ರಾಜ್ಯಸಭೆಯಲ್ಲಿ ಸದನದ ನಾಯಕರಾಗಲಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಸದನದ ನಾಯಕರಾಗಲಿದ್ದಾರೆ. ಕಳೆದ ವಾರ ಕರ್ನಾಟಕದ ಹೊಸ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಥಾವರ್‌ಚಂದ್ ಗೆಹ್ಲೋಟ್ ಅವರ ಬದಲಿಗೆ ಈ ಸ್ಥಾನವನ್ನು ನಿರ್ವಹಿಸಲಿದ್ದಾರೆ.

Written by - Zee Kannada News Desk | Last Updated : Jul 14, 2021, 05:31 PM IST
  • ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಸದನದ ನಾಯಕರಾಗಲಿದ್ದಾರೆ. ಕಳೆದ ವಾರ ಕರ್ನಾಟಕದ ಹೊಸ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಥಾವರ್‌ಚಂದ್ ಗೆಹ್ಲೋಟ್ ಅವರ ಬದಲಿಗೆ ಈ ಸ್ಥಾನವನ್ನು ನಿರ್ವಹಿಸಲಿದ್ದಾರೆ.
  • ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ರಾಜ್ಯಸಭೆಯ ಉಪನಾಯಕನಾಗಿ ಸೇವೆ ಸಲ್ಲಿಸುತ್ತಿದ್ದ 57 ವರ್ಷದ ಶ್ರೀ ಗೋಯಲ್ (Piyush Goyal) ಅವರನ್ನು ಈ ಪ್ರಮುಖ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ರಾಜ್ಯಸಭೆಯಲ್ಲಿ ಸದನದ ನಾಯಕರಾಗಲಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ title=
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ಸದನದ ನಾಯಕರಾಗಲಿದ್ದಾರೆ. ಕಳೆದ ವಾರ ಕರ್ನಾಟಕದ ಹೊಸ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಥಾವರ್‌ಚಂದ್ ಗೆಹ್ಲೋಟ್ ಅವರ ಬದಲಿಗೆ ಈ ಸ್ಥಾನವನ್ನು ನಿರ್ವಹಿಸಲಿದ್ದಾರೆ.

ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ರಾಜ್ಯಸಭೆಯ ಉಪನಾಯಕನಾಗಿ ಸೇವೆ ಸಲ್ಲಿಸುತ್ತಿದ್ದ 57 ವರ್ಷದ ಶ್ರೀ ಗೋಯಲ್ (Piyush Goyal) ಅವರನ್ನು ಈ ಪ್ರಮುಖ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಅವರು 2010 ರಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ.

ಕಳೆದ ವಾರ ಸಚಿವ ಸಂಪುಟದ ಪುನ್ರಚನೆಯಲ್ಲಿ ಗೋಯಲ್ ಅವರು ಜವಳಿ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರು, ಇದನ್ನು ಈ ಮೊದಲು  ಸ್ಮೃತಿ ಇರಾನಿ ನಿರ್ವಹಿಸುತ್ತಿದ್ದರು.  ಈಗ ಅವರುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ನಿರ್ವಹಿಸುತ್ತಿದ್ದಾರೆ. ಇನ್ನೊಂದೆಡೆಗೆ ರಾಜ್ಯಸಭಾ ಸಂಸದ ಅಶ್ವಿನಿ ವೈಷ್ಣವ್ ಅವರನ್ನು ದೇಶದ ನೂತನ ರೈಲ್ವೆ ಸಚಿವರಾಗಿ ಆಯ್ಕೆ ಮಾಡಲಾಯಿತು. ಈ ಹಿಂದೆ ಈ ಖಾತೆಯನ್ನು ಪಿಯುಶ್ ಗೋಯಲ್ ನಿಭಾಯಿಸುತ್ತಿದ್ದರು.

ಇದನ್ನೂ ಓದಿ: Oxygen Stock : 'ಆಕ್ಸಿಜನ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಭಾರತದಲ್ಲಿ ಸಾಕಷ್ಟು ಸ್ಟಾಕ್ ಇದೆ'

ಗೋಯಲ್ ಅವರು ವಾಣಿಜ್ಯ ಮತ್ತು ಉದ್ಯಮ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯಗಳನ್ನು ನಿರ್ವಹಿಸಿದ್ದಾರೆ. ಅವರ ಅಧಿಕಾರಾವಧಿಯು ಭಾರತೀಯ ರೈಲ್ವೆ 2018-19ರಲ್ಲಿ ತನ್ನ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಸಾಧಿಸಿದೆ ಎಂದು ಅವರ ಅಧಿಕೃತ ವೆಬ್‌ಸೈಟ್ ತಿಳಿಸಿದೆ. ಅವರ ತಂದೆ ವೇದ ಪ್ರಕಾಶ್ ಗೋಯಲ್ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಹಡಗು ಸಚಿವರಾಗಿದ್ದರು.

