ವಿದ್ಯಾರ್ಥಿಗಳ ಸಹಾಯಕ್ಕಾಗಿ ಹೊಸ ಪೋರ್ಟಲ್ ಆರಂಭ

ಹೆಚ್ಚಿನ ಸಹಾಯ ಅಗತ್ಯವಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಈ ಪೋರ್ಟಲ್ ಸಹಾಯಕವಾಗಲಿದೆ.   

Last Updated : Apr 4, 2020, 03:39 PM IST
ವಿದ್ಯಾರ್ಥಿಗಳ ಸಹಾಯಕ್ಕಾಗಿ ಹೊಸ ಪೋರ್ಟಲ್ ಆರಂಭ title=

ನವದೆಹಲಿ: ಕರೋನವೈರಸ್  COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ (Lockdown) ಘೋಷಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಎಲ್ಲಾ ಕಾಲೇಜುಗಳು ತಮ್ಮ ಹಾಸ್ಟೆಲ್‌ಗಳನ್ನು ಮುಚ್ಚಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ  (AICTE)ಯು  ವಿಶೇಷ ರೀತಿಯ MHRD AICTE Covid-19 Student Helpline Portal ಅನ್ನು ಪ್ರಾರಂಭಿಸಿದೆ. ಈ ಸಹಾಯವಾಣಿ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.

ಲಾಕ್‌ಡೌನ್ ಮಧ್ಯೆ ಟ್ರೆಂಡ್ ಆಗಿದೆ ಈ App, ಆದರೂ ಬಳಕೆದಾರರು ಇದನ್ನ ಡಿಲೀಟ್ ಮಾಡ್ತಿರೋದು ಏಕೆ?

ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ https://helpline.aicte-india.org ವೆಬ್‌ಸೈಟಿಗೆ ಚಾಲನೆ ನೀಡಿದರು.  ಎಐಸಿಟಿಇ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ದೆ, ಎಐಸಿಟಿಇ ಉಪಾಧ್ಯಕ್ಷ ಸಂಸದ ಪೂನಿಯಾ, ಎಐಸಿಟಿಇ ಮುಖ್ಯ ಸಮನ್ವಯ ಅಧಿಕಾರಿ ಬುದ್ಧ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Coronavirus: ಈ ಬ್ಯಾಂಕಿನಲ್ಲಿ ಸಿಗಲಿಗೆ 5 ವಿಶೇಷ ತುರ್ತು ಸಾಲ

ಇದೇ ವೇಳೆ ಮಾತನಾಡಿದ ಸಚಿವ ರಮೇಶ್ ಪೋಖ್ರಿಯಲ್, ಹೆಚ್ಚಿನ ಸಹಾಯ ಅಗತ್ಯವಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಈ ಪೋರ್ಟಲ್ ಸಹಾಯಕವಾಗಲಿದೆ. ಇದರ ಮೂಲಕ ವಿದ್ಯಾರ್ಥಿಗಳು  ವಸತಿ, ಆಹಾರ ವಸ್ತುಗಳು, ಆನ್‌ಲೈನ್ ತರಗತಿಗಳು, ಹಾಜರಾತಿ, ಪರೀಕ್ಷೆಗಳು, ವಿದ್ಯಾರ್ಥಿವೇತನ, ಆರೋಗ್ಯ, ಸಾರಿಗೆ, ಕಿರುಕುಳ ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಲಿದೆ ಎಂದು ಮಾಹಿತಿ ನೀಡಿದರು.

ಕರೋನಾ ವೈರಸ್‌ಗೆ 'Coro Vac' ಎಂಬ ಲಸಿಕೆ ಸಿದ್ಧಪಡಿಸಿದ ಭಾರತ

ಲಾಕ್‌ಡೌನ್‌ ಸಂದರ್ಭಗಳಲ್ಲಿ 6500 ಕ್ಕೂ ಹೆಚ್ಚು ಕಾಲೇಜುಗಳು ಈಗಾಗಲೇ ವಿದ್ಯಾರ್ಥಿಗಳಿಗೆ ಅಗತ್ಯವಾದ ಬೆಂಬಲ ನೀಡಲು ಮುಂದಾಗಿವೆ ಎಂದು ಎಚ್‌ಐಡಿ ಸಚಿವರು ಮಾಹಿತಿ ನೀಡಿದರು. ಇಂತಹ ಪರಿಸ್ಥಿತಿಯಲ್ಲಿ ಈ ಪೋರ್ಟಲ್ ಮೂಲಕ ವಿದ್ಯಾರ್ಥಿಗಳನ್ನು ನೇರವಾಗಿ ಸಂಪರ್ಕಿಸಲು ಪ್ರೋತ್ಸಾಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ 6500 ಕಾಲೇಜುಗಳಂತೆ ಸ್ವಯಂಪ್ರೇರಿತ ಸಂಸ್ಥೆಗಳು, ಎನ್‌ಜಿಒಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಲೋಕೋಪಕಾರಿಗಳು ಮುಂದೆ ಬರಬೇಕು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಐಸಿಟಿಇ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ಧೆ ಮನವಿ ಮಾಡಿದರು. 
 

Trending News