UGC NET 2021 date: UGC ನೆಟ್ ಪರೀಕ್ಷೆಗಳ ವೇಳಾಪಟ್ಟಿ ಘೋಷಣೆ, ಅರ್ಜಿ ಸಲ್ಲಿಸಲು ಇಲ್ಲಿದೆ Direct Link

UGC NET 2021 Date - ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ ನೆಟ್ ಡಿಸೆಂಬರ್ 2020 ಸೆಷನ್ ಪರೀಕ್ಷೆ ಮತ್ತು ಜೂನ್ 2021 ಸೆಷನ್ ಪರೀಕ್ಷೆಯನ್ನು ವಿಲೀನಗೊಳಿಸಿದೆ. ಇದೀಗ ಎರಡೂ ಸೆಶನ್ ಗಳ ಪರೀಕ್ಷೆಯು 2021 ರ ಅಕ್ಟೋಬರ್ 6 ರಿಂದ 11 ಅಕ್ಟೋಬರ್ ವರೆಗೆ ಏಕಕಾಲದಲ್ಲಿ ನಡೆಯಲಿದೆ.

Written by - Nitin Tabib | Last Updated : Aug 11, 2021, 03:52 PM IST
  • UGC NET 2021 ಪರೀಕ್ಷೆಗಳ ವೇಳಾಪಟ್ಟಿ ಘೋಷಣೆ.
  • ಯುಜಿಸಿ ನೆಟ್ ಡಿಸೆಂಬರ್ 2020 ಸೆಷನ್ ಪರೀಕ್ಷೆ ಮತ್ತು ಜೂನ್ 2021 ಸೆಷನ್ ಪರೀಕ್ಷೆಯನ್ನು ವಿಲೀನಗೊಳಿಸಲಾಗಿದೆ.
  • ಇದೀಗ ಎರಡೂ ಸೆಶನ್ ಗಳ ಪರೀಕ್ಷೆಯು 2021 ರ ಅಕ್ಟೋಬರ್ 6 ರಿಂದ 11 ಅಕ್ಟೋಬರ್ ವರೆಗೆ ಏಕಕಾಲದಲ್ಲಿ ನಡೆಯಲಿದೆ.
UGC NET 2021 date: UGC ನೆಟ್ ಪರೀಕ್ಷೆಗಳ ವೇಳಾಪಟ್ಟಿ ಘೋಷಣೆ, ಅರ್ಜಿ ಸಲ್ಲಿಸಲು ಇಲ್ಲಿದೆ Direct Link title=
UGC NET 2021 Date (File Photo)

UGC NET 2021 Date - ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯುಜಿಸಿ ನೆಟ್ ಡಿಸೆಂಬರ್ 2020 ಸೆಷನ್ ಪರೀಕ್ಷೆ ಮತ್ತು ಜೂನ್ 2021 ಸೆಷನ್ ಪರೀಕ್ಷೆಯನ್ನು ವಿಲೀನಗೊಳಿಸಿದೆ. ಇದೀಗ ಎರಡೂ ಸೆಶನ್ ಗಳ ಪರೀಕ್ಷೆಯು 2021 ರ ಅಕ್ಟೋಬರ್ 6 ರಿಂದ 11 ಅಕ್ಟೋಬರ್ ವರೆಗೆ ಏಕಕಾಲದಲ್ಲಿ ನಡೆಯಲಿದೆ. ಕರೋನಾದಿಂದಾಗಿ, ಡಿಸೆಂಬರ್ 2020 ರ ಅಧಿವೇಶನದ ಪರೀಕ್ಷೆಯಲ್ಲಿ ಮತ್ತು ಜೂನ್ 2021 ರ ಅರ್ಜಿಯ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ, ಆದ್ದರಿಂದ ಎರಡೂ ಸೆಷನ್‌ಗಳ ಪರೀಕ್ಷೆಯನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಯುಜಿಸಿ ನೆಟ್ ಪರೀಕ್ಷೆಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ugcnet.nta.nic.in ಮತ್ತು nta.ac.in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5 ಸೆಪ್ಟೆಂಬರ್ 2021. ಶುಲ್ಕ ಪಾವತಿಗೆ ಕೊನೆಯ ದಿನಾಂಕ 6 ಸೆಪ್ಟೆಂಬರ್ 2021. ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯಲ್ಲಿ ಸೆಪ್ಟೆಂಬರ್ 7 ಮತ್ತು ಸೆಪ್ಟೆಂಬರ್ 12 ರ ನಡುವೆ ತಿದ್ದುಪಡಿಗಳನ್ನು ಮಾಡಲು ಸಾಧ್ಯವಾಗಲಿದೆ. 

ಈ ಮೊದಲು ಡಿಸೆಂಬರ್ 2020 ರ ಸೆಶನ್ ಯುಜಿಸಿ ನೆಟ್ ಪರೀಕ್ಷೆಯನ್ನು ಮೇ 2 ರಿಂದ ಮೇ 17, 2021 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾದಿಂದಾಗಿ ಅದನ್ನೂ  ಕೂಡ ಮುಂದೂಡಲಾಗಿತ್ತು. UGC NET ಡಿಸೆಂಬರ್ 2020 ರ ಅರ್ಜಿ ಪ್ರಕ್ರಿಯೆಯು ಫೆಬ್ರವರಿ-ಮಾರ್ಚ್ 2021 ರಲ್ಲಿ ನಡೆದಿದೆ. UGC NET Exam 2021 ಡಿಸೆಂಬರ್ 2020 ಪರೀಕ್ಷೆಗೆ ನೋಂದಾಯಿಸಿದ ಆದರೆ ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳು https://ugcnet.nta.nic.in, www.nta.ac.in ಗೆ ಭೇಟಿ ನೀಡಿ ಅರ್ಜಿಯನ್ನು ಪೂರ್ಣಗೊಳಿಸಬಹುದು.