ಗೋಯಲ್ ಅವರನ್ನು ಪಕ್ಷದದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಯಲಾಗುತ್ತದೆ.ವಿಶೇಷವೆಂದರೆ, ಮಂಗಳವಾರ, ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯ ರಚನೆಯನ್ನು ಘೋಷಿಸಿದಾಗ, ಅವರನ್ನು ರಾಜ್ಯಸಭೆಯಲ್ಲಿ ಸದನದ ಮುಖಂಡರು ಆದರ್ಶಪ್ರಾಯವಾಗಿ ಸಮಿತಿಯ ಭಾಗವಾಗಿರಬೇಕು ಎಂಬ ಕಾರಣಕ್ಕೆ ಅವರನ್ನು ಸಿಸಿಪಿಎ ಸದಸ್ಯರನ್ನಾಗಿ ಮಾಡಲಾಗಿಲ್ಲ.ಅವರನ್ನು ಈಗ ಈ ಸಮಿತಿಯಲ್ಲಿ ಸೇರಿಸಲಾಗುವುದು ಎಂದು ತೋರುತ್ತದೆ.

ಇದನ್ನೂ ಓದಿ: ಬೆಂಗಳೂರಿಗೆ ಗುಡ್ ನ್ಯೂಸ್ : ಮೆಟ್ರೋ ರೈಲು 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ರಾಜ್ಯಸಭೆಯಲ್ಲಿ ಸದನದ ನಾಯಕರಾಗಿ ಅವರು ಸದನದಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಲಿದ್ದಾರೆ ಮತ್ತು ಪ್ರಧಾನಿ ಮೋದಿ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ. ಈಗ ಅವರು ಸದನದ ನಾಯಕರಾಗಿ ಹೊರಹೊಮ್ಮುತ್ತಿದ್ದಂತೆ  ಪಿಯುಶ್ ಗೋಯಲ್ ಅವರಿಗೆ ಅಭಿನಂದನೆಗಳ ಸುರಿಮಳೆ ಹರಿದು ಬಂದಿದೆ. ನಿತಿನ್ ಗಡ್ಕರಿ ಅವರಿಗೆ ಶುಭಕೋರಿದ್ದಾರೆ

36 ಹೊಸ ಮಂತ್ರಿಗಳು ಸರ್ಕಾರಕ್ಕೆ ಸೇರ್ಪಡೆಯಾದ ನಂತರ 83 ವರ್ಷದ ತವಾರ್ಚಂದ್ ಗೆಹ್ಲೋಟ್ ಅವರನ್ನು  ಕರ್ನಾಟಕದ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಅವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು ಮತ್ತು ಬಿಜೆಪಿಯ ರಾಜ್ಯಸಭಾ ನಾಯಕರಾಗಿದ್ದರು.

ಇದನ್ನೂ ಓದಿ: Oxygen Express: Corona ರೋಗಿಗಳವರೆಗೆ ಉಸಿರು ತಲುಪಿಸಲು ಮುಂದಾದ Indian Railways

ಜುಲೈ 19 ಮತ್ತು ಆಗಸ್ಟ್ 13 ರ ನಡುವೆ ಸಂಸತ್ತಿನ ಮಾನ್ಸೂನ್ ಅಧಿವೇಶನ ನಡೆಯಲಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಏಕಕಾಲದಲ್ಲಿ ಅಧಿವೇಶನಗಳನ್ನು ನಡೆಸಲಿದ್ದು, ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾಧ್ಯಮಗಳ ಕನಿಷ್ಠ ಉಪಸ್ಥಿತಿ ಇರುತ್ತದೆ. 

ಇದನ್ನು ಓದಿ-ರೂಪಾಂತರಿ ಕೊರೊನಾ ನಡುವೆಯೂ ಭಾರತಕ್ಕೆ ಬರ್ತಾರಾ ಬ್ರಿಟನ್ ಪ್ರಧಾನಿ...?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News