PM Modi ಆದೇಶದ ಮೇರೆಗೆ NSA Ajit Doval ಚೀನಾಗೆ ನೀಡಿದ ಸಂದೇಶ ಇದು.. ಇಲ್ಲಿದೆ ಸಂಪೂರ್ಣ ವರದಿ

ತಮ್ಮ ಮಾತುಕತೆಯ ಸಂದರ್ಭದಲ್ಲಿ ಅಜಿತ್ ಡೋಭಾಲ್ ಅವರು ಪೂರ್ವ ಲಡಾಕ್‌ನ 1597 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಇರುವ ನಾಲ್ಕು ಪಾಯಿಂಟ್ ಗಳಲ್ಲಿ  ಭಾರತೀಯ ಸೇನೆಯ ಗಸ್ತು ನಿಯೋಜಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

Last Updated : Jul 7, 2020, 11:42 AM IST
PM Modi ಆದೇಶದ ಮೇರೆಗೆ NSA Ajit Doval ಚೀನಾಗೆ ನೀಡಿದ ಸಂದೇಶ ಇದು.. ಇಲ್ಲಿದೆ ಸಂಪೂರ್ಣ ವರದಿ title=

ನವದೆಹಲಿ: ಭಾನುವಾರ ಬೆಳಗ್ಗೆ ಸುಮಾರು 8.45 ಕ್ಕೆ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರ್ವಾನೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾದುವ ಮೂಲಕ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗಾಲ್ವಾನ್ ಕಣಿವೆಯ ವೈ-ಜಂಕ್ಷನ್‌ ನ ಹಿಂಭಾಗದಲ್ಲಿರುವ ತನ್ನ ಬೇಸ್ ಕ್ಯಾಂಪ್ ಕಡೆಗೆ ತಮ್ಮ ಸೈನ್ಯವನ್ನು ಸಾಗಿಸುತ್ತಿದೆ ಎಂದು ಮಾಹಿತಿ ನೀಡಿದ್ದರು. ಅದೇ ದಿನ ಸಂಜೆ 5 ರಿಂದ 6ರವರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿದ್ದರು.

ತಮ್ಮ ಮಾತುಕತೆಯ ಸಂದರ್ಭದಲ್ಲಿ ಅಜಿತ್ ಡೋಭಾಲ್ ಅವರು ಪೂರ್ವ ಲಡಾಕ್‌ನ 1597 ಕಿ.ಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಇರುವ ನಾಲ್ಕು ಪಾಯಿಂಟ್ ಗಳಲ್ಲಿ  ಭಾರತೀಯ ಸೇನೆಯ ಗಸ್ತು ನಿಯೋಜಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.

ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಹೊಂದಿರುವ ತಜ್ಞರು ಹೇಳುವ ಪ್ರಕಾರ, "ಉಭಯ ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ನಾಲ್ಕು ಪಾಯಿಂಟ್ ಗಳಾಗಿರುವ ಗಾಲ್ವಾನ್, ಗೋಗ್ರಾ, ಹಾಟ್ ಸ್ಟ್ರಿಂಗ್ಸ್ ಹಾಗೂ ಪ್ಯಾಂಗೂಂಗ್ ತ್ಸೋ ಗಳಿಂದ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯಲು ಆರಂಭಿಸಿದೆ. ಈ ವೇಳೆ ಭಾರತೀಯ ಸೇನೆ ಕೂಡ ಗಾಲ್ವಾನ್ ನಲ್ಲಿರುವ ತನ್ನ ಬೇಸ್ ಕ್ಯಾಂಪ್ ಗೆ ಮರಳಿದೆ. ಮೊದಲು ಗೋಗ್ರಾ (ಪ್ಯಾಟ್ರೋಲಿಂಗ್ ಪಾಯಿಂಟ್ 15) ಹಾಗೂ ಹಾಟ್ ಸ್ಪ್ರಿಂಗ್ಸ್ (ಪ್ಯಾಟ್ರೋಲಿಂಗ್ ಪಾಯಿಂಟ್ 17) ನಿಂದ ಮೊದಲು ಸೈನಿಕರು ಹಿಂದಕ್ಕ ಸರಿಯಲು ಆರಂಭಿಸಿದ್ದಾರೆ. ಇದೇ ವೇಳೆ ಚೀನಾ ಸೈನಿಕರು ಕೂಡ ಪಿಂಗರ್ 4 ರಲ್ಲಿ ನಿರ್ಮಿಸಿದ್ದ ತನ್ನ ರಚನೆಗಳನ್ನು ಕೂಡ ತೆಗೆದು ಹಾಕಲು ಕ್ರಮ ಕೈಗೊಂಡಿದ್ದಾರೆ.