ಮಹತ್ವದ ದಿನಾಂಕಗಳು
>> ಅರ್ಜಿ ಪ್ರಕ್ರಿಯೆ - 10 ಆಗಸ್ಟ್ 2021 ರಿಂದ 5 ಸೆಪ್ಟೆಂಬರ್ 2021 ರವರೆಗೆ
>> ಶುಲ್ಕ ಪಾವತಿಗೆ ಕೊನೆಯ ದಿನಾಂಕ - 6 ಸೆಪ್ಟೆಂಬರ್ 2021
>> ಅರ್ಜಿ ನಮೂನೆಯಲ್ಲಿ ತಿದ್ದುಪಡಿ ದಿನಾಂಕ - 7 ನೇ ಸೆಪ್ಟೆಂಬರ್ ನಿಂದ 12 ನೇ ಸೆಪ್ಟೆಂಬರ್ 2021
>> ಪ್ರವೇಶ ಪತ್ರ - ನಂತರ ತಿಳಿಸಲಾಗುವುದು
>> ಪರೀಕ್ಷೆಯ ದಿನಾಂಕ - 6 ಅಕ್ಟೋಬರ್ ನಿಂದ 11 ಅಕ್ಟೋಬರ್ 2021

ಇದನ್ನೂ ಓದಿ-Alert! Fake Universities ಪಟ್ಟಿ ಸೇರಿದ ಕರ್ನಾಟಕದ ಈ ವಿಶ್ವವಿದ್ಯಾಲಯ, ಎಚ್ಚರ !

ಅಕ್ಟೋಬರ್ 6 ರಿಂದ ಅಕ್ಟೋಬರ್ 11 ರವರೆಗೆ ಎರಡು ಶಿಫ್ಟ್ ಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ಶಿಫ್ಟ್ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೇ ಶಿಫ್ಟ್ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ಇರುತ್ತದೆ. ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ (CBT) ವಿಧಾನದಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಎರಡೂ ಪತ್ರಿಕೆಗಳು ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುತ್ತವೆ.

ಇದನ್ನೂ ಓದಿ-2021-22 ರ ಶೈಕ್ಷಣಿಕ ವರ್ಷಕ್ಕೆ ಹೊಸ ಮಾರ್ಗಸೂಚಿಗಳನ್ನು ಘೋಷಿಸಿದ ಯುಜಿಸಿ

ಜೂನಿಯರ್ ಪ್ರೊಫೆಸರ್ ಫೆಲೋಶಿಪ್ (Junior Professor Fellowship) ಮತ್ತು ಅಸಿಸ್ಟೆಂಟ್ ಪ್ರೊಫೆಸರ್‌ಗಾಗಿ (Assistant Professor) ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸುತ್ತದೆ. ಸಾಮಾನ್ಯವಾಗಿ ಜೂನ್ ಮತ್ತು ಡಿಸೆಂಬರ್‌ನಲ್ಲಿ, ದೇಶಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. 2020 ರಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಜೂನ್ ಪರೀಕ್ಷೆಯನ್ನು ನಡೆಸುವಲ್ಲಿ ವಿಳಂಬವಾಗಿದೆ ಮತ್ತು ನಂತರ NTA ಈ ಪರೀಕ್ಷೆಯನ್ನು 16 ಸೆಪ್ಟೆಂಬರ್ ನಿಂದ 18 ಸೆಪ್ಟೆಂಬರ್ ಮತ್ತು 21 ಸೆಪ್ಟೆಂಬರ್ ನಿಂದ 25 ಸೆಪ್ಟೆಂಬರ್ ವರೆಗೆ ನಡೆಸಲು ನಿರ್ಧರಿಸಿತ್ತು. ಜೂನ್ ಪರೀಕ್ಷೆಯ ವಿಳಂಬದಿಂದಾಗಿ, ಯುಜಿಸಿ ನೆಟ್ ಡಿಸೆಂಬರ್ 2020 ಪರೀಕ್ಷೆಯನ್ನು ನಡೆಸುವುದು ಸಹ ವಿಳಂಬವಾಯಿತು. UGC NET ಡಿಸೆಂಬರ್ 2020 ರ ಅರ್ಜಿ ಪ್ರಕ್ರಿಯೆಯು ಫೆಬ್ರವರಿ-ಮಾರ್ಚ್ 2021 ರಲ್ಲಿ ನಡೆದಿದೆ. 

ಇದನ್ನೂ ಓದಿ-UGC Guidelines released : ಇದೆ ತಿಂಗಳಲ್ಲಿ ನಡೆಯಬೇಕಿದ್ದ ಉನ್ನತ ಶಿಕ್ಷಣ ಇಲಾಖೆಯ ಎಲ್ಲಾ ಪರೀಕ್ಷೆಗಳಿಗೆ 'UGC' ಬ್ರೇಕ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News