Alert! Fake Universities ಪಟ್ಟಿ ಸೇರಿದ ಕರ್ನಾಟಕದ ಈ ವಿಶ್ವವಿದ್ಯಾಲಯ, ಎಚ್ಚರ !

Fake Universities List - ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ನಕಲಿ ವಿಶ್ವವಿದ್ಯಾಲಯಗಳ (Fake Universities List) ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಪಟ್ಟಿಗೆ ಇನ್ನೂ 2 ಸಂಸ್ಥೆಗಳ ಹೆಸರನ್ನು ಸೇರಿಸಲಾಗಿದೆ.

Written by - Nitin Tabib | Last Updated : Aug 2, 2021, 08:44 PM IST
  • ಶಿಕ್ಷಣ ಸಚಿವರಿಂದ ಲೋಕಸಭೆಗೆ ಉತ್ತರ.
  • ನಕಲಿ ವಿವಿ ಪಟ್ಟಿಯಲ್ಲಿ 2 ಸಂಸ್ಥೆಗಳ ಹೆಸರು ಸೇರ್ಪಡೆ.
  • ಕಳೆದ ವರ್ಷ ಯುಜಿಸಿ 24 ನಕಲಿ ವಿವಿ ಪಟ್ಟಿ ಜಾರಿಗೊಳಿಸಿತ್ತು.
Alert! Fake Universities ಪಟ್ಟಿ ಸೇರಿದ ಕರ್ನಾಟಕದ ಈ ವಿಶ್ವವಿದ್ಯಾಲಯ, ಎಚ್ಚರ  ! title=
List Of Fake Universities In India (File Photo)

ನವದೆಹಲಿ: Fake Universities List - ದೇಶದಲ್ಲಿ ನಡೆಯುತ್ತಿರುವ ನಕಲಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮಹತ್ವದ ಮಾಹಿತಿಯನ್ನು ನೀಡಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ದೂರುಗಳನ್ನು ಅರಿತುಕೊಂಡು, ಯುಜಿಸಿ 24 ಸಂಸ್ಥೆಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಹೇಳಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Education Minister Dharmendra Pradhan) ಪರವಾಗಿ, ಲೋಕಸಭೆಯಲ್ಲಿ (Lok Sabha) ಇದೀಗ ಇನ್ನೂ ಎರಡು ಸಂಸ್ಥೆಗಳ ಹೆಸರುಗಳನ್ನು ನಕಲಿ ವಿಶ್ವವಿದ್ಯಾಲಯಗಳ ಪಟ್ಟಿದೆ ಸೇರಿಸಲಾಗಿದೆ ಎಂದು ತಿಳಿಸಲಾಗಿದೆ.

 

 

ದೇಶಾದ್ಯಂತ ಒಟ್ಟು 26 ನಕಲಿ ವಿಶ್ವವಿದ್ಯಾಲಯಗಳಿವೆ
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) ಕಳೆದ ವರ್ಷ ಅಕ್ಟೋಬರ್‌ನಲ್ಲಿ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ 24 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಲಕ್ನೋದ ಇಂಡಿಯನ್ ಕೌನ್ಸಿಲ್ ಆಫ್ ಎಜುಕೇಶನ್ ಮತ್ತು ದೆಹಲಿಯ ಕುತುಬ್ ಎನ್ಕ್ಲೇವ್ ನಲ್ಲಿ ನಡೆಯುತ್ತಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಅಂಡ್ ಪ್ಲಾನಿಂಗ್ ಸಂಸ್ಥೆಯ (IIPM) ಹೆಸರುಗಳನ್ನು ಸಹ ಈ ಪಟ್ಟಿಗೆ  ಸೇರಿಸಲಾಗಿದೆ. ಹೀಗಾಗಿ ಇದೀಗ ದೇಶಾದ್ಯಂತ ನಡೆಯುತ್ತಿರುವ ನಕಲಿ ವಿವಿಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.