ಆದರೆ ಎಲ್ಲಿಯವರೆಗೆ ನಿಯೋಜಿತಗೊಂಡಿರುವ ಎಲ್ಲಾ ಚೀನಾ ಸೈನಿಕರು ಹಿಂದಕ್ಕೆ ಸರಿಯುವುದಿಲ್ಲವೋ ಅಲ್ಲಿಯವರೆಗೆ ಭಾರತೀಯ ಸೇನಾ ಜವಾನರು ಘಟನಾ ಸ್ಥಳದಲ್ಲಿಯೇ ತನ್ನ ಬಿಡಾರ ಹೂಡಲಿದ್ದಾರೆ. ಏಕೆಂದರೆ, ಈ ಹಿಂದೆಯೂ ಕೂಡ ಹಲವು ಬಾರಿ ಮೋಸ ಮಾಡಿರುವ ಚೀನಾ ಮುಂದೆ ಹೀಗೆ ಮಾಡುವುದಿಲ್ಲ ಎಂಬ ನಂಬಿಕೆ ಭಾರತಕ್ಕಿಲ್ಲ ಮತ್ತು ಯಾವುದೇ ರೀತಿಯ ದುರ್ಘಟನೆ ಅಲ್ಲಗಳೆಯಲಾಗುವುದಿಲ್ಲ ಎಂಟು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, LAC ಬಳಿ ಸೇನಾ ಜವಾನರ ಸ್ಥಳಾಂತರಕ್ಕೆ ತೆಗೆದುಕೊಳ್ಳಲಾಗಿರುವ ತಕ್ಷಣದ ಕ್ರಮಗಳಾಗಿವೆ. ಆದರೆ,ಬಿಕ್ಕಟ್ಟಿಗೆ ಕಾರಣವಾಗಿರುವ ಎಲ್ಲ ಪಾಯಿಂಟ್ ಗಳ ಮೇಲೆ ಉಭಯ ಸೇನೆಯ ಜವಾನರು ಗಸ್ತು ತಿರುಗುವ ಹಕ್ಕನ್ನು ಹೊಂದಿದ್ದಾರೆ ಮತ್ತು ಭವಿಷ್ಯದಲ್ಲಿ ಯಾವುದೇ ರೀತಿಯ ತಕರಾರು ಸೃಷ್ಟಿಯಾಗುವುದರಿಂದ ದೂರ ಉಳಿಯಲಿದ್ದಾರೆ ಎಂಬ ಮಾತಿನ ಮೇಲೆ ಡೋಭಾಲ್ ಹಾಗೂ ವಾಂಗ್ ಯಿ ಸಂದುವೆ ಒಮ್ಮತ ಮೂಡಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಂಯುಕ್ತ ಸಚಿವರ ಮಟ್ಟದ Working Mechanism for Consultation and Coordination (WMCC) ಸಮೀತಿ ಈ ನಿರ್ಣಯಗಳನ್ನು ಜಾರಿಗೊಳಿಸಲು ಶೀಘ್ರದಲ್ಲಿಯೇ ಒಂದು ಸಭೆ ನಡೆಸಲಿದೆ. ಮೂರು ವಾರಗಳ ಬಳಿಕ ಮಾತುಕತೆ ನಡೆಸಲು ಸಮಯ ನಿಗದಿಪಡಿಸಲಾಗಿದೆ.

NSA ಅಜೀತ್ ಡೋಭಾಲ್ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಷಾ ಹಾಗೂ ವಿದೇಶಾಂಗ ಸಚಿವ ಎಸ್. ಜಯಶಂಕರ್ ಜೊತೆಗಿನ ಸಮನ್ವಯದೊಂದಿಗೆ ಜೂನ್ 17ರಂದು ಎಸ್. ಆರ್. ವಾಂಗ್ ಇ, ಜೊತೆಗೆ ನಡೆಸಿರುವ ಮಾತುಕತೆಯ ವೇಳೆ ಭಾರತದ ನಿರ್ಧಾರವನ್ನು ಅವರಿಗೆ ತಿಳಿಸಿದ್ದರು. ಈ ಮಾತುಕತೆಯ ವೇಳೆ ಉಭಯ ದೇಶಗಳು ಪರಸ್ಪರ ಘರ್ಷಣೆ ಆರಂಭಿಸಿದ ಆರೋಪ ಮಾಡಿದ್ದವು.

Trending News