಇಸ್ರೋದ SSLV 'Azadi ಉಪಗ್ರಹ' ಉಡಾವಣೆ ಯಶಸ್ವಿ: ಆದರೆ ಎದುರಾಗಿದೆ ಸಣ್ಣ ಸಮಸ್ಯೆ!
ಇನ್ನು ಮುಂದುವರೆದು ಮಾತನಾಡಿದ ನೀಲೇಶ್ ರಾಣೆ, ಶಿವಸೇನೆಯ ಎಲ್ಲಾ ಹುದ್ದೆಗಳು ಠಾಕ್ರೆ ಕುಟುಂಬದವರ ಬಳಿಯೇ ಉಳಿದರೆ, ಕಾರ್ಯಕರ್ತರು ಯಾರನ್ನು ಬೆಂಬಲಿಸುತ್ತಾರೆ. ಉದ್ಧವ್ ಠಾಕ್ರೆಯಿಂದ ತೇಜಸ್ ಠಾಕ್ರೆವರೆಗೆ ಸಿಕ್ಕಿರುವುದು ಎಲ್ಲವು ಠಾಕ್ರೆ ಉಪನಾಮದಿಂದ, ಉಳಿದ ಸಾಧನೆಗಳು ಶೂನ್ಯ. ಠಾಕ್ರೆ ಕುಟುಂಬವು ಎಲ್ಲಾ ಪ್ರಮುಖ ಹುದ್ದೆಗಳನ್ನು ತಮ್ಮ ಕುಟುಂಬ ಸದಸ್ಯರ ಬಳಿ ಮಾತ್ರ ಇರಿಸುತ್ತದೆ, ಹೊರಗಿನವರು ಇಲ್ಲ, ಉಳಿದವರಿಗೆ ಕುರ್ಚಿ ಮತ್ತು ಮೇಜು ಎತ್ತುವ ಕೆಲಸವನ್ನು ಮಾತ್ರ ನೀಡಲಾಗುತ್ತದೆ. ಎಷ್ಟೇ ಒಳ್ಳೆಯ ವ್ಯಕ್ತಿಯಾಗಿದ್ದರೂ ಅದು ಕೊನೆಯದಾಗ ಮಾತ್ರ. ಪಕ್ಷದ ಉನ್ನತ ಕಚೇರಿಯಲ್ಲಿ ಕಾಣಿಸಿಕೊಳ್ಳುವ ಹೆಸರು 'ಠಾಕ್ರೆ' ಎಂದರು.
ಉದ್ಧವ್ ಠಾಕ್ರೆ ಜೊತೆಯಲ್ಲಿರುವ ಕಾರ್ಯಕರ್ತರಿಗೆ ಟೇಬಲ್ ಮತ್ತು ಕುರ್ಚಿಗಳನ್ನು ಹಾಕುವ ಕೆಲಸವನ್ನು ಮಾತ್ರ ನೀಡಲಾಗುವುದು. ಎಲ್ಲಾ ಕೆಲಸಗಳನ್ನು ಕಾರ್ಮಿಕರೇ ಮಾಡುತ್ತಾರೆ, ಆದರೆ ಹುದ್ದೆ ಠಾಕ್ರೆ ಕುಟುಂಬದ ವ್ಯಕ್ತಿಗೆ ಹೋಗುತ್ತದೆ. ಉದ್ಧವ್ ಠಾಕ್ರೆ ನಿಮ್ಮ ಬಗ್ಗೆ ಎಂದಿಗೂ ಯೋಚಿಸುವುದಿಲ್ಲ. ನೀವೇ ಯೋಚಿಸಬೇಕು ಎಂದು ನಾನು ಸಲಹೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮೋದಿ ವಿರುದ್ಧ ಪ್ರತಿಭಟನೆಗೆ ಹೊಸ ತಂತ್ರ: ನೀತಿ ಆಯೋಗದ ಸಭೆ ಹೊರಬಂದ್ರಾ ನಿತೀಶ್-ಕೆಸಿಆರ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.