ಅಕ್ಟೋಬರ್ 7, 2020 ರಂದು ಯುಜಿಸಿ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ 24 ವಿಶ್ವವಿದ್ಯಾಲಯಗಳ ಹೆಸರುಗಳನ್ನು ಸೇರಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ಸಂಸ್ಥೆಗಳು ದೆಹಲಿ ಮತ್ತು ಯುಪಿಯಲ್ಲಿವೆ. ಆಯೋಗದ ಕಾರ್ಯದರ್ಶಿ ರಜನೀಶ್ ಅವರು ಬರೆದಿರುವ ಪತ್ರದಲ್ಲಿ, 24 ಸ್ವಯಂ ಘೋಷಿತ ಮಾನ್ಯತೆ ಪಡೆಯದ ಸಂಸ್ಥೆಗಳು ಯುಜಿಸಿ ಕಾಯ್ದೆ 1956 ರ ಉಲ್ಲಂಘನೆಯಡಿ ಕೆಲಸ ಮಾಡುತ್ತಿವೆ, ಇವುಗಳನ್ನು ನಕಲಿ ವಿಶ್ವವಿದ್ಯಾಲಯಗಳೆಂದು ಘೋಷಿಸಲಾಗಿದೆ ಮತ್ತು ಈ ಸಂಸ್ಥೆಗಳಿಗೆ ಪದವಿಗಳನ್ನು ನೀಡುವ ಹಕ್ಕೂ ಇಲ್ಲ ಎನ್ನಲಾಗಿತ್ತು. 

ಇದನ್ನೂ ಓದಿ-2021-22 ರ ಶೈಕ್ಷಣಿಕ ವರ್ಷಕ್ಕೆ ಹೊಸ ಮಾರ್ಗಸೂಚಿಗಳನ್ನು ಘೋಷಿಸಿದ ಯುಜಿಸಿ

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಸಂಸ್ಥೆಗಳಿವೆ
ಕಳೆದ ವರ್ಷ ಜಾರಿಗೊಳಿಸಲಾಗಿದ್ದ  24 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ, ಉತ್ತರ ಪ್ರದೇಶ ಅತಿ ಹೆಚ್ಚು ಅಂದರೆ 8  ನಕಲಿ ವಿವಿಗಳನ್ನು ಹೊಂದಿರುವ ರಾಜ್ಯವಾಗಿತ್ತು ಮತ್ತು ಇದೀಗ ಭಾರತೀಯ ಶಿಕ್ಷಣ ಪರಿಷತ್ ಹೆಸರಿನ ಸೇರ್ಪಡೆಯ ನಂತರ ನಂತರ, ಈ ಸಂಖ್ಯೆ 9 ಕ್ಕೆ ಏರಿದೆ. ನಕಲಿ ವಿಶ್ವವಿದ್ಯಾಲಯಗಳ ವಿಷಯದಲ್ಲಿ, ದೆಹಲಿ 7 ನಕಲಿ ವಿವಿಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿತ್ತು. ಆದ್ರೆ ಇದೀಗ ಈ ಪಟ್ಟಿಯಲ್ಲಿ IIPM ಹೆಸರು ಸೇರಿಕೆಯಾಗಿರುವ ಕಾರಣ ಈ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ-UGC Guidelines released : ಇದೆ ತಿಂಗಳಲ್ಲಿ ನಡೆಯಬೇಕಿದ್ದ ಉನ್ನತ ಶಿಕ್ಷಣ ಇಲಾಖೆಯ ಎಲ್ಲಾ ಪರೀಕ್ಷೆಗಳಿಗೆ 'UGC' ಬ್ರೇಕ್!

ಇದೆ ರೀತಿ ಈ ನಕಲಿ ವಿವಿಗಳ ಪಟ್ಟಿಯಲ್ಲಿ ಓಡಿಷಾ ಹಾಗೂ ಪ. ಬಂಗಾಳದ ತಲಾ ಎರಡೆರಡು ವಿವಿಗಳು ಶಾಮೀಲಾಗಿವೆ. ಉಳಿದಂತೆ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ಪಾಂಡಿಚೇರಿಗಳೂ ಕೂಡ ತಲಾ ಒಂದು ನಕಲಿ ವಿವಿ ಹೊಂದಿವೆ.

ಇದನ್ನೂ ಓದಿ-Central University ಗಳಲ್ಲಿ ದಾಖಲಾತಿಗೆ 2021 ರಲ್ಲಿ Common Test

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News