Ujjwala Yojna 2.0 - ಉತ್ತರ ಪ್ರದೇಶ ಚುನಾವಣೆಗೂ (UP Assembly Elections 2022) ಮುನ್ನ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು (PM Narendra Modi Government) ಉಜ್ವಲ ಯೋಜನೆಯನ್ನು ಹೊಸ ಪ್ಯಾಕೇಜಿಂಗ್‌ನೊಂದಿಗೆ ಆರಂಭಿಸಲಿದೆ, ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸುವ ಯೋಜನೆ ಇದಾಗಿದೆ . ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಜ್ವಲ ಯೋಜನೆ 2.0ಕ್ಕೆ (Ujjwala Yojna 2.0) ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಿಂದ ಚಾಲನೆ ನೀಡಲಿದ್ದಾರೆ. ಉಜ್ವಲ 2.0 ಅಡಿಯಲ್ಲಿ, ಫಲಾನುಭವಿಗೆ ಉಚಿತ ಗ್ಯಾಸ್ ಸಂಪರ್ಕ, ಗ್ಯಾಸ್ ಸ್ಟೋವ್ ಜೊತೆಗೆ ಮೊದಲ ಬಾರಿಗೆ ತುಂಬಿದ ಸಿಲಿಂಡರ್ ಸಿಗಲಿದೆ.
2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರದ ಉಜ್ವಲ ಯೋಜನೆಯನ್ನು (Ujjwala Yojana) ಸಾಕಷ್ಟು ಚರ್ಚಿಸಲಾಯಿತು ಮತ್ತು ಇದು ಬಿಜೆಪಿಯ ದೊಡ್ಡ ಗೆಲುವಿಗೆ ಕಾರಣವಾಗಿತ್ತು. ಆದರೆ, ಉಜ್ವಲ ಯೋಜನೆಯ ಮೊದಲ ಆವೃತ್ತಿಯಲ್ಲಿ, ಸರ್ಕಾರವು LPG ಸಂಪರ್ಕಗಳಿಗೆ ರೂ 1600 (ಠೇವಣಿ ಹಣ) ದ ಆರ್ಥಿಕ ಸಹಾಯವನ್ನು ಮಾತ್ರ ನೀಡುತ್ತಿತ್ತು. ಈ ಯೋಜನೆಯಡಿ, ಗ್ಯಾಸ್ ಸಂಪರ್ಕಗಳನ್ನು ಪಡೆಯುವ ಕುಟುಂಬಗಳು ಯಾವುದೇ ಬಡ್ಡಿ ಇಲ್ಲದೆ ಸ್ಟೌವ್ ಮತ್ತು ಸಿಲಿಂಡರ್‌ಗಳಿಗಾಗಿ ಸಾಲ ತೆಗೆದುಕೊಳ್ಳಬಹುದಾಗಿತ್ತು.
ಉಜ್ವಲಾ 2.0 ಯೋಜನೆಯ ಅಡಿ ಕೇಂದ್ರ ಸರ್ಕಾರ ಈ ಆರ್ಥಿಕ ವರ್ಷದಲ್ಲಿ ಸುಮಾರು ಒಂದು ಕೋಟಿ ಗ್ಯಾಸ್ ಸಂಪರ್ಕ ಬಡವರಿಗೆ ಉಚಿತವಾಗಿ ಕಲ್ಪಿಸುವ ಗುರಿ ಹೊಂದಿದೆ. ಇಂದಿಗೆ ಸುಮಾರು ಐದು ವರ್ಷಗಳ ಹಿಂದೆ ಉತ್ತರ ಪ್ರದೇಶ ಚುನಾವಣೆಗಳಿಗೂ ಮುನ್ನ ಪ್ರಧಾನಿ ಮೋದಿ (PM Narendra Modi) ಮೇ 1, 2016ರಲ್ಲಿ ರಾಜ್ಯದ ಬಲಿಯಾ ಜಿಲ್ಲೆಯ ಮೂಲಕ ಈ ಯೋಜನೆಯ ಮೊದಲ ಆವೃತ್ತಿಗೆ ಚಾಲನೆ ನೀಡಿದ್ದರು. ಹೆಸರು ಉಲ್ಲೇಖಿಸದಿರಲು ಮನವಿ ಮಾಡಿರುವ ಅಧಿಕಾರಿಯೊಬ್ಬರ ಪ್ರಕಾರ, ಉಜ್ವಲಾ 2.0 ಅಡಿ ರೂ.800ಕ್ಕಿಂತ ಅಧಿಕ ಬೆಲೆಯ ಸಿಲಿಂಡರ್ ಹಾಗೂ ಒಂದು ಗ್ಯಾಸ್ ಸ್ಟೋವ್ ಉಚಿತವಾಗಿ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಈ ಕುರಿತು ಘೋಷಿಸಲಾಗಿದೆ
