Ukraine Crisis: PM Modiಯಿಂದ ಉನ್ನತ ಮಟ್ಟದ ಸಭೆ

Russia-Ukraine War Updates - ಉಕ್ರೇನ್ ಬಿಕ್ಕಟ್ಟಿನ (Ukraine) ಕುರಿತು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಉನ್ನತ ಮಟ್ಟದ ಸಭೆಯನ್ನು (High Level Meeting) ಕರೆದಿದ್ದಾರೆ. ಸರ್ಕಾರದ ಮೂಲಗಳನ್ನು ನಂಬುವುದಾದರೆ, ಉಕ್ರೇನ್ ನಲ್ಲಿ ಭಾರತೀಯರ ಸ್ಥಳಾಂತರಿಸುವಿಕೆಯನ್ನು ನಿರ್ವಹಿಸಲು ಕೆಲವು ಕೇಂದ್ರ ಸಚಿವರು ಉಕ್ರೇನ್‌ನ ನೆರೆಯ ದೇಶಗಳಿಗೆ ಹೋಗುವ ಸಾಧ್ಯತೆ ಇದೆ. 

Written by - Nitin Tabib | Last Updated : Feb 28, 2022, 12:40 PM IST
  • ಉಕ್ರೇನ್ ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ
  • ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಲಾಂತರಿಸುವಿಕೆಯ ಚರ್ಚೆ
  • ಉಕ್ರೇನ್ ಗೆ ಸಚಿವರ ತಂಡ ತೆರಳುವ ಸಾಧ್ಯತೆ
Ukraine Crisis: PM Modiಯಿಂದ ಉನ್ನತ ಮಟ್ಟದ ಸಭೆ title=
Russia-Ukraine War Updates (File Photo)

Russia-Ukraine War Updates - ಉಕ್ರೇನ್ ಬಿಕ್ಕಟ್ಟಿನ (Ukraine) ಕುರಿತು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಉನ್ನತ ಮಟ್ಟದ ಸಭೆಯನ್ನು (High Level Meeting) ಕರೆದಿದ್ದಾರೆ. ಸರ್ಕಾರದ ಮೂಲಗಳನ್ನು ನಂಬುವುದಾದರೆ, ಉಕ್ರೇನ್ ನಲ್ಲಿ ಭಾರತೀಯರ ಸ್ಥಳಾಂತರಿಸುವಿಕೆಯನ್ನು ನಿರ್ವಹಿಸಲು ಕೆಲವು ಕೇಂದ್ರ ಸಚಿವರು ಉಕ್ರೇನ್‌ನ ನೆರೆಯ ದೇಶಗಳಿಗೆ ಹೋಗುವ ಸಾಧ್ಯತೆ ಇದೆ. ಇವರಲ್ಲಿ ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಶಾಮೀಲಾಗಿದ್ದಾರೆ. ಸ್ಥಳಾಂತರಿಸುವ ಕಾರ್ಯಾಚರಣೆಯ ಸಮಯದಲ್ಲಿ, ಈ ಜನರು ಸಮನ್ವಯಕ್ಕಾಗಿ ಕೆಲಸ ಮಾಡುತ್ತಾರೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದ್ದಾರೆ.

ರಷ್ಯಾದ ದಾಳಿಯ (Russia-Ukraine War) ನಂತರ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಪ್ರಯತ್ನಗಳ ಮಧ್ಯೆ ಪ್ರಧಾನಿ ಮೋದಿ ಭಾನುವಾರ ಉನ್ನತ ಮಟ್ಟದ ಸಭೆಗೆ ಒತ್ತಾಯಿಸಿದ್ದರು. ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಬೇಗನೆ ಹಿಂದಿರುಗುವಿಕೆಯನ್ನು ಖಚಿತಪಡಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದಾರೆ.

ಪ್ರಧಾನಿ ಮೋದಿ ಭಾನುವಾರವೂ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ಮೋದಿಯವರಲ್ಲದೆ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಎರಡು ಗಂಟೆಗೂ ಹೆಚ್ಚು ಕಾಲ ಈ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದಲ್ಲಿ ಪ್ರಚಾರ ಮುಗಿಸಿ ಹಿಂದಿರುಗಿದ ತಕ್ಷಣ ಪ್ರಧಾನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ-ಪರಮಾಣು ನಿರೋಧಕ ಪಡೆಗಳಿಗೆ ಹೈಅಲರ್ಟ್ ನಲ್ಲಿರಲು ಸೂಚಿಸಿದ ಪುಟಿನ್..!

ಪುಟಿನ್, ಜೆಲೆನ್ಸ್ಕಿ ಜೊತೆ ಪ್ರಧಾನಿ ಚರ್ಚೆ 
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದರು ಮತ್ತು ಹಿಂಸಾಚಾರವನ್ನು ನಿಲ್ಲಿಸಿ ಮಾತುಕತೆ ಪ್ರಾರಂಭಿಸುವಂತೆ ಮನವಿ ಮಾಡಿದ್ದರು. ಇದರ ನಂತರ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು ಮತ್ತು ತನ್ನ ದೇಶದ ವಿರುದ್ಧ ರಷ್ಯಾದ ಮಿಲಿಟರಿ ಆಕ್ರಮಣವನ್ನು ನಿಲ್ಲಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತದಿಂದ ರಾಜಕೀಯ ಬೆಂಬಲವನ್ನು ಕೋರಿದ್ದರು.

ಇದನ್ನೂ ಓದಿ -Russia Ukraine War: ಅಂತರಾಷ್ಟ್ರೀಯ ಕೋರ್ಟ್ ಗೆ ಮೊರೆ ಹೋದ ಉಕ್ರೇನ್..!

ಉಭಯ ದೇಶಗಳ ನಡುವೆ ಶಾಂತಿ ಮರುಸ್ಥಾಪನೆಗೆ ಭಾರತ ಒತ್ತು 
ಇದೇ ವೇಳೆ ಉಭಯ ದೇಶಗಳ ನಡುವಿನ ಶಾಂತಿ ಮರುಸ್ಥಾಪನೆಯ ಪ್ರಯತ್ನಗಳಿಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಭಾರತವು ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ. ಅಲ್ಲಿ ನಡೆಯುತ್ತಿರುವ ಘರ್ಷಣೆಯಿಂದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ನಾಗರಿಕರನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಉಕ್ರೇನ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ-Ukraine Crisis: YouTube ಬಳಿಕ ಇದೀಗ ರಷ್ಯಾ ಸರ್ಕಾರಿ ಮಾಧ್ಯಮಕ್ಕೆ ಭಾರಿ ಪೆಟ್ಟು ನೀಡಿದ Google

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News