ಈ ಬಾರಿಯ ಬಜೆಟ್ ನಲ್ಲಿ ಈ ಯೋಜನೆಯ ಉದ್ದೇಶವನ್ನು ಘೋಷಿಸಲಾಗಿತ್ತು. ಫೆಬ್ರುವರಿ 1, 2021 ರ ತಮ್ಮ ಬಜೆಟ್ ಭಾಷಣದಲ್ಲಿ ಈ ಕುರಿತು ಉಲ್ಲೇಖಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೋಟ್ಯಾಂತರ ಹೊಸ ಲಾಭಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದರು. ಈ ಕುರಿತು ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದ ನಿರ್ಮಲಾ ಸೀತಾರಾಮನ್, ಈಗಾಗಲೇ ಸುಮಾರು 8 ಕೋಟಿ ಲಾಭಾರ್ಥಿಗಳನ್ನು ಹೊಂದಿರುವ ಉಜ್ವಲಾ ಯೋಜನೆಗೆ ಹೊಸದಾಗಿ ರುಮಾರು 1 ಕೋಟಿ ಅಧಿಕ ಲಾಭಾರ್ಥಿಗಳನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ- PM Kisan : ಆಗಸ್ಟ್ 9 ರಂದು ರೈತರ ಖಾತೆಗೆ 2000 ರೂ. ಜಮಾ : ನಿಮ್ಮ ಹೆಸರನ್ನು ಇಲ್ಲಿ ಪರಿಶೀಲಿಸಿ
ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದು (How To Apply For Ujjwala Yojana)
ಫ್ರೀ ಕಾಸ್ಟ್ ರಿಫಿಲ್ ಹಾಗೂ ಸ್ಟೋವ್ ಜೊತೆಗೆ ಡಿಪಾಸಿಟ್ ಪ್ರೀ ಗ್ಯಾಸ್ ಕನೆಕ್ಷನ್ ಪಡೆಯಲು ಈ ಯೋಜನೆಗೆ ಹೊಸದಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇರಲಿದೆ. ಈ ಕುರಿತು ಮಾತನಾಡಿರುವ ಅಧಿಕಾರಿಗಳು ಒಂದು ವಲಸಿಗರ ಕುಟುಂಬಕ್ಕೆ ಪ್ರತ್ಯೇಕ ಗ್ಯಾಸ್ ಸಂಪರ್ಕ ಕೂಡ ಸಿಗಲಿದೆ ಎಂದಿದ್ದಾರೆ. ಈ ಕುರಿತು ಹೇಳಿರುವ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಕುಟುಂಬಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
Notry ಮುಚ್ಚಳಿಕೆಯ ಅವಶ್ಯಕತೆ ಇಲ್ಲ
ಈ ಯೋಜನೆಯಡಿ ಅರ್ಜಿದಾರರು KYC ಗಾಗಿ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು, ಇದಕ್ಕಾಗಿ ಯಾವುದೇ ನೋಟರಿಯ ಅಫಿಡವಿಟ್ ಸಲ್ಲಿಸುವ ಅಗತ್ಯವಿಲ್ಲ. ಇದೇ ವೇಳೆ, ವಲಸಿಗರು ನಿವಾಸ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ, ಅವರಿಗೆ ಸ್ವಯಂ ಘೋಷಣೆಯ ಆಯ್ಕೆಯನ್ನು ನೀಡಲಾಗುತ್ತದೆ. ಸಾಮಾನ್ಯ ಸೇವಾ ಕೇಂದ್ರದ ಮೂಲಕ ಅಥವಾ ಗ್ಯಾಸ್ ಕಂಪನಿಗಳ ವೆಬ್‌ಸೈಟ್ ಮೂಲಕ ಜನರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ-ನಿಮ್ಮ ಹೆಸರಿನಲ್ಲಿ LPG ಕನೆಕ್ಷನ್ ಇದೆಯಾ? ಹಾಗಿದ್ದರೆ ನಿಮಗೂ ಸಿಗಲಿದೆ ಈ ಸೌಲಭ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